ಲಕ್ನೋ(ಜೂ.08): ಆನ್‌ಲೈನ್ ಗೇಮ್ (Online Game) ಎಂಬ ಭೂತ ಬೆನ್ನುಹತ್ತಿದರೆ ಮುಗಿಯಿತು. ಹಿಂದಿನ ಕಾಲದಂತೆ ಇರುವ ಒಂದು ಗೇಮ್ (Game) ಆಡುವ ಜಮಾನ ಇದಲ್ಲ. ಇಂಟರ್ನೆಟ್ ಇಲ್ಲದೆ ಆಟವೇ ಇಲ್ಲ. ನೆಟ್ ಆನ್ ಮಾಡಿಕೊಂಡು ಆನ್ಲೈನ್ನಲ್ಲಿ ಲೈವ್ ಆಗಿ ಆಟ ಆಡುತ್ತಾರೆ. ಇವುಗಳಲ್ಲಿ ಪಬ್ಜೀ ಫೇಮಸ್. ಪಬ್‌ಜಿ (PUBG) ಅಭಿಮಾನಿಗಳು ಅಪಾರ. ಯುವಕ ಯುವತಿಯರೆನ್ನದೆ ಎಲ್ಲರೂ ಈ ಗೇಮ್ ಆಡುತ್ತಾರೆ. ಆದರೆ ಈ ಗೇಮ್ ತರುವ ಅವಾಂತರಗಳು ಒಂದೆರಡಲ್ಲ. ಈಗಾಗಲೇ ನಾವು ಬಹಳಷ್ಟು ಪಬ್ಜೀ ಗೇಮ್ ಸಾವಿನ ಪ್ರಕರಣಗಳನ್ನು (Death case) ಕೇಳಿರುತ್ತೇವೆ. ಈಗ ಅವುಗಳ ಸಾಲಿಗೆ ಇನ್ನೊಂದು ಘಟನೆ ಸೇರಿಕೊಂಡಿದೆ. ಆನ್‌ಲೈನ್ ವಿಡಿಯೋ ಗೇಮ್ ಆಡದಂತೆ ತನ್ನ ತಾಯಿ ತಡೆದಿದ್ದಕ್ಕೆ 16 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸ್ (Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕ ಆಟ ಆಡುವ ಚಟ ಹೊಂದಿದ್ದ
“ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ತನಿಖೆ ನಡೆಸಲಾಯಿತು. ತನಿಖೆಯ ವೇಳೆ 16 ವರ್ಷದ ಮಗ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿರುವುದು ಬೆಳಕಿಗೆ ಬಂದಿದೆ. PUBG ಆಟವಾಡುವುದನ್ನು ನಿಲ್ಲಿಸಿದ ನಂತರ ಅಪ್ರಾಪ್ತ ಬಾಲಕ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೂರ್ವ ಲಕ್ನೋದ ಎಡಿಸಿಪಿ ಖಾಸಿಮ್ ಅಬಿದಿ ಮಂಗಳವಾರ ಹೇಳಿದ್ದಾರೆ.
ತಂದೆಯ ಪಿಸ್ತೂಲ್‌ನಿಂದ ಅಮ್ಮನ ಶೂಟ್ ಮಾಡಿದ
“ಪ್ರಾಥಮಿಕ ತನಿಖೆಯಲ್ಲಿ ಅವನು ಆಟಕ್ಕೆ ವ್ಯಸನಿಯಾಗಿದ್ದನು. ಅವನ ತಾಯಿ ಅವನನ್ನು ಆಟವಾಡದಂತೆ ತಡೆಯುತ್ತಿದ್ದಳು, ಇದರಿಂದಾಗಿ ಅವನು ತನ್ನ ತಂದೆಯ ಪಿಸ್ತೂಲ್‌ನಿಂದ ಈ ಘಟನೆಯನ್ನು ಎಸಗಿದ್ದಾನೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಆತ ಅಪರಾಧ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುಳ್ಳುಕಥೆ ಹೇಳಿ ತಪ್ಪಿಸಲು ಯತ್ನ
"ಯಾವುದೋ ಎಲೆಕ್ಟ್ರಿಷಿಯನ್ ಬಗ್ಗೆ ನಕಲಿ ಕಥೆಯನ್ನು ಹೇಳುವ ಮೂಲಕ" ತನಿಖೆಯ ಸಮಯದಲ್ಲಿ ಬಾಲಕ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಎಡಿಸಿಪಿ ತಿಳಿಸಿದ್ದಾರೆ. "ನಾವು ಹುಡುಗನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: PUBG New State: ಹೊಸ ರೂಪದಲ್ಲಿ ಭಾರತಕ್ಕೆ ಮತ್ತೆ ಕಾಲಿಟ್ಟ PUBG..! ಬಳಕೆದಾರರ ಸಂಖ್ಯೆ ಏರಿಸುವ ಪ್ಲಾನ್ ಹಾಕಿದೆಯಾ ಕಂಪನಿ?
ಮಾರ್ಚ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಮುಂಬೈನ ಥಾಣೆ ನಿವಾಸಿಯೊಬ್ಬರು PUBG ಆಟ ಆಡುವಾಗ ದ್ವೇಷದ ಕಾರಣಕ್ಕಾಗಿ ಮೂವರು ಸ್ನೇಹಿತರು ಚಾಕುವಿನಿಂದ ಇರಿದು ಕೊಂದರು. ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.
ಚಾಕುವಿನಿಂದ ಇರಿದು ಕೊಲೆ
ಮೃತ ಸಾಹಿಲ್ ಜಾಧವ್ ಥಾಣೆ ನಗರದ ವರ್ತಕ್ ನಗರದ ನಿವಾಸಿಯಾಗಿದ್ದು, PUBG ಆಡುವಾಗ ಜಗಳವಾಡಿದ ನಂತರ ಅವರ ಸ್ನೇಹಿತರು ಪ್ರಣವ್ ಮಾಲಿ ಮತ್ತು ಇತರ ಇಬ್ಬರು ಅಪ್ರಾಪ್ತರು ಚಾಕುವಿನಿಂದ ಇರಿದಿದ್ದಾರೆ.
ಇದನ್ನೂ ಓದಿ: PUBG: ಇವರೇ ನೋಡಿ ವಿಶ್ವದ ಟಾಪ್ 10 ಪಬ್‌ಜಿ ಆಟಗಾರರು!
ಮದ್ಯದ ಅಮಲಿನಲ್ಲಿ ಮೂವರು ಆರೋಪಿಗಳು ಸಾಹಿಲ್‌ನನ್ನು ಆತನ ಮನೆಯ ಬಳಿ ಹಿಡಿದು ಪಬ್‌ಜಿ ಆಡುತ್ತಿದ್ದಾಗ ದ್ವೇಷದ ನಂತರ ಚಾಕುವಿನಿಂದ ಇರಿದಿದ್ದಾರೆ ಎಂದು ವರ್ತಕ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಸಾಹಿಲ್‌ಗೆ 10 ಕ್ಕೂ ಹೆಚ್ಚು ಬಾರಿ ಇರಿದಿದ್ದು, ಬಲಿಪಶು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ANI)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ