‘ಕಾಂಗ್ರೆಸ್-​ಬಿಎಸ್​​ಪಿಗೆ ಮುಸ್ಲಿಂ ಮೇಲೆ ನಂಬಿಕೆ, ಬಿಜೆಪಿಗೆ ಹಿಂದುಗಳ ಮೇಲೆ ವಿಶ್ವಾಸ’; ಸಿಎಂ ಯೋಗಿ ಆದಿತ್ಯನಾಥ್​​

ಅಖಿಲೇಶ್ ಹಾಗೂ ಮಾಯಾವತಿ ಇಬ್ಬರೂ ಮುಸ್ಲಿಂ ಕಾರ್ಡ್ ಆಡುತ್ತಿದ್ದರೆ, ಹಿಂದೂಗಳಿಗೆ ಬಿಜೆಪಿ ಹೊರತು ಯಾವುದೇ ಆಯ್ಕೆ ಇಲ್ಲ- ಸಿಎಂ ಯೋಗಿ ಆದಿತ್ಯನಾಥ್​​

Ganesh Nachikethu | news18
Updated:April 10, 2019, 11:41 AM IST
‘ಕಾಂಗ್ರೆಸ್-​ಬಿಎಸ್​​ಪಿಗೆ ಮುಸ್ಲಿಂ ಮೇಲೆ ನಂಬಿಕೆ, ಬಿಜೆಪಿಗೆ ಹಿಂದುಗಳ ಮೇಲೆ ವಿಶ್ವಾಸ’; ಸಿಎಂ ಯೋಗಿ ಆದಿತ್ಯನಾಥ್​​
ಯೋಗಿ ಆದಿತ್ಯನಾಥ
Ganesh Nachikethu | news18
Updated: April 10, 2019, 11:41 AM IST
ಲಕ್ನೋ(ಏ.10): "ಮುಸ್ಲಿಂ ಲೀಗ್​​​ ಸಂಘಟನೆ ಹಸಿರು ವೈರಸ್​ ಇದ್ದಂತೆ​, ಹಿಂದೂ-ಮುಸ್ಲಿಮರ ನಡುವಿನ ಈ ಲೋಕಸಭಾ ಚುನಾವಣೆ ‘ಅಲಿ ವರ್ಸಸ್​​​ ಬಜರಂಗ ಬಲಿ’ ನಡುವಿನದ್ದು" ಎನ್ನುವ ಮೂಲಕ ಸಿಎಂ ಯೋಗಿ ಆದಿತ್ಯನಾಥ್​​​​ ವಿವಾದಕ್ಕೀಡಾಗಿದ್ಧಾರೆ. ಹಾಗೆಯೇ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ, ತಮ್ಮ ಪಕ್ಷಕ್ಕೆ ಮುಸ್ಲಿಮರನ್ನು ಮತ ಹಾಕುವಂತೆ ಕೇಳಿಕೊಂಡಿದ್ದಾರೆ. ಮುಸ್ಲಿಮರು ಬಿಎಸ್​​ಪಿಗೆ ಮತ ಹಾಕಿದರೇ, ಹಿಂದುಗಳು ಬಿಜೆಪಿಗೆ ಹಾಕಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ತರಪ್ರದೇಶದ ರಾಯ್​​ ಬರೇಲಿಯಲ್ಲಿ ಬಿಜೆಪಿ ಸಮಾವೇಶವೊಂದರಲ್ಲಿ ಮಾಜಿ ಸಿಎಂ ಮಾಯಾವತಿ ಅವರ ವಿರುದ್ದ ಕಿಡಿಕಾರಿದ ಸಿಎಂ ಯೋಗಿ ಆದಿತ್ಯನಾಥ್​​, ಬಿಎಸ್​​ಪಿ ಸೋಲಿನ ಭೀತಿಯಲ್ಲಿದೆ. ಹಾಗಾಗಿಯೇ ಮಾಯಾವತಿ ಎಸ್​​ಪಿ-ಬಿಎಸ್​​ಪಿಗೆ ಮತ ಹಾಕಿ ಎಂದಿದ್ದಾರೆ. ಕಾಂಗ್ರೆಸ್​​ಗೆ ಮುಸ್ಲಿಮರು ವೋಟ್​​ ಹಾಕಿದರೇ, ಮತ ವಿಭಜನೆಯಿಂದಾಗಿ ಸೋಲಲಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್​​, ಎಸ್​​ಪಿ-ಬಿಎಸ್​​​ಪಿಗೆ ಅಲಿ(ಮುಸ್ಲಿಂ) ಮೇಲೆ ನಂಬಿಕೆಯಿದ್ದರೇ, ಬಿಜೆಪಿಗೆ ಬಜರಂಗ ಬಲಿ(ಹಿಂದೂ) ಮೇಲೆ ವಿಶ್ವಾಸವಿದೆ ಎಂದರು.

ದಲಿತ-ಮುಸ್ಲಿಂ ಐಕ್ಯತೆ ಅಸಾಧ್ಯ. ಇತ್ತ ಬಿಎಸ್​​ಪಿಗೆ ಮತ ಹಾಕಿ ಎಂದು ಮುಸ್ಲಿಂ ಮತದಾರರಿಗೆ ಕರೆ ನೀಡುವ ಮೂಲಕ ದಲಿತ ಭಾವನೆಗಳಿಗೆ ಮಾಯಾವತಿ ಘಾಸಿಗೊಳಿಸಿದ್ದಾರೆ. ಅತ್ತ ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್​​ ಸಿಎಂ ಕಮಲನಾಥ್ ಅವರು ಶೇ.90ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದಲ್ಲಿ ಮಾತ್ರ ಪಕ್ಷ ಗೆಲ್ಲುವುದು ಎಂದು ಹೇಳಿದ್ಧಾರೆ. ಈ ಎರಡು ಪಕ್ಷಗಳು ಮುಸ್ಲಿಮರ ಮೇಲೆ ನಂಬಿಕೆಯಿಟ್ಟರೇ, ನಮಗೆ ಹಿಂದೂಗಳ ನಂಬಿಕೆ ಎನ್ನುತ್ತಾರೆ ಸಿಎಂ ಯೋಗಿ ಆದಿತ್ಯನಾಥ್​​​.

ಇದನ್ನೂ ಓದಿ: ಕರ್ನಾಟಕ, ಮಧ್ಯಪ್ರದೇಶ ಬೆನ್ನಲ್ಲೇ ಆಂಧ್ರಕ್ಕೂ ಐಟಿ ಬಿಸಿ; ಟಿಡಿಪಿ ಅಭ್ಯರ್ಥಿ ಮನೆ ಮೇಲೆ ದಾಳಿ; ಕೇಂದ್ರದ ವಿರುದ್ಧ ಸಿಎಂ ನಾಯ್ಡು ಕಿಡಿ!

ಇನ್ನು ಕೇರಳದಲ್ಲಿ ಕಾಂಗ್ರೆಸ್​ ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್​ ಸಂಘಟನೆ ಜತೆಗೆ ಸೇರಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಎಸ್ಪಿ- ಬಿಎಸ್ಪಿ ಮೈತ್ರಿಕೂಟಕ್ಕೆ ಮುಸ್ಲಿಂ ಲೀಗ್ ಬೆಂಬಲಿಸಿದೆ. ಅಲ್ಲಿದ್ದ ಹಸಿರು ವೈರಸ್​​​​​ ಇಲ್ಲಿಗೂ ತಗುಲಿದೆ. ಈ ಜನ ಹಸಿರು ವೈರಸ್ ಜತೆ ಸೇರಿ ದೇಶದ ವಿರುದ್ಧ ಪಿತೂರಿ ಮಾಡುತ್ತಾರೆ. ಅಖಿಲೇಶ್ ಹಾಗೂ ಮಾಯಾವತಿ ಇಬ್ಬರೂ ಮುಸ್ಲಿಂ ಕಾರ್ಡ್ ಆಡುತ್ತಿದ್ದರೆ, ಹಿಂದೂಗಳಿಗೆ ಬಿಜೆಪಿ ಹೊರತು ಯಾವುದೇ ಆಯ್ಕೆ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​​ ಆಜಾದ್​​​​​ ಬೆಂಬಲ; ಎಸ್​​​ಪಿ-ಬಿಎಸ್​​ಪಿ ಮೈತ್ರಿಗೆ ಭಾರೀ ಹಿನ್ನಡೆ!
Loading...

ದೇಶಾದ್ಯಂತ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿದಂತೆಯೇ, ಸರ್ವ ಪಕ್ಷಗಳು ಯುದ್ದಕ್ಕೆ ಸನ್ನದ್ಧವಾಗಿವೆ. ಕೇಂದ್ರದ ಗದ್ದುಗೆ ಹಿಡಿಯಲು ಪ್ರಮುಖ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ಕಾಂಗ್ರೆಸ್​​​, ಬಿಜೆಪಿ ಸೇರಿದಂತೆ ಎಸ್​​ಪಿ-ಬಿಎಸ್​​​ಪಿ ಪಕ್ಷದ ಕಣ್ಣು ನೆಟ್ಟಿದೆ. ಈಗಾಗಲೇ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಜಂಟಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ದಂಗುಬಡಿಸಿದಂತಾಗಿದೆ.
--------------
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626