ನವದೆಹಲಿ (ಜು.22): ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಉತ್ತರ ಪ್ರದೇಶದ ಪತ್ರಕರ್ತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ, ಸಿಸಿಟಿವಿ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ವಿಕ್ರಂ ಜೋಶಿ ಮೃತ ಪತ್ರಕರ್ತ. ಇವರು ಸೋಮವಾರ ರಾತ್ರಿ ಘಜಿಯಾಬಾದ್‌ನಲ್ಲಿ ಸಹೋದರಿ ಮನೆಯಿಂದ ತನ್ನ ಇಬ್ಬರು ಮಕ್ಕಳ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಐವರ ಗುಂಪು ಪತ್ರಕರ್ತನ ಮೇಲೆ ಹಲ್ಲೆ ನಡೆಸಿತ್ತು. ವಿಕ್ರಂ ಜೋಶಿಯನ್ನು ಕಾರಿನತ್ತ ಎಳೆದುಕೊಂಡು ಹೋದ ದುಷ್ಕರ್ಮಿಗಳು ಆತನ ಮಕ್ಕಳೆದುರೇ ಗುಂಡು ಹಾರಿಸಿದ್ದರು.
ಆತನ ಹೆಣ್ಣುಮಕ್ಕಳಿಬ್ಬರೂ ಸಹಾಯಕ್ಕಾಗಿ ಕಿರುಚಾಡಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಹಾಕಿ, ತಮ್ಮ ಅಪ್ಪನನ್ನು ಕಾಪಾಡುವಂತೆ ಅವರು ಗೋಗರೆಯುತ್ತಿದ್ದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಅಪರಿಚಿತರೊಬ್ಬರು ವಿಕ್ರಂ ಜೋಶಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ.
ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರು ಕೂಡ ಪತ್ರಕರ್ತ ವಿಕ್ರಂ ಜೋಶಿ ಕುಟುಂಬಕ್ಕೆ ಪರಿಚಯವಿದ್ದವರೇ ಆಗಿದ್ದಾರೆ ಎನ್ನಲಾಗಿದೆ. ಇನ್ನು, ಕೊಲೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
#ResignKeralaCM because
Sad news coming in from #Ghaziabad #UP. A #Journalist Vikram Joshi has been shot. He has been rushed to hospital and condition is stated to be critical. He had given a complain about something two days ago at the Vijay Nagar police station. pic.twitter.com/dwkTAT2hh5
— Arham Jamal (@JamalFEM96) July 21, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ