ಮದುವೆಗೆ ತಡವಾಗಿ ಬಂದ ವರನಿಗೆ ಕಾದಿತ್ತು ಶಾಕ್​​..! ವಧುವಿನ ಕೊರಳಲ್ಲಿ ತಾಳಿ ನೋಡಿ ಕಂಗಾಲು

ಕಾದು ಕಾದು ಸುಸ್ತಾದ ವಧು ಮದುವೆ ನಿಶ್ಚಯವಾಗಿದ್ದ ಹುಡುಗನನ್ನು ತಿರಸ್ಕರಿಸಿ, ಕೊನೆಗೆ ಅದೇ ಮಂಟಪದಲ್ಲಿ, ಅದೇ ಮುಹೂರ್ತದಲ್ಲಿ ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ.

@businesstoday.in

@businesstoday.in

  • Share this:
ಲಕ್ನೋ(ಡಿ.08): ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತೂ ಕೂಡ ಇದೆ. ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಕಾರಣಾಂತರಗಳಿಂದ ಮದುವೆಗಳು ನಿಂತು ಹೋಗುತ್ತವೆ. ಕೊನೆ ಘಳಿಗೆಯಲ್ಲಿ ಮದುವೆ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಇಂತಹ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ನೋಡಿರುತ್ತೇವೆ. ಆದರೆ, ನಿಜಜೀವನದಲ್ಲಿಯೂ ಇಂತಹ ಘಟನೆಗಳು ನಡೆಯುತ್ತವೆ. ಉತ್ತರ ಪ್ರದೇಶದಲ್ಲಿ ಮದುಮಗ ತಡವಾಗಿ ಮದುವೆಗೆ ಬಂದಿದ್ದಕ್ಕೆ ವಧು ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ. ಇದು ವಿಚಿತ್ರವಾದರೂ ಸತ್ಯ. 

ಉತ್ತರ ಪ್ರದೇಶದ ಬಿಜ್ನೋರ್​​​ನ ಮದುವೆ ಮಂಟಪದಲ್ಲಿ ಮದುವೆ ಸಿದ್ದತೆ ನಡೆದಿತ್ತು. ಮದುವೆ ಮಂಟಪ ಜನರಿಂದ ತುಂಬಿ ತುಳುಕುತ್ತಿತ್ತು. ಗಂಡು-ಹೆಣ್ಣಿನ ಕಡೆಯವರು ಮದುವೆಗೆ ಬಂದ ನೆಂಟರಿಷ್ಟರನ್ನು ಸ್ವಾಗತ ಮಾಡುತ್ತಿದ್ದರು. ಮದುವೆ ಹೆಣ್ಣು ಕೂಡ ತಯಾರಾಗಿ ಗೆಳತಿಯರ ಜೊತೆ ಇದ್ದಳು.

ಬೆಂಗಳೂರಿಗೆ ಬಂತು ಈಜಿಪ್ಟ್‌ ಈರುಳ್ಳಿ; ಏನಿದರ ವಿಶೇಷತೆ? ಕೆ.ಜಿ. ಗೆ ಎಷ್ಟು ರೂ? ಇಲ್ಲಿದೆ ಮಾಹಿತಿ..!

ಆದರೆ ಇಷ್ಟೆಲ್ಲಾ ಸಂಭ್ರಮದ ನಡುವೆ ಮದುವೆ ಗಂಡು ಮಾತ್ರ ಮಂಟಪದಲ್ಲಿ ಇರಲಿಲ್ಲ. ಅವರ ಕಡೆಯವರು ಇರಲಿಲ್ಲ. ತುಂಬಾ ಸಮಯ ಕಾದರೂ ಸಹ ವರನ ಕಡೆಯವರು ಮದುವೆ ಮಂಟಪಕ್ಕೆ ಬರಲೇ ಇಲ್ಲ. ಕಾದು ಕಾದು ಸುಸ್ತಾದ ವಧು ಮದುವೆ ನಿಶ್ಚಯವಾಗಿದ್ದ ಹುಡುಗನನ್ನು ತಿರಸ್ಕರಿಸಿ, ಕೊನೆಗೆ ಅದೇ ಮಂಟಪದಲ್ಲಿ, ಅದೇ ಮುಹೂರ್ತದಲ್ಲಿ ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ.

ವರನ ಕಡೆಯಯವರು ಹುಡುಗಿ ಮನೆಯವರಿಗೆ ಹೆಚ್ಚಿನ ವರದಕ್ಷಿಣೆ ಕೇಳಿದ್ದರು ಎಂದು ತಿಳಿದು ಬಂದಿದೆ. ಗಂಡಿನ ಕಡೆಯವರುಯ ಆರ್ಥಿಕವಾಗಿ ಸದೃಢರಾಗಿದ್ದರು. ಹೀಗಾಗಿ ಹೆಣ್ಣಿನ ಮನೆಯವರ ಬಳಿ ವರದಕ್ಷಿಣೆಯಾಗಿ ಬೈಕ್​ ಮತ್ತು ಹಣ ಕೇಳಿದ್ದರು. ಆದರೆ ನಾವು ಅಷ್ಟು ಹಣ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ.

ಇಷ್ಟೇ ಅಲ್ಲದೇ ಮುಹೂರ್ತದ ವೇಳೆ ಮೀರುತ್ತಿದ್ದರೂ ಮದುವೆ ಮಂಟಪಕ್ಕೆ ವರನ ಕಡೆಯವರು ಆಗಮಿಸಿರಲಿಲ್ಲ. ಇದು ಅವರ ದರ್ಪವನ್ನು ತೋರಿಸುತ್ತಿತ್ತು. ಇದರಿಂದ ನಮಗೆ ಯಾಕೋ ಈ ಸಂಬಂಧ ಬೇಡ ಎನಿಸಿತು ಎಂದು ವಧುವಿನ ಪೋಷಕರು ಹೇಳಿದ್ಧಾರೆ.

13 ಅಲ್ಲ ಬಿಜೆಪಿ 15 ಕ್ಷೇತ್ರದಲ್ಲೂ ಗೆಲ್ಲುತ್ತೇ; ಸಿಎಂ ಬಿಎಸ್​ವೈ ಹೇಳಿಕೆಗೆ ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್
First published: