Ganesh Chaturthi: ಗಣಪತಿ ಪೂಜೆ ಮಾಡಿದ ಮುಸ್ಲಿಂ ಮಹಿಳೆ ವಿರುದ್ಧ ಫತ್ವಾ: ಇದು 'ಜಿಹಾದಿ' ಕೃತ್ಯ ಎಂದ ಬಿಜೆಪಿ ನಾಯಕ!

ಭಾರತೀಯ ಜನತಾ ಪಕ್ಷದ ನಾಯಕಿ ರೂಬಿ ಖಾನ್ ಅವರು ಅಲಿಗಢದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪತಿ ಪೂಜೆ ಮಾಡಿ ಸಂಕಷ್ಟಕ್ಕೀಡಾಗಿದ್ದಾರೆ.

ಅಲಿಗಢದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆ

ಅಲಿಗಢದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆ

  • Share this:
ಡಿದಲಕ್ನೋ(ಸೆ.03): ಉತ್ತರ ಪ್ರದೇಶದ ಅಲಿಗಢದಲ್ಲಿ (Aligarh) ಭಾರತೀಯ ಜನತಾ ಪಕ್ಷದ ನಾಯಕಿ (Bharatiya Janata Party) ರೂಬಿ ಖಾನ್ ವಿವಾದದಲ್ಲಿ ಸಿಲುಕಿದ್ದಾರೆ. ವಾಸ್ತವವಾಗಿ, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅವರು ಗಣಪತಿ ಪೂಜೆ ನೆರವೇರಿಸಿದ್ದಾರೆ. ಆದರೆ ಮುಸ್ಲಿಂ ನಾಯಕಿ (Muslim Leader) ಮಾಡಿದ ಗಣೇಶ ಪೂಜೆ ಮೂಲಭೂತವಾದಿಗಳಿಗೆ ಇಷ್ಟವಾಗಿಲ್ಲ. ಹೀಗಾಗೇ ಈಗ ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಆದರೆ ಈ ವಿಚಾರ ಕಾವು ಪಡೆಯುತ್ತಿದ್ದಂತೆಯೇ ಅತ್ತ ಬಿಜೆಪಿಯ ಮುಸ್ಲಿಂ ಮುಖಂಡರು ಮುಂದೆ ಬಂದು ಫತ್ವಾ ಹೊರಡಿಸಿದವರನ್ನು ಜಿಹಾದಿಗಳು ಎಂದು ಕರೆದಿದ್ದಾರೆ. ಇಂತಹ ಮುಫ್ತಿಗಳು ಮತ್ತು ಮೌಲಾನಾಗಳು ಉಗ್ರಗಾಮಿ ಮತ್ತು ಜಿಹಾದಿ ಮನಸ್ಥಿತಿಯವರು ಎಂದು ಹೇಳಿದರು. ಈ ಜನರು ತಾರತಮ್ಯವನ್ನು ಬಯಸುತ್ತಾರೆ. ನಿಜವಾದ ಮುಸ್ಲಿಮರು ಈ ರೀತಿ ಮಾತನಾಡುವುದಿಲ್ಲ ಎಂದು ರೂಬಿ ಹೇಳಿದ್ದಾರೆ.

ಇದನ್ನೂ ಓದಿ: ಗಣಪತಿಯ ದಂತಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ವಿನಾಯಕ ಏಕದಂತನಾದ ಕಥೆ!

ಯುಪಿಯ ಅಲಿಗಢದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮುಸ್ಲಿಂ ಬಿಜೆಪಿ ಮುಖಂಡ ರೂಬಿ ಖಾನ್ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಧಿವತ್ತಾಗಿ ಪೂಜೆ ಸಲ್ಲಿಸಿದ್ದಾರೆ. ಇದೀಗ ದೇವಬಂದ್ ನ ಮುಫ್ತಿ ಈ ಕುಟುಂಬದ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಮುಫ್ತಿ ಅರ್ಷದ್ ಫಾರೂಕಿ ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ರೂಬಿ ಆಸಿಫ್ ಖಾನ್ ಬಿಜೆಪಿ ಮಹಿಳಾ ಮೋರ್ಚಾದ ವಿಭಾಗೀಯ ಉಪಾಧ್ಯಕ್ಷೆ.



ಫತ್ವಾ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ

ಫತ್ವಾ ವಿರುದ್ಧ ರೂಬಿ ಖಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಫತ್ವಾ ಹೊರಡಿಸುವವರು ದೇಶ ವಿಭಜನೆಯನ್ನು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ದೇಶ ಎಲ್ಲರಿಗೂ ಸೇರಿದ್ದು. ಇಲ್ಲಿ ಹಿಂದೂ-ಮುಸಲ್ಮಾನರು ಒಟ್ಟಿಗೆ ಬಾಳಬೇಕು. ಅಂತಹ ಫತ್ವಾಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಈ ಹಿಂದೆಯೂ ನಮ್ಮ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಮುಫ್ತಿ ಅರ್ಷದ್ ಫಾರೂಕಿ ವಿರುದ್ಧ ವಾಗ್ದಾಳಿ ನಡೆಸಿದ ರೂಬಿ, ಅಂತಹ ಮುಫ್ತಿಗಳು ಮತ್ತು ಮೌಲಾನಾಗಳು ಉಗ್ರಗಾಮಿ ಮತ್ತು ಜಿಹಾದಿ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೇಳಿದರು. ಅವರು ತಾರತಮ್ಯ ಬಯಸುತ್ತಾರೆ. ದೇಶದಲ್ಲಿ ಇದ್ದುಕೊಂಡು ಭಾರತದ ಬಗ್ಗೆ ಮಾತನಾಡುವುದಿಲ್ಲ. ನಿಜವಾದ ಮುಸ್ಲಿಮರು ಈ ರೀತಿ ಮಾತನಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇವರು ತಯಾರಿಸೋ ಗಣಪತಿ ಭಾರೀ ಫೇಮಸ್!

ರೂಬಿ ಖಾನ್​ರಿಂದ ಗಣೇಶ ಪೂಜೆ, ಟೆನ್ಷನ್ ನಲ್ಲಿ ಮೌಲಾನಾ... ಸಲ್ಮಾನ್ ಖಾನ್ ವಿರುದ್ಧ ಫತ್ವಾ ಹೊರಡಿಸ್ತೀರಾ ಎಂಬ ಪ್ರಶ್ನೆ?

ನಾನು ಯಾವಾಗಲೂ ಹಿಂದೂಗಳ ಹಬ್ಬಗಳನ್ನು ಆಚರಿಸುತ್ತೇನೆ ಮತ್ತು ಅವುಗಳನ್ನು ಆಚರಿಸುತ್ತಲೇ ಇರುತ್ತೇನೆ ಎಂದು ರೂಬಿ ಹೇಳಿದ್ದಾರೆ. ಧರ್ಮಗುರುಗಳು ನಮ್ಮ ವಿರುದ್ಧ ಪೋಸ್ಟರ್‌ಗಳನ್ನು ಸಹ ಹಾಕಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬರ್ ಫರ್ಮಾನಿ ನಾಜ್ ವಿರುದ್ಧ ಇದೇ ರೀತಿಯ ಪ್ರಕರಣವೊಂದು ಹೊರಬಿದ್ದಿತ್ತು. ಆ ಸಮಯದಲ್ಲಿ, ಫರ್ಮಾನಿ ನಾಜ್ ಹರ್ ಹರ್ ಶಂಭು ಹಾಡಿನ ಮೂಲಕ ಇಂಟರ್ನೆಟ್​ನಲ್ಲಿ ಹಿಟ್ ಆಗಿತ್ತು. ಮೂಲಭೂತವಾದಿಗಳ ಪರವಾಗಿ ಇಸ್ಲಾಂ ಧರ್ಮದ ವಿರುದ್ಧ ವಿವರಿಸಿದ ಫರ್ಮಾನಿ ನಾಜ್ ಪಶ್ಚಾತ್ತಾಪ ಪಡುವಂತೆ ಕೇಳಲಾಯಿತು.
Published by:Precilla Olivia Dias
First published: