UP Election: ನೋಯ್ಡಾದಲ್ಲಿ ಇಂದು ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಿರುವ ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶದಲ್ಲಿ ಮೊದಲೆರಡು ಹಂತಗಳ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಪ್ರಿಯಾಂಕಾ ಗಾಂಧಿ ಕೂಡ ಮನೆ ಮನೆ ಪ್ರಚಾರ ಆರಂಭಿಸಿರುವುದು ಕುತೂಹಲಕಾರಿಯಾಗಿದೆ.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

  • Share this:
ನವದೆಹಲಿ(ಜ. 31): ಮುಂದಿನ‌ ತಿಂಗಳು ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Election) ಕಾಂಗ್ರೆಸ್ ಪಕ್ಷವು ಈಗಾಗಲೇ ಯುವ ಪ್ರಣಾಳಿಕೆ (Yuva Goshana) ಬಿಡುಗಡೆ ಮಾಡಿದೆ. ಈ ಬಾರಿ ಶೇಕಡಾ 40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲಾಗುವುದು ಎಂದು ಘೋಷಿಸಿ ಅದೇ ರೀತಿ ಟಿಕೆಟ್ ನೀಡುತ್ತಿದೆ. ಈಗ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ‌ (Utter Pradesh Congress In Charge and AICC General Secretary Priyanka Gandhi) ಅವರು ಇಂದು ನೋಯ್ಡಾದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ.

ಪಶ್ಚಿಮ ಯೂಪಿಯಲ್ಲಿ ಪ್ರಿಯಾಂಕಾ ಗಾಂಧಿ

ಫೆಬ್ರವರಿ 10ರಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ದೆಹಲಿಯ ಹೊರಭಾಗದಲ್ಲಿರುವ ನೋಯ್ಡಾದಲ್ಲೂ ಅಂದೇ ಮತದಾನವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಿಯಾಂಕಾ ಗಾಂಧಿ ಅವರು ಮನೆ ಮನೆ ಪ್ರಚಾರ ಮಾಡಲಿದ್ದಾರೆ. ಫೆ. 14ರಂದು ಎರಡನೇ ಹಂತದ ಮತದಾನ ಆಗಲಿದೆ. ಈ ಎರಡೂ ಹಂತಗಳು ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆಯಲಿದ್ದು ಮೊದಲೆರಡು ಹಂತಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಪ್ರಿಯಾಂಕಾ ಗಾಂಧಿ ಕೂಡ ಮನೆ ಮನೆ ಪ್ರಚಾರ ಆರಂಭಿಸಿರುವುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: UP Assembly Election: ಇಂದು ಉ. ಪ್ರ. ಚುನಾವಣೆಯ ವರ್ಚ್ಯುಯಲ್ ರ್‍ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಶೇ. 40ರಷ್ಟು ಮಹಿಳಾ ಪ್ರಾತಿನಿಧ್ಯ

ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದು ಸದ್ಯ ಪ್ರಿಯಾಂಕಾ ಗಾಂಧಿ ಸಂಪೂರ್ಣವಾಗಿ ಉತ್ತರ ಪ್ರದೇಶದ ಕಡೆಗೇ ಗಮನ ಹರಿಸಿದ್ದಾರೆ. ಇತ್ತಿಚೆಗೆ ಲಕ್ನೋದಲ್ಲಿ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡುತ್ತಾ 'ಕಾಂಗ್ರೆಸ್ ಪಕ್ಷ ದೇಶಕ್ಕೆ ಮೊದಲ ಮಹಿಳಾ ಪ್ರಧಾನ ಮಂತ್ರಿಯನ್ನು (ಇಂದಿರಾ ಗಾಂಧಿ) ನೀಡಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸುಚೇತಾ ಕೃಪಲಾನಿ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿದ್ದರು. 'ಮುಂದುವರೆದವು' ಎನಿಸಿಕೊಂಡ ದೇಶಗಳು‌ ಕೂಡ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ ನೀಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿತ್ತು ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಈಗ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶೇಕಡಾ 40ರಷ್ಟು ಪ್ರಾತಿನಿಧ್ಯವನ್ನು ನೀಡುತ್ತಿದೆ. ಮಹಿಳೆಯರ ಸಬಲೀಕರಣವು ಕಾಗದಕ್ಕೆ ಸೀಮಿತವಾಗಿರಬಾರದು. ಯಾವಾಗ ಮಹಿಳೆಯರು ನಿಜವಾಗಿಯೂ ರಾಜಕೀಯದ ಭಾಗವಾಗುತ್ತಾರೋ ಆಗ ಮಹಿಳಾ ಪರ ಕಾರ್ಯಕ್ರಮಗಳನ್ನು ವಾಸ್ತವವಾಗಿ ಕೂಡ ಜಾರಿಗೊಳಿಸಬಹುದಾದ ವಾತಾವರಣ ನಿರ್ಮಾಣ ಆಗುತ್ತದೆ' ಎಂದು ಹೇಳಿದ್ದರು.

ಇದನ್ನೂ ಓದಿ: Morning Digest: ಇಂದಿನಿಂದ ಬಜೆಟ್ ಅಧಿವೇಶನ, ಕಡಿಮೆಯಾದ ಚಿನ್ನದ ಬೆಲೆ, ಬೆಳಗಿನ ಟಾಪ್ ನ್ಯೂಸ್​ಗಳು

ಇತರೆ ಪಕ್ಷಗಳಿಗೆ ಸವಾಲಾಗಿರುವ ಕಾಂಗ್ರೆಸ್

ಹೀಗೆ ಮಹಿಳಾ ಅಸ್ತ್ರ ಪ್ರಯೋಗದ ಮೂಲಕ ಇಲ್ಲಿನ ಇತರೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಸಮಾಜವಾದಿ ಪಕ್ಷ ಹಾಗೂ ಬಹುಜನ‌ ಸಮಾಜ ಪಕ್ಷಗಳಿಗೆ ಕಾಂಗ್ರೆಸ್ ಹೊಸ ಸವಾಲನ್ನು ಒಡ್ಡಿದೆ. ಇದಲ್ಲದೆ ಈ ಎಲ್ಲಾ ಪಕ್ಷಗಳಿಗೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿತ್ತು. ಜೊತೆಗೆ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕೂಡ ಘೋಷಿಸಿತ್ತು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ.‌ ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
Published by:Latha CG
First published: