ಸಾವಿರ ಅಲ್ಲ, ಲಕ್ಷ ಅಲ್ಲ; 23 ಕೋಟಿ ರೂಪಾಯಿ ಕರೆಂಟ್​ ಬಿಲ್​..!

ಇಡೀ ಜೀವನಲ್ಲಿ ಹಣ ಸಂಪಾದಿಸಿದರೂ ನಾನು ಅಷ್ಟು ದೊಡ್ಡ ಮೊತ್ತದ ವಿದ್ಯುತ್​ ಬಿಲ್​ ಕಟ್ಟಲು ಸಾಧ್ಯವಿಲ್ಲ ಎಂದು ಅಬ್ದುಲ್​ ಚಿಂತಾಕ್ರಾಂತರಾಗಿದ್ದಾರೆ.

Latha CG | news18
Updated:January 23, 2019, 4:12 PM IST
ಸಾವಿರ ಅಲ್ಲ, ಲಕ್ಷ ಅಲ್ಲ; 23 ಕೋಟಿ ರೂಪಾಯಿ ಕರೆಂಟ್​ ಬಿಲ್​..!
ಪ್ರಾತಿನಿಧಿಕ ಚಿತ್ರ
  • News18
  • Last Updated: January 23, 2019, 4:12 PM IST
  • Share this:
ಉತ್ತರಪ್ರದೇಶ,(ಜ.23): ಸಾಮಾನ್ಯವಾಗಿ ಮನೆಗಳಿಗೆ ಬರುವ ದಿನಬಳಕೆ ವಿದ್ಯುತ್​ ​ ಬಿಲ್​ ಸಾವಿರದ ಪ್ರಮಾಣದಲ್ಲಿರುತ್ತದೆ. ಗರಿಷ್ಠ ಎಂದರೂ ಲಕ್ಷ ಎನ್ನಬಹುದೇನೋ.. ಆದರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನ ಮನೆಗೆ ಬಂದ ಕರೆಂಟ್​ ಬಿಲ್​ ಎಷ್ಟು ಗೊತ್ತೇ..? ಬರೋಬ್ಬರಿ 23 ಕೋಟಿ ರೂಪಾಯಿ. ಈ ಕರೆಂಟ್​ ಬಿಲ್​ ನೋಡಿ ವ್ಯಕ್ತಿ ಆಘಾತಕ್ಕೊಳಗಾಗಿದ್ದಾನೆ.

ಉತ್ತರ ಪ್ರದೇಶದ ಅಬ್ದುಲ್​ ಬಾಸಿಟ್​ಗೆ ಬಂದಿರುವ ಒಟ್ಟು ವಿದ್ಯುತ್​ ಬಿಲ್​ 23, 67,71,524 ರೂಪಾಯಿಗಳು. ಇಷ್ಟು ದೊಡ್ಡ ಮೊತ್ತದ ಬಿಲ್​ ನೋಡಿ ಅಬ್ದುಲ್​ ಶಾಕ್​ ಆಗಿದ್ದಾರೆ.ಇದನ್ನೂ ಓದಿ: ರಾಜ್ಯದ ಜನತೆಗೆ ವಿದ್ಯುತ್ ಶಾಕ್ : ದರ ಹೆಚ್ಚಿಸಿ ಕೆಇಆರ್​ಸಿ ಆದೇಶ

ಉತ್ತರ ಪ್ರದೇಶದ ಇಡೀ ವಿದ್ಯುತ್​ ಬಿಲ್​ ನನಗೆ ಬಂದಿರುವ ತರ ಇದೆ. ಇಡೀ ಜೀವನಲ್ಲಿ ಹಣ ಸಂಪಾದನೆ ಮಾಡಿದರೂ ನಾನು ಅಷ್ಟು ದೊಡ್ಡ ಮೊತ್ತದ ವಿದ್ಯುತ್​ ಬಿಲ್​ ಕಟ್ಟಲು ಸಾಧ್ಯವಿಲ್ಲ ಎಂದು ಅಬ್ದುಲ್​ ಚಿಂತಾಕ್ರಾಂತರಾಗಿದ್ದಾರೆ.

ಎಎನ್​ಐ ಜೊತೆ ಮಾತನಾಡಿದ ಕಾರ್ಯನಿರ್ವಾಹಕ ಎಂಜಿನಿಯರ್​ ಶದಾಬ್​ ಅಹ್ಮದ್​, ಬಿಲ್​ ಸರಿಪಡಿಸಿದ ಮೇಲೆಯೇ ಅವರು ವಿದ್ಯುತ್​ ಬಿಲ್​ ಪಾವತಿಸಬೇಕು.

ಕೆಲವೊಂದು ಬಾರಿ ಇಂತಹ ತಪ್ಪುಗಳು ಆಗುತ್ತವೆ. ಮತ್ತೊಮ್ಮೆ ಮೀಟರ್​ ರೀಡಿಂಗ್​ ಮಾಡಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
Loading...

ಇದನ್ನೂ ಓದಿ: ಮಹೀಂದ್ರಾ ಕಂಪೆನಿಯ ಹೊಸ ಕಾರಿಗೆ ಹೆಸರು ನೀಡಿದ್ರೆ 2 ಕಾರುಗಳು ಉಚಿತ..!

First published:January 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...