ಚಿನ್ಮಯಾನಂದರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಗೆ ಜಾಮೀನು

ಸ್ವಾಮಿ ಚಿನ್ಮಯಾನಂದರ ಒಡೆತನದ ಶಹಜಾನ್​ಪುರದ ಸ್ವಾಮಿ ಸುಖದೇವಾನಂದ್ ಕಾನೂನು ಕಾಲೇಜಿನಲ್ಲಿ ಈಕೆ ಕಾನೂನು ವಿದ್ಯಾರ್ಥಿನಿಯಾಗಿದ್ದಾರೆ.

news18
Updated:December 4, 2019, 6:22 PM IST
ಚಿನ್ಮಯಾನಂದರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಗೆ ಜಾಮೀನು
ಸ್ವಾಮಿ ಚಿನ್ಮಯಾನಂದ
  • News18
  • Last Updated: December 4, 2019, 6:22 PM IST
  • Share this:
ನವದೆಹಲಿ(ಡಿ. 04): ಸುಲಿಗೆ ಮತ್ತು ಬ್ಲ್ಯಾಕ್​ಮೇಲ್ ಆರೋಪದ ಮೇಲೆ ಎರಡು ತಿಂಗಳ ಹಿಂದೆ ಬಂಧಿತರಾಗಿದ್ದ ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿ ಜಾಮೀನು ಪಡೆದು ಬಿಡುಗೆಯಾಗಿದ್ಧಾರೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಈಕೆಗೆ ಬೇಲ್ ನೀಡಿ ಆದೇಶ ಹೊರಡಿಸಿದೆ. ವಿಶೇಷ ತನಿಖಾ ತಂಡವು ಸೆಪ್ಟೆಂಬರ್ ತಿಂಗಳಲ್ಲಿ ಈಕೆಯನ್ನು ಬಂಧಿಸಿತ್ತು.

ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ವಿರುದ್ಧ ಈ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪ ದಾಖಲಿಸಿದ್ದರು. ಆ ಬಳಿಕ ಸುಲಿಗೆ ಪ್ರಕರಣದಲ್ಲಿ ಪೊಲೀಸರು ಈಕೆಯನ್ನೇ ಬಂಧಿಸಿದ್ದರು. ಸ್ವಾಮಿ ಚಿನ್ಮಯಾನಂದರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಈಕೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಮರಣದಂಡನೆ ಬದಲು ಸಿಂಗಾಪುರ ಮಾದರಿಯಲ್ಲಿ ಶಿಕ್ಷೆಯಾಗಲಿ: ಪವನ್ ಕಲ್ಯಾಣ್

ಸ್ವಾಮಿ ಚಿನ್ಮಯಾನಂದರ ಒಡೆತನದ ಶಹಜಾನ್​ಪುರದ ಸ್ವಾಮಿ ಸುಖದೇವಾನಂದ್ ಕಾನೂನು ಕಾಲೇಜಿನಲ್ಲಿ ಈಕೆ ಕಾನೂನು ವಿದ್ಯಾರ್ಥಿನಿಯಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ