ಮಾಜಿ ಹೆಂಡತಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಗಂಡ: ಕೊನೆಗೂ ಜೈಲು ಕಂಬಿ ಎಣಿಸಿದ ಮೇಲೆ ಬಾಕಿ ಮೊತ್ತ ನೀಡಿದ ಆಸಾಮಿ!

ಉತ್ತರ ಪ್ರದೇಶದ ನಿವಾಸಿಯಾದ ಈ ವ್ಯಕ್ತಿ 2017 ಜನವರಿಯಲ್ಲಿ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದ. ಬಳಿಕ ಆಕೆಯ ಜೀವನ ನಿರ್ವಹಣೆಗೆ 4.75 ಲಕ್ಷ ಜೀವನಾಂಶ ನೀಡುವಂತೆ ಕೋರ್ಟ್​​ ಆದೇಶ ನೀಡಿತ್ತು. ಆದರೆ ಆತ ಕೋರ್ಟ್​ ಆದೇಶವನ್ನು ಪಾಲಿಸಿರಲಿಲ್ಲ. ನಂತರ ಕೋರ್ಟ್​ನಿಂದಲೇ ಆತನಿಗೆ ಶೋಕಾಸ್​ ನೋಟಿಸ್​ ನೀಡಲಾಗಿತ್ತು.

Latha CG | news18
Updated:March 23, 2019, 3:51 PM IST
ಮಾಜಿ ಹೆಂಡತಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಗಂಡ: ಕೊನೆಗೂ ಜೈಲು ಕಂಬಿ ಎಣಿಸಿದ ಮೇಲೆ ಬಾಕಿ ಮೊತ್ತ ನೀಡಿದ ಆಸಾಮಿ!
ಪ್ರಾತಿನಿಧಿಕ ಚಿತ್ರ
Latha CG | news18
Updated: March 23, 2019, 3:51 PM IST
ನವದೆಹಲಿ(ಮಾ.23): ಉತ್ತರಪ್ರದೇಶ ಮೂಲದ ವ್ಯಕ್ತಿಯೋರ್ವ ವಿಚ್ಛೇದನ ನೀಡಿದ್ದ ಮಾಜಿ ಹೆಂಡತಿಗೆ ಎರಡು ವರ್ಷಗಳಿಂದ ಜೀವನಾಂಶ ನೀಡದೇ ಸತ್ತಾಯಿಸುತ್ತಿದ್ದ. ಬಳಿಕ ಸಂತ್ರಸ್ತೆ ನ್ಯಾಯಕ್ಕಾಗಿ ಕೋರ್ಟ್​​ ಮೊರೆ ಹೋಗಬೇಕಾಯಿತು. ಕೋರ್ಟ್​ನಿಂದ ಎಷ್ಟೇ ಬಾರಿ ಜೀವನಾಂಶ ನೀಡಿ ಎಂದು ನೋಟಿಸ್​​ ನೀಡಿದ್ದರೂ, ಕ್ಯಾರೇ ಎಂದಿರಲಿಲ್ಲ ಆಸಾಮಿ. ನಂತರ ಪೊಲೀಸರು ಈತನನ್ನು ಬಂಧಿಸಿ ಜೈಲಿನಲ್ಲೇ ಬಾಕಿ ಜೀವನಾಂಶ ಮೊತ್ತವನ್ನು ವಸೂಲಿ ಮಾಡಿದ್ದಾರೆ. ಸುಪ್ರೀಂಕೋರ್ಟ್​ ಆದೇಶದಂತೆ ಬಂಧಿಸಿ ಜೈಲು ಕಂಬಿ ಎಣಿಸಿದ ನಂತರ ಬಾಕಿ ನೀಡಬೇಕಿದ್ದ ಜೀವನಾಂಶ ನೀಡಿದ್ದಾನೆ.

ಜನವರಿ 2017 ರಿಂದಲೂ ವಿಚ್ಛೇದ ನೀಡಿದ ಹೆಂಡತಿಗೆ ಜೀವನಾಂಶ ಪಾವತಿಸುವಂತೆ ನ್ಯಾಯಾಲಯವು ಸಾಕಷ್ಟು ಬಾರಿ ಆದೇಶ ಹೊರಡಿಸಿತ್ತು. ನಂತರ ನೋಟಿಸ್ ಕೂಡ​ ನೀಡಲಾಗಿತ್ತು. ಇದರ ಹೊರತಾಗಿಯೂ ಆ ವ್ಯಕ್ತಿ ಯಾವುದೇ ಜೀವನಾಂಶ ನೀಡದೆ ಸತಾಯಿಸಿದ್ದ. ಬಳಿಕ ಪ್ರಕರಣ ಸುಪ್ರೀಂಕೋರ್ಟ್​ ಅಂಗಳಕ್ಕೆ ತಲುಪಿದ್ದು, ಆರೋಪಿಯನ್ನು ಬಂಧಿಸುವಂತೆ​ ಆದೇಶಿಸಲಾಯ್ತು. ಸುಪ್ರೀಂಕೋರ್ಟ್ ಆದೇಶದಂತೆಯೇ​ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದರು. ಒಂದಷ್ಟು ದಿನ ಜೈಲಿನಲ್ಲಿ ಕಳೆದ ನಂತರ ಆರೋಪಿ ಪೊಲೀಸರ ಸಮ್ಮುಖದಲ್ಲೇ ಜೀವನಾಂಶ ನೀಡುವುದಾಗಿ ಚೆಕ್​ಗೆ ಸಹಿ ಹಾಕಿದ್ದಾನೆ.

ಇನ್ನು ಉತ್ತರ ಪ್ರದೇಶದ ನಿವಾಸಿಯಾದ ಈ ವ್ಯಕ್ತಿ 2017 ಜನವರಿಯಲ್ಲಿ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದ. ಬಳಿಕ ಆಕೆಯ ಜೀವನ ನಿರ್ವಹಣೆಗೆ 4.75 ಲಕ್ಷ ಜೀವನಾಂಶ ನೀಡುವಂತೆ ಕೋರ್ಟ್​​ ಆದೇಶ ನೀಡಿತ್ತು. ಆದರೆ ಆತ ಕೋರ್ಟ್​ ಆದೇಶವನ್ನು ಪಾಲಿಸಿರಲಿಲ್ಲ. ನಂತರ ಕೋರ್ಟ್​ನಿಂದಲೇ ಆತನಿಗೆ ಶೋಕಾಸ್​ ನೋಟಿಸ್​ ನೀಡಲಾಗಿತ್ತು.

ರೈಲಿನಲ್ಲಿ ಪ್ರಯಾಣಿಸುವಾಗ ಹುಷಾರ್​..! ತಲೆ ಹೊರಗೆ ಹಾಕಿ ಸಾಹಸ ಮಾಡಲು ಹೋದವನು ಯಮಲೋಕ ಸೇರಿದ..!

ಪಿಜ್ಜಾ ರೆಸ್ಟೋರೆಂಟ್​ ಫ್ರಾಂಚೈಸಿ ನಡೆಸುತ್ತಿದ್ದ ಆತನಿಗೆ ನ್ಯಾಯಾಲಯವು ಹಣ ಪಾವತಿಗೆ ದಿನಾಂಕ ನಿಗದಿ ಮಾಡಿ, ಗಡುವನ್ನು ಸಹ ನೀಡಿತ್ತು. ಮೊದಲ ಕಂತಿನ ಹಣ ಪಾವತಿಸಿ ಬಳಿಕ ಕೋರ್ಟ್​​ಗೆ ಹಾಜರಾಗುವಂತೆ 2018 ರ ಅಕ್ಟೋಬರ್​ ತಿಂಗಳಲ್ಲಿಯೂ ನ್ಯಾಯಾಲಯವು​ ಆದೇಶಿಸಿತ್ತು. ಒಂದು ವೇಳೆ ಕೋರ್ಟ್​ ಆದೇಶ ಪಾಲಿಸದಿದ್ದರೆ ಮುಂದಾಗುವ ಪರಿಣಾಮ ಎದುರಿಸುವಂತೆ ಕೂಡ ಖಡಕ್​​ ಆಗಿ ಹೇಳಿತ್ತು. ಆಗ ಮಾತ್ರ ಆತ 1 ಲಕ್ಷ ಹಣವನ್ನು ಪಾವತಿಸಿದ್ದ.

ಉಳಿದ ಹಣವನ್ನು ಪಾವತಿಸುವಂತೆ ನ್ಯಾಯಾಲಯ ಮತ್ತೆ ದಿನಾಂಕ ನಿಗದಿಪಡಿಸಿತ್ತು. ಬಳಿಕ ಕೇವಲ 35 ಸಾವಿರ ರೂ.ಹಣ ಪಾವತಿಸಿದ್ದ. ಇದಾದ ಬಳಿಕ ಆತ ಕೋರ್ಟ್​​ ವಿಚಾರಣೆಗೆ ಹಾಜರಾಗುವುದನ್ನು ನಿಲ್ಲಿಸಿದ್ದ. ಕೊನೆಗೆ ತಾಳ್ಮೆ ಕಳೆದುಕೊಂಡ ನ್ಯಾಯಮೂರ್ತಿ ಎಸ್​.ಎ.ಬಾಬ್ಡೆ ನೇತೃತ್ವದ ಪೀಠವು, ಆತನ ನಡವಳಿಕೆ ಖಂಡಿಸಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಅಲ್ಲದೇ ವಶಕ್ಕೆ ಪಡೆದು ನ್ಯಾಯಲಯಕ್ಕೆ ಹಾಜರುಪಡಿಸುಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು.
Loading...

ಕೋರ್ಟ್​ ಆದೇಶದ ಮೇರೆಗೆ ದೆಹಲಿ ಪೊಲೀಸರು ಆತನನ್ನು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯವು ಒಂದು ತಿಂಗಳ ನಂತರ ವಿಚಾರಣೆಗೆ ದಿನಾಂಕ ನಿಗದಿ ಮಾಡಿತು. ಜತೆಗೆ ಜೈಲಿಗಟ್ಟಿತ್ತು. ಜೈಲಿನಲ್ಲಿಯೇ ಇದ್ದ ಭೂಪ ಕೊನೆಗೂ ಬಾಕಿ ಉಳಿಸಿಕೊಂಡಿದ್ದ 2 ಲಕ್ಷ ರೂ. ಜೀವನಾಂಶ ಹಣವನ್ನು ಪಾವತಿಸಿದ್ದಾನೆ. ಇದೀಗ ಕೋರ್ಟ್​ ಆತನನ್ನು ಬಿಡುಗಡೆ ಮಾಡಿದೆ.

First published:March 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626