• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • HIV: ಹಲವು ರೋಗಿಗಳಿಗೆ ಒಂದೇ ಸಿರಿಂಜ್​ ಬಳಕೆ, ವೈದ್ಯನ ಎಡವಟ್ಟಿನಿಂದ ಬಾಲಕಿಗೆ ಹೆಚ್​ಐವಿ ಪಾಸಿಟಿವ್​!

HIV: ಹಲವು ರೋಗಿಗಳಿಗೆ ಒಂದೇ ಸಿರಿಂಜ್​ ಬಳಕೆ, ವೈದ್ಯನ ಎಡವಟ್ಟಿನಿಂದ ಬಾಲಕಿಗೆ ಹೆಚ್​ಐವಿ ಪಾಸಿಟಿವ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲವು ರೋಗಿಗಳಿಗೆ ಬಳಸಿದ್ದ ಸಿರಿಂಜ್ ​ಅನ್ನು ವೈದ್ಯ ಬಾಲಕಿಗೂ ಬಳಸಿದ್ದರಿಂದ ಎಚ್​ಐವಿ ಸೋಂಕು ತಗುಲಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ತಪ್ಪಿತಸ್ಥ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Uttar Pradesh, India
 • Share this:

ಲಕ್ನೋ: ವೈದ್ಯರನ್ನು (Doctor) ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ, ಇದರ ಅರ್ಥ ವೈದ್ಯನೆಂದರೆ ದೇವರಿಗೆ ಸಮಾನ ಎಂದು ಭಾವಿಸಲಾಗುತ್ತದೆ. ಆದರೆ ಇಲ್ಲೊಬ್ಬ ವೈದ್ಯ ಮಾಡಿದ ಎಡವಟ್ಟಿನಿಂದ ಬಾಲಕಿಯೊಬ್ಬಳು ಹೆಚ್​ಐವಿ (HIV) ಸೋಂಕಿಗೆ ತುತ್ತಾಗಿದ್ದಾಳೆ. ವೈದ್ಯ ಹಲವು ರೋಗಿಗಳಿಗೆ ಬಳಸಿದ್ದ ಸಿರಿಂಜ್ ​ಅನ್ನು ಬಾಲಕಿಗೂ ಬಳಸಿದ್ದರಿಂದ ಎಚ್​ಐವಿ ಸೋಂಕು ತಗುಲಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ವೈದ್ಯರ ಅಜಾಗರೂಕತೆಯಿಂದ ಬಾಲಕಿಗೆ ಹೆಚ್​ಐವಿ ಪಾಸಿಟಿವ್ (HIV positive​ ಬಂದಿರುವುದರ ವರದಿಗಳ ಕುರಿತು ಇಟಾಹ್ ನಲ್ಲಿರುವ ರಾಣಿ ಅವಂತಿ ಬಾಯಿ ಲೋಧಿ ಸರ್ಕಾರಿ ವೈದ್ಯಕೀಯ ಕಾಲೇಜಿನ (Medical College) ಪ್ರಾಂಶುಪಾಲರಿಗೆ ವಿವರಣೆ ಕೇಳಲಾಗಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ (Deputy Chief Minister Brajesh Pathak)​ ಹೇಳಿದ್ದಾರೆ.


ತಮ್ಮ ಬಾಲಕಿಗೆ ಅಲ್ಲದೆ, ಒಂದೇ ಸಿರಿಂಜ್‌ನಿಂದ ಹಲವಾರು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ ಹೆಚ್‌ಐವಿ ಪಾಸಿಟಿವ್ ಪತ್ತೆಯಾದ ಬೆನ್ನಲ್ಲೆ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯಿಂದ ಮಗುವನ್ನು ಬಲವಂತವಾಗಿ ಹೊರ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.


ಕ್ರಮದ ಭರವಸೆ ನೀಡಿದ ಉಪ ಮುಖ್ಯಮಂತ್ರಿ


ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಇಟಾಹ್‌ನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸಿರಿಂಜ್‌ನಿಂದ ಹಲವಾರು ರೋಗಿಗಳಿಗೆ ಚುಚ್ಚುಮದ್ದು ನೀಡಿದಲ್ಲದೆ, ಮಗುವಿನ ಹೆಚ್‌ಐವಿ ಪಾಸಿಟಿವ್ ವರದಿ ಬಂದ ಕೂಡಲೆ ಹೊರ ಹಾಕಿರುವುದರ ಬಗ್ಗೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಯಾವುದೇ ವೈದ್ಯರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


ತನಿಖೆಗೆ ಆದೇಶಿಸಿದ ಜಿಲ್ಲಾಧಿಕಾರಿ


ಪೋಷಕರು ಹಾಗೂ ಸಂಬಂಧಿಕರ ದೂರಿನ ನಂತರ ಘಟನೆಯ ಕುರಿತು ತನಿಖೆಗೆ ನಡೆಸಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ದೂರು ಪಡೆದ ನಂತರ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.


ಘಟನೆ ತಮ್ಮ ಗಮನಕ್ಕೆ ಬಂದಿದೆ , ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ, ತನಿಖೆ ಮುಗಿದ ನಂತರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಇಟಾಹ್ ಸಿಎಂಒ ಉಮೇಶ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ.


ಇದನ್ನೂ ಓದಿ:Successful Treatment: ಕ್ಯಾನ್ಸರ್ ಮತ್ತು HIV ಪಾಸಿಟಿವ್ ಎರಡನ್ನೂ ಗೆದ್ದು ಪವಾಡ ಸೃಷ್ಟಿಸಿದ ವ್ಯಕ್ತಿ!


ಹೆಚ್ಐವಿ ಏಡ್ಸ್ ಎಂದರೇನು?


ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್, ಏಡ್ಸ್‌ಗೆ ಕಾರಣವಾಗುವ ಒಂದು ರೀತಿಯ ವೈರಸ್. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತದೆ. ಹೆಚ್ಐವಿ ವೈರಸ್ ದೇಹದ ಮೇಲೆ ದಾಳಿ ಮಾಡುತ್ತದೆ. ಅನೇಕ ಕಾರಣದಿಂದ ನಿಮ್ಮನ್ನು ಸೋಂಕಿಗೆ ತುತ್ತಾಗಿಸಬಹುದು. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಸೋಂಕುಗಳು ಮತ್ತು ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.


ಒಬ್ಬ ವ್ಯಕ್ತಿಯು ಒಮ್ಮೆ ಹೆಚ್​ಐವಿ ಸೋಂಕಿಗೆ ಒಳಗಾದರೆ ಇಡೀ ಜೀವನ ಅದರಿಂದ ರಕ್ಷಣೆ ಪಡೆಯಲು ಹೋರಾಡಬೇಕಾಗುತ್ತದೆ. HIV ಮಾನವರ ಮೇಲೆ ಪ್ರತಿರಕ್ಷಣಾ ವ್ಯವಸ್ಥೆಯ ಬಿಳಿ ರಕ್ತ ಕಣಗಳಿಗೆ ಸೋಂಕು ತಗುತ್ತದೆ. ಇದು CD4 ಕೋಶಗಳನ್ನು ನಾಶ ಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿ ಸೋಂಕನ್ನು ತಡೆಯಲು ಸಾಧ್ಯವಾಗಲ್ಲ.HIV ಯ ಆರಂಭದ ಲಕ್ಷಣಗಳು


ಜ್ವರ ರೋಗ ಲಕ್ಷಣ ಕಂಡು ಬರುತ್ತದೆ. ಇದು ನಿಧಾನವಾಗಿ ಟಿ-ಕೋಶಗಳನ್ನು ನಾಶಪಡಿಸುತ್ತದೆ. ಟಿ-ಕೋಶಗಳು ತುಂಬಾ ಕಡಿಮೆಯಾದರೆ ಕಾಯಿಲೆ ಉಂಟಾಗುತ್ತದೆ. ತ್ವರಿತ ತೂಕ ನಷ್ಟ, ಅತ್ಯಂತ ದಣಿದ ಭಾವನೆ, ಬಾಯಿ ಮತ್ತು ಜನನಾಂಗದ ಪ್ರದೇಶದಲ್ಲಿ ಹುಣ್ಣು, ಜ್ವರ, ರಾತ್ರಿ ಬೆವರುವಿಕೆ ಮತ್ತು ಚರ್ಮದ ಬಣ್ಣ ಬದಲಾಗುತ್ತದೆ.


ಏಡ್ಸ್ ರೋಗ ಲಕ್ಷಣ ಎದುರಿಸಲು ಕೆಲವು ನೈಸರ್ಗಿಕ ಪರಿಹಾರಗಳು


ಡಾ. ಸ್ಮಿತಾ ನರಮ್ ಪ್ರಕಾರ, ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂಟರಿಂದ ಹತ್ತು ತುಳಸಿ ಎಲೆ ತಿನ್ನುವುದು ಹೆಚ್‌ಐವಿಯಿಂದ ಉಂಟಾಗುವ ನೋವಿನಿಂದ ಮುಕ್ತಿ ಪಡೆಯಬಹುದು. ಖರ್ಜೂರ, ಎರಡು ಬಾದಾಮಿ ಸೇರಿ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಸೇವಿಸಬೇಕೆಂದು ಮಾಹಿತಿ ನೀಡಿದ್ದಾರೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು