ಏನ್ ತಲೆ ಗುರೂ.. ಆರೋಪಿಗೆ ಪ್ರತ್ಯೇಕ ಬೈಕ್ ಕೊಟ್ಟು, ರೈಡಿಂಗ್ ವೇಳೆ ಕೈ ಹಿಡಿದು ಠಾಣೆಗೆ ಕರೆದೊಯ್ದ ಪೊಲೀಸ್!

viral video: ಒಬ್ಬ ಆರೋಪಿ, 2 ಬೈಕ್​​ ಇದ್ದರೆ ಯಾವ ರೀತಿ ಬೈಕ್​ ಶೇರ್​ ಮಾಡಿಕೊಳ್ಳಬೇಕು ಎಂದು ಇದರಿಂದ ಗೊತ್ತಾಯಿತು ಅಂತ ನೆಟ್ಟಿಗರು ತಮಾಷೆಯಾಗಿ ಕಮೆಂಟಿಸಿದ್ದಾರೆ.

ಆರೋಪಿ ತಪ್ಪಿಸಿಕೊಳ್ಳದಂತೆ ಕೈ ಹಿಡಿದಿರುವ ಪೊಲೀಸ್​​!

ಆರೋಪಿ ತಪ್ಪಿಸಿಕೊಳ್ಳದಂತೆ ಕೈ ಹಿಡಿದಿರುವ ಪೊಲೀಸ್​​!

  • Share this:
ಕಳ್ಳನಾಗಲಿ, ಪೊಲೀಸ್​ ಆಗಲಿ, ರಾಜಕಾರಣಿ ಆಗಲಿ, ದೊಡ್ಡ ವಿಜ್ಞಾನಿ-ಮೇಧಾವಿಯೇ ಆಗಲಿ ಕಾಮನ್​​ ಸೆನ್ಸ್​​​ಅನ್ನೋದು ಎಷ್ಟು ಮುಖ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಕೋಲು ಕೊಟ್ಟು ಹೊಡೆಸಿಕೊಳ್ಳೋದು ಎಂಬ ಮಾತಿಗೆ ಪಕ್ಕಾ ಉದಾಹರಣೆಯಿದು. ಪೊಲೀಸ್​​​​​​ ಪೇದೆಯೊಬ್ಬರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವಾಗ ತಲೆಯನ್ನು ಮನೆಯಲ್ಲೇ ಬಿಟ್ಟು ಬಂದಂತೆ ಕಾಣುತ್ತೆ. ಆರೋಪಿಯನ್ನು ಸ್ಟೇಷನ್​​ ಕರೆದೊಯ್ಯುವಾಗ ಎಡವಟ್ಟು ಮಾಡಿಕೊಂಡು ನಗಪಾಟಲಿಗೀಡಾಗಿದ್ದಾರೆ.

ಒಂದು ಬೈಕ್​ನಲ್ಲಿ ಇಬ್ಬರು ಪೇದೆಗಳು ಕುಳಿತುಕೊಂಡು, ಆರೋಪಿಗೆ ಪ್ರತ್ಯೇಕವಾಗಿ ಒಂದು ಬೈಕ್​ ಕೊಟ್ಟಿದ್ದಾರೆ. ಠಾಣೆಗೆ ಹೋಗುವ ಮಾರ್ಗ ಮಧ್ಯೆ ಆರೋಪಿ ತಪ್ಪಿಸಿಕೊಳ್ಳದಿರಲಿ ಎಂದು ಬೈಕ್​​ ಚಲಾಯಿಸುವಾಗ ಆರೋಪಿಯ ಕೈಯನ್ನು ಹಿಡಿದುಕೊಂಡಿದ್ದಾರೆ. ಬೈಕ್​ ಹಿಂಬದಿಯಲ್ಲಿದ್ದ ಪೇದೆ ಆರೋಪಿ ಕೈನ ಹಿಡಿದುಕೊಂಡೇ ಸಾಗಿದ್ದಾರೆ. ಆರೋಪಿ ಒಂದು ಕೈನಲ್ಲಿ ಬೈಕ್​ ಓಡಿಸಿಕೊಂಡು, ಇನ್ನೊಂದು ಕೈನ ಪೇದೆಗೆ ಕೊಟ್ಟು ಸವಾರಿ ನಡೆಸಿದ್ದಾನೆ.

ಕಳ್ಳನಿಗೆ ಪ್ರತ್ಯೇಕವಾಗಿ ಬೈಕ್​ ಕೊಟ್ಟು, ತಪ್ಪಿಸಿಕೊಳ್ಳದಂತೆ ಕೈ ಹಿಡಿದುಕೊಂಡು ಸವಾರಿ ನಡೆಸಿರುವ ಘಟನೆಯ ವಿಡಿಯೋ ಸದ್ಯ ಸಖತ್​​ ವೈರಲ್​​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋಗೆ ತರಹೇವಾರಿ ಕಮೆಂಟ್​ಗಳು ಬಂದಿವೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುಪಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಟೀಕೆಗಳ ಸುರಿಮಳೆಯೇ ಹರಿದು ಬಂದಿದೆ. ಇಷ್ಟು ಮಾತ್ರದ ಬುದ್ಧಿ ಇರುವವರು ಕ್ರಿಮಿನಲ್​​ಗಳನ್ನು ಹೇಗೆ ಹಿಡಿಯುತ್ತಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.


ಟ್ರೋಲ್​​ ಪೇಜ್​ಗಳು, ಮೆಮೆ ಪೇಜ್​ಗಳಂತೂ ವಿಡಿಯೋಗೆ ತರಹೇವಾರಿ ಕ್ಯಾಪ್ಶನ್​ ಕೊಟ್ಟಿದ್ದಾರೆ. ಕಾನೂನಿನ ಕೈ ದೊಡ್ಡಿದೆ ಎಂದು ಕೇಳಿದ್ದೆ, ಈಗ ನೋಡಿದ್ದು ಆಯ್ತು ಎಂದು ಒಬ್ಬರು ಬರೆದಿದ್ದಾರೆ. ಇಬ್ಬರು ಪೊಲೀಸರು, ಒಬ್ಬ ಆರೋಪಿ, 2 ಬೈಕ್​​ ಇದ್ದರೆ ಯಾವ ರೀತಿ ಬೈಕ್​ ಶೇರ್​ ಮಾಡಿಕೊಳ್ಳಬೇಕು ಎಂದು ಇದರಿಂದ ಗೊತ್ತಾಯಿತು ಅಂತ ಮತ್ತೊಬ್ಬರು ಕಮೆಂಟಿಸಿದ್ದಾರೆ. ಕಾಮನ್​​ ಸೆನ್ಸ್​ ಇಲ್ಲದವರು ಪೊಲೀಸ್​ ಹೇಗೆ ಆದರು ಅಂತ ಹಲವರು ಪ್ರಶ್ನಿಸಿದ್ದಾರೆ. ತಮಾಷೆಭರಿತ ಕಮೆಂಟ್​ಗಳು ಎಂತವರಲ್ಲೂ ನಗೆ ಉಕ್ಕಿಸುತ್ತಿವೆ.
Published by:Kavya V
First published: