ಉತ್ತರಪ್ರದೇಶ ಧರ್ಮಾಂಧತೆಯ ಕೇಂದ್ರವಾಗುತ್ತಿದೆ; 104 ಮಾಜಿ IAS ಅಧಿಕಾರಿಗಳಿಂದ ಯೋಗಿ ಆದಿತ್ಯನಾಥ್​ಗೆ ಪತ್ರ

ಇತ್ತೀಚೆಗೆ ರಾಜ್ಯದಲ್ಲಿ ‘ಲವ್ ಜಿಹಾದ್’ ಎನ್ನುವ ಅಸಾಂವಿಧಾನಿಕ ಪದವನ್ನು ಬಳಸಿ ಅಮಾಯಕರನ್ನು ಅದರ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಈ ಕಾನೂನನ್ನು ಹಿಂದೂ ಸಂಘಟನೆಗಳು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿದೆ. ಈ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಈ ಕುರಿತು ತಲೆ ಕೆಡೆಸಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ.

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

  • Share this:
    ನವ ದೆಹಲಿ (ಡಿಸೆಂಬರ್​ 30); ಯೋಗಿ ಆದಿತ್ಯನಾಥ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಕಾರಣಗಳಿಂದಾಗಿ ಉತ್ತರಪ್ರದೇಶ ಪ್ರತಿದಿನ ಸುದ್ದಿಯಾಗುತ್ತಲೇ ಇದೆ. ಹಲವರ ವಿರೋಧದ ನಡುವೆಯೂ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಲವ್​ ಜಿಹಾದ್ ವಿರುದ್ಧ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಈ ಕಾಯ್ದೆ ಜಾರಿಯಾಗುತ್ತಿದ್ದಂತೆ ಉತ್ತರಪ್ರದೇಶದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಹಲವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಹೀಗಾಗಿ ಇದು ಇಸ್ಲಾಂ ಧರ್ಮದವರನ್ನು ಗುರಿಯಾಗಿಸಿಕೊಂಡು ಜಾರಿಯಾಗಿರುವ ಕಾಯ್ದೆ ಎಂದೇ ಹಲವು ಪ್ರಗತಿಪರರು ಆರೋಪಿಸುತ್ತಿದ್ದಾರೆ. ಈ ನಡುವೆ "ಉತ್ತರ ಪ್ರದೇಶ ಸರ್ಕಾರದ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆಯು ರಾಜ್ಯವನ್ನು, ದ್ವೇಷ ರಾಜಕೀಯ, ವಿಭಜನೆ, ಧರ್ಮಾಂಧತೆಯ ಕೇಂದ್ರಬಿಂದುವಾಗಿ ಪರಿವರ್ತನೆಗೊಳಿಸಿದೆ” ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸೇರಿದಂತೆ 104 ಮಾಜಿ ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ. ಈ ಸುದ್ದಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

    ಈ ವಿವಾದಾತ್ಮಕ ಕಾಯ್ದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಮಾಜಿ ಐಎಎಸ್ ಅಧಿಕಾರಿಗಳು, "ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ರಾಜಕಾರಣಿಗಳು ಸಂವಿಧಾನದ ಬಗ್ಗೆ ಅರಿವುಮೂಡಿಸಿಕೊಳ್ಳುವ ಅಗತ್ಯವಿದೆ" ಎಂದಿದ್ದಾರೆ.

    "ಒಂದು ಕಾಲದಲ್ಲಿ ಗಂಗಾ-ಯಮುನಾ ನಾಗರಿಕತೆಯ ತೊಟ್ಟಿಲಾಗಿದ್ದ ಉತ್ತರಪ್ರದೇಶ, ಈಗ ರಾಜಕೀಯ ದ್ವೇಷ, ವಿಭಜನೆ, ಧರ್ಮಾಂಧತೆಯ ಕೇಂದ್ರವಾಗಿದೆ. ರಾಜ್ಯಾಡಳಿತ ಕೋಮು ವಿಷವನ್ನು ಕಕ್ಕುತ್ತಿದೆ. ಉತ್ತರಪ್ರದೇಶದಾದ್ಯಂತ ಯುವ ಭಾರತೀಯರ ಮೇಲೆ ನಿಮ್ಮ ಆಡಳಿತ ಹೀನಾಯವಾಗಿ ದೌರ್ಜನ್ಯ ನಡೆಸಿದೆ. ಅಮಾಯಕ ದಂಪತಿಯನ್ನು ದಾಳಿಕೋರರು ವಿಚಾರಣೆ ನಡೆಸಿದಾಗ ಹಾಗೂ ಕಿರುಕುಳ ನೀಡಿದಾಗ ಮೂಕ ಪ್ರೇಕ್ಷಕರಾಗಿದ್ದ ಪೊಲೀಸರು ಕ್ಷಮೆಗೆ ಅರ್ಹರಲ್ಲ" ಎಂದು ಮಾಜಿ ಐಎಎಸ್ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ರಾಜ್ಯದಲ್ಲಿ ‘ಲವ್ ಜಿಹಾದ್’ ಎನ್ನುವ ಅಸಾಂವಿಧಾನಿಕ ಪದವನ್ನು ಬಳಸಿ ಅಮಾಯಕರನ್ನು ಅದರ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಈ ಕಾನೂನನ್ನು ಹಿಂದೂ ಸಂಘಟನೆಗಳು ಸ್ವೇಚ್ಚೆಯಾಗಿ ಬಳಸಿಕೊಳ್ಳುತ್ತಿದೆ. ಈ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಈ ಕುರಿತು ತಲೆ ಕೆಡೆಸಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ.

    ಇದನ್ನೂ ಓದಿ : Republic Day 2021; ಕೋವಿಡ್​ ಕಾರಣದಿಂದಾಗಿ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಕೇಂದ್ರ ಸರ್ಕಾರ

    ಆದರೆ, ಅಲಹಾಬಾದ್ ಹೈಕೋರ್ಟ್‌ ಸೇರಿದಂತೆ ಇತರೆ ನ್ಯಾಯಾಲಯಗಳು ಈ ಕಾನೂನನ್ನು ವಿಮರ್ಶಿಸಿವೆ. ಯಾವುದೆ ಒಬ್ಬ ವಯಸ್ಕ ಯುವತಿ ತನ್ನ ಇಚ್ಚೆಗೆ ಅನುಗುಣವಾಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ.

    ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಸೇರಿದಂತೆ ನಾಲ್ವರು ಮಾಜಿ ನ್ಯಾಯಾಧೀಶರು ಈ ಸುಗ್ರೀವಾಜ್ಞೆಯನ್ನು ಟೀಕಿಸಿದ್ದಾರೆ.
    Published by:MAshok Kumar
    First published: