ಮಾನವೀಯತೆ ಮರೆತ ಮನುಜ, ಮಗನ ಶವ ಹೊತ್ತುಕೊಂಡು 25 ಕಿಲೋ ಮೀಟರ್ ಸಾಗಿದ ಅಪ್ಪ, ಅಮ್ಮ!

ಯುಪಿಯ ಸಂಗಮ್ ನಗರದಲ್ಲಿ ನಡೆದ ಘಟನೆಯೊಂದು ಮಾನವೀಯತೆ ಎಲ್ಲಿದೆ ಎಂಬ ಪ್ರಶ್ನೆ ಒಹುಟ್ಟಿಕೊಳ್ಳುವಂತೆ ಮಾಡಿದೆ. ಆಸ್ಪತ್ರೆ ಆಡಳಿತವು ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ ಪರಿಣಾಮ ತಂದೆಯೊಬ್ಬ ತನ್ನ 14 ವರ್ಷದ ಮಗುವಿನ ಮೃತದೇಹವನ್ನು ಹೊತ್ತು 25 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿದ್ದಾನೆ. ಮಗನ ಶವ ಸಾಗಾಟಕ್ಕೆ ಕಾರು ಬಾಡಿಗೆಗೆ ಪಡೆಯಲು ತಂದೆಯ ಬಳಿ ಸಾಕಷ್ಟು ಹಣವಿರಲಿಲ್ಲ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ

  • Share this:
ಲಕ್ನೋ(ಆ.03): ಉತ್ತರ ಪ್ರದೇಶದ (Uttar Pradesh) ಸಂಗಮ್ ನಗರ ಎಂದೇ ಹೆಸರಾಗಿರುವ ಪ್ರಯಾಗ್‌ರಾಜ್‌ನಲ್ಲಿ (Prayagraj) ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ತಂದೆ ತನ್ನ 14 ವರ್ಷದ ಮಗನ ಶವವನ್ನು ಹೆಗಲ ಮೇಲೆ ಹೊತ್ತಿರುವ ಈ ಚಿತ್ರ ಯುಪಿಯ ಆರೋಗ್ಯ ವ್ಯವಸ್ಥೆ ಎಷ್ಟು ಕಳಪೆ ಎಂಬುವುದನ್ನು ಬಹಿರಂಗಪಡಿಸುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ ಆಸ್ಪತ್ರೆ ಆಡಳಿತ ಅಧಿಕಾರಿಗಳು ಅದೆಷ್ಟು ಅಮಾನವೀಯರೆಂದರೆ, ಅಸಹಾಯಕ ತಂದೆಯೊಬ್ಬ ತನ್ನ ಮಗನ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ 25 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ್ದಾನೆ. ಈ ವೇಳೆ ದಾರಿಹೋಕರು ಪ್ರೇಕ್ಷಕರಾಗಿಯೇ ಉಳಿದಿದ್ದಾರೆ.

ಸಂಗಮ್ ನಗರದ ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಮಂಗಳವಾರ ಅಸಹಾಯಕ ತಂದೆ ತನ್ನ ಮಗನ ಚಿಕಿತ್ಸೆಗಾಗಿ ತಲುಪಿದ್ದರು, ಆದರೆ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ. ಹಲವಾರು ಬಾರಿ ಮನವಿ ಮಾಡಿದರೂ ಆಸ್ಪತ್ರೆ ಆಡಳಿತದಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡದಿದ್ದಾಗ ಬಡ ಹಾಗೂ ಅಸಹಾಯಕ ತಂದೆಗೆ ಮಗನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗದೆ ಬೇರೆ ದಾರಿಯೇ ಇರಲಿಲ್ಲ.

ಇದನ್ನೂ ಓದಿ: Unity In Humanity: ಝೊಮಾಟೊಗೆ ಸಹಾಯ ಮಾಡಿದ ಸ್ವಿಗ್ಗಿ; ಅಪರೂಪದ ಸ್ನೇಹ ಇಲ್ಲಿದೆ ನೋಡಿ

ಮಗ ಸತ್ತ ನಂತರ ಹಣದ ಕೊರತೆಯಿಂದ ಅಸಹಾಯಕನಾದ ತಂದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತು ಊರಿಗೆ ಹೊರಟಿದ್ದಾರೆ. ಆಶ್ಚರ್ಯವೆಂದರೆ ಈ ಅಸಹಾಯಕ ತಂದೆ ಮಗನ ಶವವನ್ನು ಎಸ್‌ಆರ್‌ಎನ್ ಆಸ್ಪತ್ರೆಯಿಂದ ಕರ್ಚನಾ ಪೊಲೀಸ್ ಠಾಣೆ ವ್ಯಾಪ್ತಿಯ ದಿಹಾ ಗ್ರಾಮಕ್ಕೆ ಸುಮಾರು 25 ಕಿ.ಮೀ. ಮಗನ ಶವವನ್ನು ಹೊತ್ತು ಸಾಗಿದ್ದಾರೆ, ಇನ್ನು ತಂದೆ ಸುಸ್ತಾದರೆ, ತಾಯಿ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಇದನ್ನೂ ಓದಿ: ಕೊರೋನಾ ಆತಂಕಕ್ಕೆ ಜನರಲ್ಲಿ ಮಾನವೀಯತೆಯೇ ಮಾಯ..!

ಜನರಲ್ಲಿ ಮಾನವೀಯತೆ ನಾಶವಾಗುತ್ತಿದೆ ಎಂಬುದಕ್ಕೆ ಈ ಘಟನೆಯೂ ನಿದರ್ಶನ. ಏಕೆಂದರೆ ಅಸಹಾಯಕ ತಂದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತು ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಈ ಅಸಹಾಯಕ ಕುಟುಂಬಕ್ಕೆ ದಾರಿಯಲ್ಲಿ ಯಾವುದೇ ರೀತಿಯ ಆಸರೆ ಸಿಗಲಿಲ್ಲ. ಈ ಅಸಹಾಯಕ ತಂದೆ-ತಾಯಿಯನ್ನು ಜನಸಮೂಹ ನೋಡುತ್ತಲೇ ಇತ್ತು, ಆದರೆ ಮಗನ ಶವವನ್ನು ಮನೆಗೆ ಕೊಂಡೊಯ್ಯಲು ಯಾರೂ ಚಿಂತಿಸಲಿಲ್ಲ.
Published by:Precilla Olivia Dias
First published: