ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗುತ್ತಲೇ ಇದೆ. ಮಹಿಳೆ ಮತ್ತು ಯುವತಿಯರನ್ನು ಪ್ರೀತಿ ಹಾಗೂ ಮದುವೆ ಬಲೆಯಲ್ಲಿ ಸಿಲುಕಿಸಿಕೊಂಡು ನಂತರ ಮತಾಂತರಗೊಳಿಸಲು ಸಂಚು ರೂಪಿಸುವುದೇ ಲವ್ ಜಿಹಾದ್ ಆಗಿದೆ. ಅದೆಷ್ಟೋ ಮಂದಿ ಅರಿವಿಲ್ಲದೇ ಲವ್ ಜಿಹಾದ್ಗೆ ಸಿಲುಕಿ ಮತಾಂತರಗೊಂಡಿದ್ದಾರೆ. ಇದೀಗ ನೋಯ್ಡಾದಲ್ಲಿ ವ್ಯಕ್ತಿಯೋರ್ವ ತನ್ನ ಹೆಸರನ್ನು ಹಿಂದೂ ಅವರಂತೆ ಬದಲಿಸಿಕೊಂಡು ಯುವತಿಯನ್ನು ತನ್ನ ಪ್ರೀತಿ ಪಾಷಕ್ಕೆ ಸಿಲುಕಿಸಿಕೊಂಡು ಮದುವೆಯಾಗಲು ಮುಂದಾಗಿದ್ದ. ಆದರೆ ಆದ್ಯಾಗೋ ಮದುವೆ ಹಿಂದಿನ ದಿನ ಆರೋಪಿ ಸಿಕ್ಕಿಬಿದ್ದಿದ್ದು, ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಹೆಸರು, ಧರ್ಮ ಬದಲಿಸಿಕೊಂಡು ಯುವತಿ ಜೊತೆಗೆ ಪ್ರೀತಿ ನಾಟಕ
ಹೌದು, ವ್ಯಕ್ತಿಯೋರ್ವ ತನ್ನ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಂಡು ಯುವತಿ ಜೊತೆಗೆ ಪ್ರೀತಿ ನಾಟಕವಾಡಿ ನಂತರ ಮದುವೆಯಾಗಿ ವಂಚಿಸಲು ಯತ್ನಿಸಿದ್ದನು. ಆದರೆ ಮದುವೆ ಹಿಂದಿನ ದಿನ ಆರೋಪಿ ಸಿಕ್ಕಿಬಿದ್ದಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹಸೀನ್ ಸೈಫಿ ಎಂದು ಗುರುತಿಸಲಾಗಿದ್ದು, ಆಶಿಶ್ ಠಾಕೂರ್ ಎಂಬ ಹೆಸರಿನಲ್ಲಿ ತನ್ನನ್ನು ಯುವತಿಗೆ ಪರಿಚಯಿಸಿಕೊಂಡಿದ್ದ. ಆದರೆ ಭಾನುವಾರ ಆತ ಸುಳ್ಳು ಹೇಳಿರುವ ವಿಚಾರ ತಿಳಿದು ಬಂದಿದ್ದು, ಸೋಮವಾರ ನಡೆಯಬೇಕಿದ್ದ ಮದುವೆ ನಿಂತು ಹೋಗಿದೆ.
ಸಂತ್ರಸ್ತ ಯುವತಿ ಉತ್ತರಾಖಂಡದ ನಿವಾಸಿಯಾಗಿದ್ದು, ಆಕೆ ನೀಡಿದ ದೂರಿನ ಆಧಾರದ ಮೇಲೆ ಬಲವಂತದ ಧಾರ್ಮಿಕ ಮತಾಂತರ, ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಡಿಗೆ ಫ್ಲಾಟ್ನಲ್ಲಿ ಯುವತಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪಿ
ಗ್ರೇಟರ್ ನೋಯ್ಡಾ ವ್ಯಾಪ್ತಿಯ ದಾದ್ರಿಯಲ್ಲಿ ವಾಸವಾಗಿದ್ದ ಆರೋಪಿ ಈ ವೆಳೆ ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದನು. ನಂತರ ಮಹಿಳೆ ಕೆಲಸ ಕಳೆದುಕೊಂಡ ಸಮಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ ಆಕೆಯೊಂದಿ ಹತ್ತಿರವಾದನು. ಬಳಿಕ ದಾದ್ರಿಯ ಎಸ್ಕಾರ್ಟ್ ಕಾಲೋನಿಯಲ್ಲಿ ಬಾಡಿಗೆ ಫ್ಲಾಟ್ಗೆ ಯುವತಿಯೊಂದಿಗೆ ತೆರಳಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೇ ಯುವತಿಯ ಅಶ್ಲೀಲ ವೀಡಿಯೊಗಳನ್ನು ಸಹ ಮಾಡಿ, ನಂತರ ಮದುವೆಯಾಗುವಂತೆ ಒತ್ತಡ ಹೇರಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮಗ ಹಸೀನ್ ಸೈಫಿ ಹುಡುಕುತ್ತಾ ಅಪಾರ್ಟ್ಮೆಂಟ್ಗೆ ಹೋದ ತಂದೆ
ಮದುವೆಗೆ ಒಂದು ದಿನವಿದ್ದಾಗ ಭಾನುವಾರ ಹಸೀನ್ ಗುರುತನ್ನು ಮಹಿಳೆ ಪತ್ತೆಹಚ್ಚಿದ್ದಾರೆ. ಆರೋಪಿ ತಂದೆ ಶಕೀಲ್ ಸೈಫಿ, ಮಗ ಹಸೀನ್ ಸೈಫಿ ಅನ್ನು ಹುಡುಕುತ್ತಾ ತಮ್ಮ ಅಪಾರ್ಟ್ಮೆಂಟ್ ಬಳಿ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದೇ ಇದ್ದ ಕಾರಣ ಅಕ್ಕ-ಪಕ್ಕದ ಮನೆಯವರ ಬಳಿ ವಿಚಾರಿಸಿದ್ದಾರೆ. ಆಗ ನೆರೆಹೊರೆಯವರು ಇಲ್ಲಿ ವಾಸಿಸುತ್ತಿರುವ ವ್ಯಕ್ತಿ ಆಶಿಶ್, ಸೈಫಿಗೆ ಹಸೀನ್ ಅಲ್ಲ ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ತಿಳಿದು, ವಂಚನೆಗೊಳಗಾಗುತ್ತಿದ್ದ ಯುವತಿ, ಹಸೀನ್ ಸೈಫಿಯನ್ನು ಮದುವೆಯಾಗಲು ನಿರಾಕರಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಾಜ್ಯದಲ್ಲೂ ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚಿಸಲು ಚಿಂತನೆ
ಮತ್ತೊಂದೆಡೆ ರಾಜ್ಯದಲ್ಲಿ ಕೂಡ ಲವ್ ಜಿಹಾದ್ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ಲವ್ ಜಿಹಾದ್ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳ ಲಾಗುವುದು’ ಎಂದು ಆರಗ ಜ್ಞಾನೇಂದ್ರ ಅವರು ಕೂಡ ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ