Crime: ತನ್ನಿಷ್ಟದ ಪಕ್ಷಕ್ಕೆ ವೋಟ್ ಮಾಡದ ಪತ್ನಿಗೆ ಈತ ಮಾಡಿದ್ದೇನು? ವಿಚಿತ್ರ ಗಂಡನ ಪಾಲಿಟಿಕ್ಸ್ ಲವ್

ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿಗಿಂತಲೂ ರಾಜಕೀಯ ಪಕ್ಷದ ಮೇಲೆ ವಿಪರೀತ ಆಸಕ್ತಿ. ಹೆಂಡತಿ ಇಲ್ಲವೆಂದರೂ ಪರವಾಗಿಲ್ಲ, ಆತನ ನೆಚ್ಚಿನ ಪಕ್ಷ ಚುನಾವಣೆಯಲ್ಲಿ ಗೆಲ್ಲಬೇಕು, ಬರೀ ಅದರದ್ದೇ ಜಪ. ಅದಕ್ಕಾಗಿ ಏನು ಮಾಡುವುದಕ್ಕೂ ಸಿದ್ಧ ಎನ್ನುವ ಮೆಂಟಾಲಿಟಿ. ಈತನ ಈ ಹುಚ್ಚುತನಕ್ಕೆ ಪಾಪ ಬಡ ಪತ್ನಿ ಹೈರಾಣಾಗಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಕೀಯ (Politics) ಎಂದರೆ ವಿಪರೀತ ಆಸಕ್ತಿ ಬೆಳೆಸಿಕೊಂಡವರಿದ್ದಾರೆ, ವೋಟ್ (Vote) ಮಾಡೋಕೆ ಹೋಗೋದೆ ಕಷ್ಟ ಎನ್ನುವವರೂ ಇದ್ದಾರೆ. ಇದು ಜನರ ಮನಸ್ಥಿತಿಗೆ ಬಿಟ್ಟದ್ದು. ಆದರೆ ಯಾವುದೇ ಸ್ಥಾನ ಮಾನವಿಲ್ಲದಿದ್ದರೂ ಪಕ್ಷಕ್ಕಾಗಿ (Party) ವಿಪರೀತ ಆಸಕ್ತಿ ಬೆಳೆಸಿಕೊಂಡು ಅದಕ್ಕಾಗಿಯೇ ದುಡಿಯುವವರೂ ಬಹಳಷ್ಟು ಜನರಿದ್ದಾರೆ. ಅವರಿಗೆ ಚುನಾವಣೆ, ಮತದಾನ, ಸೋಲು ಗೆಲುವು (Victory) ಬಹಳಷ್ಟು ಮುಖ್ಯ. ಒಂದು ರೀತಿಯ ಹುಚ್ಚು. ಇದೇ ರೀತಿಯ ಮನಸ್ಥಿತಿಯ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿಗಿಂತಲೂ ರಾಜಕೀಯ ಪಕ್ಷದ ಮೇಲೆ ವಿಪರೀತ ಆಸಕ್ತಿ. ಹೆಂಡತಿ (Wife) ಇಲ್ಲವೆಂದರೂ ಪರವಾಗಿಲ್ಲ, ಆತನ ನೆಚ್ಚಿನ ಪಕ್ಷ ಚುನಾವಣೆಯಲ್ಲಿ ಗೆಲ್ಲಬೇಕು, ಬರೀ ಅದರದ್ದೇ ಜಪ. ಅದಕ್ಕಾಗಿ ಏನು ಮಾಡುವುದಕ್ಕೂ ಸಿದ್ಧ ಎನ್ನುವ ಮೆಂಟಾಲಿಟಿ. ಈತನ ಈ ಹುಚ್ಚುತನಕ್ಕೆ ಪಾಪ ಬಡ ಪತ್ನಿ ಹೈರಾಣಾಗಿದ್ದಾಳೆ.

ರಾಜ್ಯ ಚುನಾವಣೆಯಲ್ಲಿ ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ತನ್ನ ಹೆಂಡತಿಯನ್ನು ಥಳಿಸಿ ಮನೆಯಿಂದ ಹೊರಹಾಕಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ NCW ಉತ್ತರ ಪ್ರದೇಶ ಪೊಲೀಸರನ್ನು ಕೇಳಿದೆ.

FIR ದಾಖಲಿಸುವಂತೆ ಕೋರಿಕೆ

ಪುರುಷನ ವಿರುದ್ಧದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಲು ರಾಷ್ಟ್ರೀಯ ಮಹಿಳಾ ಆಯೋಗವೂ ಕೋರಿದೆ.

ಪತ್ನಿಗೆ ಥಳಿಸಿ ಮನೆಯಿಂದ ಹೊರಗಟ್ಟಿದ ಪತಿ

ಎನ್‌ಸಿಡಬ್ಲ್ಯು ಹೇಳಿಕೆಯೊಂದರಲ್ಲಿ, ಉತ್ತರ ಪ್ರದೇಶದ ಬರೇಲಿಯ ಮುಸ್ಲಿಂ ಮಹಿಳೆಯನ್ನು ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಆಕೆಯ ಪತಿ ಥಳಿಸಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಹಲವಾರು ಮಾಧ್ಯಮ ವರದಿಗಳು ಬಂದಿವೆ ಎಂದು ಎನ್‌ಸಿಡಬ್ಲ್ಯೂ ಹೇಳಿದೆ. ಇತ್ತೀಚಿನ ವಿಧಾನಸಭೆ ಚುನಾವಣೆ.

ಡಿವೋರ್ಸ್ ಕೊಡೋದಾಗಿ ಬೆದರಿಕೆ

ಮಹಿಳೆಯ ಪತಿ ಕೂಡ ಆಕೆಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಶಾಸಕ ಸ್ಥಾನ ಸೋತರೂ 2ನೇ ಬಾರಿಗೆ Uttarakhand CM ಆಗಿ ಪುಷ್ಕರ್ ಸಿಂಗ್ ಧಾಮಿ ಆಯ್ಕೆ..!

ಈ ವಿಷಯವನ್ನು ಅರಿತುಕೊಂಡ ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಹಿಳೆಯ ಪತಿ ಮತ್ತು ಅತ್ತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಎನ್‌ಸಿಡಬ್ಲ್ಯೂ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ.

ಇದನ್ನೂ ಓದಿ: Punjab Cabinet: ಆಪ್ ಸರ್ಕಾರದ 10 ಸಚಿವರಲ್ಲಿ ನಾಲ್ವರು ದಲಿತರು!

ಮಹಿಳೆಯರ ವಿರುದ್ಧ ದೌರ್ಜನ್ಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ತಂದೆ, ಸಹೋದರ, ಅಜ್ಜ, ಅಂಕಲ್ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆಯೊಂದು ಸ್ಕೂಲ್ ಸೆಮಿನಾರ್ ಮೂಲಕ ಬಯಲಾಗಿತ್ತು, ಇತ್ತೀಚೆಗೆ ಕೇರಳದಲ್ಲಿ ತಂದೆಯೇ ಅಪ್ರಾಪ್ತ ಮಗಳ ಗರ್ಭಕ್ಕೆ ಕಾರಣವಾಗಿದ್ದು ಜನರಲ್ಲಿ ಭೀತಿ ಹುಟ್ಟಿಸಿತ್ತು. ಇಂಥಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಮನೆಯೊಳಗೆಯೇ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ.

ಇನ್ನು ಪತ್ನಿಗೆ ಮನೆಯೊಳಗೆ ಕಿರುಕುಳ ನೀಡುವುದು, ದೌರ್ಜನ್ಯ ಎಸಗುವ ಘಟನೆ ಬಹಳಷ್ಟು ಸಲ ಸುದ್ದಿಯಾಗದೇ ಹೋಗುತ್ತದೆ. ಆದರೆ ಕ್ಷುಲ್ಲಕ ಕಾರಣಗಳಿಗಾಗಿ ಪತ್ನಿಯರ ಮೇಲೆ ದೌರ್ಜನ್ಯ ಮಾಡುವ ಘಟನೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಪತಿಯೊಬ್ಬ ಪತ್ನಿ ಮಟನ್ ಸಾರು ಮಾಡದ್ದಕ್ಕೆ 100ಕ್ಕೆ ಕರೆ ಮಾಡಿ ತಾನೇ ಪೊಲೀಸರ ಅತಿಥಿಯಾಗಿದ್ದ.
Published by:Divya D
First published: