UP Dalit Sisters Death: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ; ಊರಿಗೆ ಊರೇ ತಲ್ಲಣ

ಆರು ಯುವಕರನ್ನು ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಬಂಧಿಸಲಾಗಿದೆ. ಬಾಲಕಿಯರ ಕತ್ತು ಹಿಸುಕಿ ನಾಲ್ವರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಲಕ್ನೋ: ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹಗಳು (UP Dalit Sisters Death) ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ (Lakhimpur Kheri)  ನಿಘಸನ್ ಪ್ರದೇಶದಲ್ಲಿ ಈ ಸಹೋದರಿಯರ ಮೃತದೇಹ ಪತ್ತೆಯಾಗಿದೆ.  ಪೊಲೀಸ್ ತಂಡವು  (Police) ಸ್ಥಳಕ್ಕೆ ಧಾವಿಸಿದ್ದು, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಹಿಂದೆ ಇಬ್ಬರು ವ್ಯಕ್ತಿಗಳ ವಿರುದ್ಧ ಕುಟುಂಬ ಆರೋಪ ಮಾಡಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

    ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಸ್ಥಳೀಯರು ಮತ್ತು ಸಂತ್ರಸ್ತರ ಸಂಬಂಧಿಕರು ಮೃತದೇಹಗಳನ್ನು ಇಟ್ಟುಕೊಂಡು ನಿಘಸನ್ ರಸ್ತೆಯನ್ನು ತಡೆದು ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಐಜಿ ರೇಂಜ್ ಲಕ್ಷ್ಮಿ ಸಿಂಗ್ ಸ್ಥಳಕ್ಕೆ ದೌಡಾಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದೆ.

    ಪೊಲೀಸರು  ಸ್ಥಳಕ್ಕೆ ದೌಡು, ಮರಣೋತ್ತರ ಪರೀಕ್ಷೆ
    ಇದೇ ವೇಳೆ ಮಾತನಾಡಿದ ಯುಪಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಘಟನೆಯ ಕುರಿತು ತನಿಖೆ ನಡೆಸಲು ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ. “ಲಖಿಂಪುರದಲ್ಲಿರುವ ಸಹೋದರಿಯರ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮರದ ಮೇಲೆ ಇಬ್ಬರು ಸಹೋದರಿಯರ ಮೃತದೇಹಗಳು  ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವಿಡಿಯೋ ತೆಗೆಯಲಾಗುತ್ತಿದೆ. ಸಹೋದರಿಯರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ತನಿಖೆಯಲ್ಲಿ ಪ್ರತಿಯೊಂದು ಅಂಶವನ್ನು ಪರಿಶೀಲಿಸಲಾಗುವುದು ಎಂದರು.

    6 ಯುವಕರ ಬಂಧನ
    ಉತ್ತರ ಪ್ರದೇಶದ ಲಖಿಂಪುರದಲ್ಲಿ 17 ಮತ್ತು 15 ವರ್ಷದ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗಂಟೆಗಳ ನಂತರ ಆರು ಯುವಕರನ್ನು ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಬಂಧಿಸಲಾಗಿದೆ. ಬಾಲಕಿಯರ ಕತ್ತು ಹಿಸುಕಿ ನಾಲ್ವರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: Ex-Spy: ಮಾಜಿ ಗೂಢಚಾರಿಯ 30 ವರ್ಷಗಳ ಕಾನೂನು ಹೋರಾಟಕ್ಕೆ ಸಿಗ್ತು ಜಯ: ಏನಿದು ಪ್ರಕರಣ?

    ಬಂಧಿತ ಆರೋಪಿಗಳ ಹೆಸರನ್ನು ಪೊಲೀಸರು ಬಿಡುಗಡೆಗೊಳಿಸಿದ್ದು ಸುಹೇಲ್, ಜುನೈದ್, ಹಫೀಜುಲ್ ರೆಹಮಾನ್, ಕರಿಮುದ್ದೀನ್ ಮತ್ತು ಆರಿಫ್ ಎಂಬ ವ್ಯಕ್ತಿಗಳು ಈಗ ಪೊಲೀಸ್ ವಶದಲ್ಲಿದ್ದಾರೆ. ಈ  ಆರೋಪಿಗಳಿಗೆ ಬಾಲಕಿಯರನ್ನು ಪರಿಚಯಿಸಿದ ಆರನೇ ವ್ಯಕ್ತಿ ಛೋಟು ಎಂಬಾತನನ್ನೂ ಬಂಧಿಸಲಾಗಿದೆ.

    ಬಂಧಿತ ಆರೋಪಿಗಳು ಇವರೇ
    ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್, ಜುನೈದ್ ಮತ್ತು ಹಫೀಜುಲ್ ರೆಹಮಾನ್ ಅತ್ಯಾಚಾರವೆಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಆದರೆ ಈ ಪೈಕಿ ಇಬ್ಬರು ಬಂಧಿತ ಆರೋಪಿಗಳು ಬಾಲಕಿಯರಿಗೆ ಪರಿಚಿತರೇ ಆಗಿದ್ದಾರೆ. ಆರೋಪಿಗಳ ಬೈಕ್​ನಲ್ಲೇ ಬಾಲಕಿಯರು ತೆರಳಿದ್ದಾರೆ. ಆರೋಪಿಗಳಿಗೆ ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿಗಳು ಕತ್ತುಹಿಸುಕಿ ದಲಿತ ಸಹೋದರಿಯರನ್ನು ಕೊಲೆಗೈದಿದ್ದಾರೆ ಎಂದು ಸಹ ಹೇಳಲಾಗಿದೆ.

    ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಲೆ
    ಈ ಇಬ್ಬರು ಹೆಣ್ಣುಮಕ್ಕಳನ್ನು ದುಪಟ್ಟಾದಿಂದ ಕತ್ತು ಹಿಸುಕಿ ಕೊಲ್ಲಲಾಗಿದೆ. ನಂತರ ಕರೀಮುದ್ದೀನ್ ಮತ್ತು ಆರೀಫ್ ಸ್ಥಳಕ್ಕೆ ಬಂದು ಮುಚ್ಚಿಡಲು ಸಹಾಯ ಮಾಡಿದರು.  ಆತ್ಮಹತ್ಯೆ ಎಂದು ತೋರುವಂತೆ ದೇಹವನ್ನು ಮರಕ್ಕೆ ನೇಣು ಹಾಕಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. 

    ಇದನ್ನೂ ಓದಿ: Horse Viral News: ಈ ಕುದುರೆ ಮರಿಗೆ ಬಸ್ ಮೇಲಿನ ಚಿತ್ರವೇ ಅಮ್ಮ!

    ಬಂಧಿತರೆಲ್ಲರೂ ಬಾಲಕಿಯರ ಪಕ್ಕದ ಗ್ರಾಮದವರೇ ಆಗಿದ್ದಾರೆ. ನಾವು ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ಸಂಜೀವ್ ಸುಮನ್ ತಿಳಿಸಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: