'ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧ' ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​

ಉತ್ತರ ಪ್ರದೇಶದಲ್ಲಿನ ತಾಯಂದಿರ ಮತ್ತು ಹೆಣ್ಣು ಮಕ್ಕಳ ಮಾನಹಾನಿಬಗ್ಗೆ ಯೋಚಿಸುವವರಿಗೆ ವಿನಾಶ ಖಚಿತ. ಅವರು ಎಂತಹ ಶಿಕ್ಷೆ ಪಡೆಯುತ್ತಾರೆ ಎಂದರೆ ಅದು ಭವಿಷ್ಯದಲ್ಲಿ ಈ ಬಗ್ಗೆ ಉದಾಹರಣೆಯಾಗುತ್ತಾರೆ.

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

 • Share this:
  ಲಕ್ನೋ (ಅ.2): ಉತ್ತರ ಪ್ರದೇಶ ಸರ್ಕಾರ ಮಹಿಳೆಯ ರಕ್ಷಣೆಗೆ ಸದಾ ಬದ್ಧವಾಗಿದ್ದು, ಎಲ್ಲಾ ತಾಯಂದಿರು ಹಾಗೂ ಸಹೋದರಿಯ ಸಂರಕ್ಷಣೆ, ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ. ಹಥ್ರಾಸ್​ ಅತ್ಯಾಚಾರ ಪ್ರಕರಣ ಕುರಿತು ಇಡೀ ದೇಶದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದು, ವಿಪಕ್ಷಗಳು ಬಿಜೆಪಿ ಆಡಳಿತವನ್ನು ಟೀಕಿಸುತ್ತಿವೆ. ಯೋಗಿ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಅಲ್ಲಿನ ಮಹಿಳೆಯರಲ್ಲಿ ಅಭದ್ರತೆ ಕಾಡುವಂತೆ ಆಗಿದೆ. ಸಂತ್ರಸ್ತರಿಗೆ ನ್ಯಾಯ ಕೂಡ ಸಿಗುವುದಿಲ್ಲ ಎಂಬ ಟೀಕಾಪ್ರಹಾರಗಳು ಕೇಳಿ ಬರುತ್ತಿದೆ. ಈ ಹಿನ್ನಲೆ ಈ ಕುರಿತು ಟ್ವೀಟ್​ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್​, ಮಹಿಳೆರ ರಕ್ಷಣೆ ನಮ್ಮ ಜವಾಬ್ದಾರಿ ಎಂದಿದ್ದಾರೆ.  'ಉತ್ತರ ಪ್ರದೇಶದಲ್ಲಿನ ತಾಯಂದಿರ ಮತ್ತು ಹೆಣ್ಣು ಮಕ್ಕಳ ಮಾನಹಾನಿಬಗ್ಗೆ ಯೋಚಿಸುವವರಿಗೆ ವಿನಾಶ ಖಚಿತ. ಅವರು ಎಂತಹ ಶಿಕ್ಷೆ ಪಡೆಯುತ್ತಾರೆ ಎಂದರೆ ಅದು ಭವಿಷ್ಯದಲ್ಲಿ ಈ ಬಗ್ಗೆ ಉದಾಹರಣೆಯಾಗುತ್ತಾರೆ. ಮಹಿಳೆಯರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ಟ್ವೀಟ್​ ಮಾಡಿದ್ದಾರೆ.

  ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಥ್ರಾಸ್​ ಪ್ರಕರಣ ಮಾಸುವ ಮುನ್ನವೇ ಅಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಈ ಹಿಂದೆ ಉನ್ನಾವೋ ಪ್ರಕರಣ ಕೂಡ ರಾಜ್ಯದಲ್ಲಿ ಸುದ್ದಿ ಮಾಡಿತ್ತು
  Published by:Seema R
  First published: