Uttar Pradesh| ಮಥುರಾ-ವೃಂದಾವನ್ ವ್ಯಾಪ್ತಿಯ 22 ವಾರ್ಡ್‌ಗಳಲ್ಲಿ ಮದ್ಯ, ಮಾಂಸ ನಿಷೇಧ!

ಜನ್ಮಾಷ್ಟಮಿಯ ದಿನದಂದು ಮುಖ್ಯಮಂತ್ರಿ ಮಾಡಿದ ಘೋಷಣೆಗೆ ಅನುಸಾರವಾಗಿ, ಶ್ರೀ ಕೃಷ್ಣ ಜನ್ಮಭೂಮಿಯ ಸುತ್ತಲಿನ 22 ವಾರ್ಡ್‌ಗಳನ್ನು ಒಳಗೊಂಡ ಪ್ರದೇಶಗಳನ್ನು ತೀರ್ಥ ಯಾತ್ರಾಸ್ಥಳವೆಂದು ಘೋಷಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮಥುರಾದಲ್ಲಿ ಯೋಗಿ ಆದಿತ್ಯನಾಥ್.

ಮಥುರಾದಲ್ಲಿ ಯೋಗಿ ಆದಿತ್ಯನಾಥ್.

 • Share this:
  ಮಥುರಾ (ಸೆಪ್ಟೆಂಬರ್ 11); ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮಥುರಾ-ವೃಂದಾವನ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ 22 ವಾರ್ಡ್‌ ಗಳನ್ನು ಒಳಗೊಂಡ 10 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ‘ಪವಿತ್ರ ತೀರ್ಥಯಾತ್ರೆಯ ಸ್ಥಳ’ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸಾಹಾರಿ ಆಹಾರ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆಗಸ್ಟ್ 30 ರಂದು ಕೃಷ್ಣ ಜನ್ಮಾಷ್ಟಮಿಯ ದಿನ ಸಿಎಂ ಆದಿತ್ಯನಾಥ್‌, ತಮ್ಮ ಸರ್ಕಾರವು ಮಥುರಾದ ಸಂತರು ಮತ್ತು ಜನರ ಜನಪ್ರಿಯ ಬೇಡಿಕೆಯನ್ನು ಪರಿಗಣಿಸಿ ಕೃಷ್ಣ ಜನ್ಮಭೂಮಿ ಪ್ರದೇಶ ಮತ್ತು ಸುತ್ತಮುತ್ತ ಮದ್ಯ ಮತ್ತು ಮಾಂಸಹಾರಿ ಆಹಾರ ಮಾರಾಟ ಮಾಡುವುದನ್ನು ನಿಷೇಧಿಸುವುದಾಗಿ ಘೋಷಿಸಿದ್ದರು.

  ಜಿಲ್ಲಾಡಳಿತಕ್ಕೆ ಕೂಡಾ ಮಥುರಾದ ಏಳು ಹಿಂದೂ ತೀರ್ಥಕ್ಷೇತ್ರಗಳ ಸುತ್ತಮುತ್ತ ಮಾಂಸ ಮತ್ತು ಮದ್ಯವನ್ನು ನಿಷೇಧಿಸುವ ಹಾಗೆ ಕೆಲಸ ಮಾಡುವಂತೆ ಸಿಎಂ ಕೇಳಿಕೊಂಡಿದ್ದರು. ಈ ತೀರ್ಥಕ್ಷೇತ್ರಗಳ ಬಳಿ ಮದ್ಯ ಮತ್ತು ಮಾಂಸದ ವ್ಯಾಪಾರದಲ್ಲಿ ತೊಡಗಿರುವವರನ್ನು ಸ್ಥಳಾಂತರಿಸುವ ಮತ್ತು ಪುನರ್ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿದ್ದರು.

  "ಜನ್ಮಾಷ್ಟಮಿಯ ದಿನದಂದು ಮುಖ್ಯಮಂತ್ರಿ ಮಾಡಿದ ಘೋಷಣೆಗೆ ಅನುಸಾರವಾಗಿ, ಶ್ರೀ ಕೃಷ್ಣ ಜನ್ಮಭೂಮಿಯ ಸುತ್ತಲಿನ 22 ವಾರ್ಡ್‌ಗಳನ್ನು ಒಳಗೊಂಡ ಪ್ರದೇಶಗಳನ್ನು ತೀರ್ಥ ಯಾತ್ರಾಸ್ಥಳವೆಂದು ಘೋಷಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಪರಿಣಾಮವಾಗಿ, ಈ ಅಧಿಸೂಚಿತ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ವ್ಯಾಪಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ" ಎಂದು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಚಾಹಲ್ ಹೇಳಿದ್ದಾರೆ.

  ಇದನ್ನೂ ಓದಿ: ನಿಮ್ಮ ಗ್ರಾಹಕರ ವ್ಯಾಕ್ಸಿನೇಷನ್ ಸ್ಥಿತಿಯನ್ನು ತಿಳಿಯಿರಿ ಎಂಬ ಹೊಸ API ಪ್ರಾರಂಭಿಸಿದ COWIN: ಅದರ ಕೆಲಸ ಹೇಗೆ?

  ಈ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳನ್ನು ಶೀಘ್ರದಲ್ಲೇ ಮುಚ್ಚಲಾಗುವುದು ಮತ್ತು ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

  ಉತ್ತರ ಪ್ರದೇಶ ಧಾರ್ಮಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ, "ಮಥುರಾ-ವೃಂದಾವನವು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಆದ್ದರಿಂದ ಇದನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಯಾತ್ರಿಕರು ಇಲ್ಲಿ ಭೇಟಿ ಮಾಡುತ್ತಾರೆ. ಮಥುರಾ-ವೃಂದಾವನ ಐತಿಹಾಸಿಕವಾಗಿ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವದ್ದಾಗಿದೆ" ಎಂದು ಹೇಳಲಾಗಿದೆ.

  ಇದನ್ನೂ ಓದಿ: Corona Vaccine| ಲಸಿಕೆ ಪಡೆಯದ ಜನರು ಕೋವಿಡ್​ನಿಂದ ಸಾಯುವ ಸಾಧ್ಯತೆ 11 ಪಟ್ಟು ಹೆಚ್ಚು: ಆತಂಕ ಮೂಡಿಸಿದ CDC ಅಧ್ಯಯನ..!

  ಮಥುರಾ-ವೃಂದಾವನ ಪ್ರದೇಶದಲ್ಲಿ ಸುಮಾರು 10 ಚದರ ಕಿಮೀ ಪ್ರದೇಶವನ್ನು ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ ಎಂದು ಧಾರ್ಮಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ
  Published by:MAshok Kumar
  First published: