ರಾಯ್ ಬರೇಲಿ(ಜ. 16): ಇತ್ತೀಚೆಗೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ತನ್ನ ಗರ್ಭಿಣಿ ಹೆಂಡತಿಯನ್ನು ಅತೀ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆತ 27 ವರ್ಷದ ತನ್ನ ಗರ್ಭಿಣಿ ಹೆಂಡತಿಯನ್ನು ಕೊಂದು, ಆಕೆಯ ಮೃತದೇಹವನ್ನು ತುಂಡು-ತುಂಡಾಗಿ ಕತ್ತರಿಸಿ, ಬಳಿಕ ಹಿಟ್ಟಿನ ಗಿರಣಿಯಲ್ಲಿ ರುಬ್ಬಿ, ಸುಟ್ಟು ಹಾಕಿ ನಂತರ ಉಳಿದ ಅವಶೇಷವನ್ನು ಹೂತು ಹಾಕಿದ್ದ. ಇಂತಹ ಹೇಯ ಕೃತ್ಯ ಎಸಗಿದ್ದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಜನವರಿ 4ನೇ ತಾರೀಖಿನಂದೇ ಈ ಕೃತ್ಯ ಜರುಗಿದೆ. ಆದರೆ ಮೃತ ಗರ್ಭಿಣಿ ಊರ್ಮಿಳಾ ಅವರ ಹಿರಿಯ ಮಗಳು ಈ ಘಟನೆಯನ್ನು ತನ್ನ ತಾಯಿಯ ಅಮ್ಮನಿಗೆ ಹೇಳಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಆಕೆಯ ಮಗಳೇ ಆಗಿದ್ದಾಳೆ. ಊರ್ಮಿಳಾ ಕುಟುಂಬಸ್ಥರ ದೂರನ್ನು ಆಧರಿಸಿ ಪೊಲೀಸರು ಆರೋಪಿ ರವೀಂದ್ರ ಕುಮಾರ್ (35)ನನ್ನು ಬಂಧಿಸಿದ್ದಾರೆ. ಗರ್ಭಿಣಿ ಮಹಿಳೆಯ ಸುಟ್ಟ ಅವಶೇಷಗಳನ್ನು ಡಿಎನ್ಎ ಪ್ರೊಫೈಲಿಂಗ್ಗಾಗಿ ಲಕ್ನೋದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ
ಮೃತ ಮಹಿಳೆಯ ಕುಟುಂಬಸ್ಥರಿಂದ ದೂರು ಸ್ವೀಕರಿಸಿದ ಪೊಲೀಸರು, ಬಳಿಕ ಆರೋಪಿ ರವೀಂದ್ರ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದೀಹ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ. ಪೊಲೀಸರು ಊರ್ಮಿಳಾ ಅವರನ್ನು ಪತ್ತೆ ಹಚ್ಚಲು ಯತ್ನಿಸಿ ವಿಫಲರಾಗಿದ್ದಾರೆ. ಜನವರಿ 10ರಂದು ಊರ್ಮಿಳಾ ಸಹೋದರಿ ದೇವಿ ಅವರು ದೀಹ್ ಪೊಲೀಸ್ ಠಾಣೆಗೆ ತೆರಳಿ ರವೀಂದ್ರ ತನ್ನ ಅಕ್ಕನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ಸರ್ಕಲ್ ಆಫೀಸರ್ ವಿನೀತ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ರವೀಂದ್ರ ಕುಮಾರ್ ಜನವರಿ 4ರಂದು, ಅಂದರೆ ತನ್ನ ಹೆಂಡತಿಯನ್ನು ಕೊಲೆ ಮಾಡಿದ ದಿನವೇ, 112ಗೆ ಕರೆ ಮಾಡಿ ಊರ್ಮಿಳಾ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ಹೇಳಿದ್ದ.
ಊರ್ಮಿಳಾ 2011ರಲ್ಲಿ ರವೀಂದ್ರ ಕುಮಾರ್ನನ್ನು ಮದುವೆಯಾಗಿದ್ದಳು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿ ರವೀಂದ್ರನಿಗೆ ಗಂಡು ಮಗುವಿನ ಮೇಲೆ ಹೆಚ್ಚಿನ ವ್ಯಾಮೋಹ ಇತ್ತು. ಊರ್ಮಿಳಾ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಮತ್ತೆ ಹೆಣ್ಣು ಮಗುವೇ ಜನಿಸುತ್ತದೆ ಎಂಬ ಶಂಕೆಯಿಂದ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಮ್ಮೆಯ ಸಂದರ್ಶನ ಮಾಡಿದ್ದ ಪಾಕ್ ನಿರೂಪಕನಿಂದ ಮತ್ತೊಂದು ಪ್ರಯೋಗ; ಟ್ರೋಲ್ ಆಯ್ತು ವಿಡಿಯೋ
ರವೀಂದ್ರನ ತಂದೆ ಕರಮ್ ಚಂದ್ರ ಹಾಗೂ ಚಿಕ್ಕಪ್ಪಂದಿರಾದ ಸಂಜೀವ್ ಮತ್ತು ಬ್ರಿಜೇಶ್ ಕೂಡ ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಊರ್ಮಿಳಾ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ. ಆರೋಪಿಯನ್ನು ಸೆರೆ ಹಿಡಿಯಲು ಸ್ಟೇಷನ್ ಹೌಸ್ ಆಫೀಸರ್ ಅವರು ತಂಡವೊಂದನ್ನು ಕಳುಹಿಸಿದ್ದರು. ಆದರೆ ಆರೋಪಿ ಮನೆಯಿಂದ ಪರಾರಿಯಾಗಿದ್ದ. ಮಕ್ಕಳ ಸಹಾಯವಾಣಿ ಮೂಲಕ ಊರ್ಮಿಳಾ ಮಗಳೊಂದಿಗೆ ಮಾತನಾಡಿ, ಜನವರಿ 4ರಂದು ನಡೆದ ಘಟನೆಯ ಸಂಪೂರ್ಣ ಚಿತ್ರಣವನ್ನು ಪಡೆದುಕೊಂಡೆವು ಎಂದು ಸರ್ಕಲ್ ಆಫೀಸರ್ ತಿಳಿಸಿದ್ದಾರೆ.
ಆರೋಪಿ ರವೀಂದ್ರನನ್ನು ಬಂಧಿಸಲು 6 ತಂಡಗಳನ್ನ ರಚಿಸಿದೆವು. ಕೊನೆಗೂ ಆತ ಸೆರೆ ಸಿಕ್ಕಿದ್ದು ವಿಚಾರಣೆ ನಡೆಸಿದ್ದೇವೆ. ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. "ಕೋಪದಿಂದ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ದೇಹವನ್ನು ಹರಿತವಾದ ಆಯುಧದಿಂದ ತುಂಡು-ತುಂಡಾಗಿ ಕತ್ತರಿಸಿ, ಬಳಿಕ ಹಿಟ್ಟಿನ ಗಿರಣಿಯಲ್ಲಿ ಆ ದೇಹದ ತುಂಡುಗಳನ್ನು ರುಬ್ಬಿದ್ದೆ. ಉಳಿದ ಅವಶೇಷಗಳನ್ನು ಬೆಂಕಿಯಲ್ಲಿ ಸುಟ್ಟು. ಬೂದಿಯನ್ನು ಗೋಣಿಚೀಲದಲ್ಲಿ ಹಾಕಿ ಮನೆಯಿಂದ ಸುಮಾರು 4 ಕಿ.ಮೀ.ದೂರದಲ್ಲಿ ಪೊದೆಯೊಳಗೆ ಎಸೆದಿದ್ದೆ ಎಂದು ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.
ಸಿನಿಮಾ ನಟರು ಹೀರೋಗಳಲ್ಲ, ಸೈನಿಕನೇ ನಿಜವಾದ ಹೀರೋ; ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ