• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Yogi Adityanath Interview: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ಇತಿಹಾಸದ ಪುಟ ಸೇರಲಿದೆ: ಯೋಗಿ ಆದಿತ್ಯನಾಥ್

Yogi Adityanath Interview: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ಇತಿಹಾಸದ ಪುಟ ಸೇರಲಿದೆ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಕೋವಿಡ್ ಕಾಲದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದೆವು. ಆದರೆ ಪ್ರಸ್ತುತ ಉತ್ತರ ಪ್ರದೇಶದ ಜಿಡಿಪಿ ಮತ್ತು ತಲಾದಾಯ ದ್ವಿಗುಣಗೊಂಡಿದೆ. ಈಗ ಉತ್ತರ ಪ್ರದೇಶದ ಬೆಳವಣಿಗೆಯ ದರ 13ರಿಂದ 14%ನ ನಡುವೆ ಇದೆ. ಹೀಗಾಗಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ ಆಗಿ ಮಾಡುವಲ್ಲಿ ಉತ್ತರ ಪ್ರದೇಶದ ಪಾತ್ರ ತುಂಬಾ ದೊಡ್ಡದಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯ ಪಟ್ಟರು.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Lucknow, India
 • Share this:

ಲಕ್ನೋ: ಫೆಬ್ರವರಿ 10 ರಿಂದ 12 ರವರೆಗೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ (Global Investors Summit) ಬೆರಳೆಣಿಕೆಯ ದಿನಗಳು ಬಾಕಿ ಇರುವ ಹೊತ್ತಿನಲ್ಲೇ (UP CM) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ನ್ಯೂಸ್‌ 18 ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಉತ್ತರ ಪ್ರದೇಶದ ಅಭಿವೃದ್ಧಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಜೆಂಡಾ, ಅಭಿವೃದ್ಧಿಯಲ್ಲಿ ಉತ್ತರ ಪ್ರದೇಶ ದೇಶದ ಮುಂಚೂಣಿಯ ರಾಜ್ಯವಾಗಿ ಹೊರ ಹೊಮ್ಮಲಿದೆಯೇ ಎಂಬ ಪ್ರಶ್ನೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ.


ವಿಶೇಷವಾಗಿ ಉತ್ತರ ಪ್ರದೇಶದ ಅಭಿವೃದ್ಧಿಯ ವಿಚಾರವಾಗಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯ ಯಾತ್ರೆ ಮುಂದುವರಿಯುತ್ತಿದೆ. ಕೋವಿಡ್ ಕಾಲದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದೆವು. ಆದರೆ ಪ್ರಸ್ತುತ ಉತ್ತರ ಪ್ರದೇಶದ ಜಿಡಿಪಿ ಮತ್ತು ತಲಾದಾಯ ದ್ವಿಗುಣಗೊಂಡಿದೆ. ಈಗ ಉತ್ತರ ಪ್ರದೇಶದ ಬೆಳವಣಿಗೆಯ ದರ 13ರಿಂದ 14%ನ ನಡುವೆ ಇದೆ. ಹೀಗಾಗಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ ಆಗಿ ಪರಿವರ್ತಿಸಲು ಉತ್ತರ ಪ್ರದೇಶದ ಪಾತ್ರ ತುಂಬಾ ದೊಡ್ಡದಾಗಿದೆ ಎಂದು ಅಭಿಪ್ರಾಯ ಪಟ್ಟರು.


ಇದನ್ನೂ ಓದಿ: Education: ಶಿಕ್ಷಕರ ನೇಮಕಾತಿಗಾಗಿ ಸಮಗ್ರ ಶಿಕ್ಷಣ ಸೇವಾ ಆಯ್ಕೆ ಆಯೋಗ ಸ್ಥಾಪನೆ; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್


ಶೃಂಗಸಭೆ ಐತಿಹಾಸಿಕವಾಗಲಿದೆ


ಇನ್ನು ಮುಂದಿನ ವಾರ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೂ ಮುನ್ನವೇ ನಮ್ಮ ರಾಜ್ಯ ಸರ್ಕಾರವು ಗುರುತಿಸಿರುವ ಎಲ್ಲಾ 25 ವಲಯಗಳಲ್ಲಿ ಹೂಡಿಕೆದಾರರಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದ ಯೋಗಿ ಆದಿತ್ಯನಾಥ್, ಈ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ಐತಿಹಾಸಿಕವಾಗಲಿದೆ ಎಂದು ಹೇಳಿದರು.


ರಾಜ್ಯದಲ್ಲಿ ಉಂಟಾಗಿರುವ ‘ರಾಮಚರಿತಮಾನಸ’ ಹಿಂದೂ ಮಹಾಕಾವ್ಯ ವಿವಾದದ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಈ ವಿವಾದವು ರಾಜ್ಯದ ಅಭಿವೃದ್ಧಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವೇ ಹೊರತು ಬೇರೇನಿಲ್ಲ. ರಾಮಚರಿತ ಮಾನಸ ಅತ್ಯಂತ ಪೂಜ್ಯನೀಯ ಗ್ರಂಥವಾಗಿದೆ. ಇದನ್ನು ಪ್ರತೀ ಮನೆಯಲ್ಲೂ ಇಟ್ಟು ಪೂಜಿಸಲಾಗುತ್ತಿದೆ. ಈ ಗ್ರಂಥದ ಮಹತ್ವದ ಬಗ್ಗೆ ಅರಿವಿಲ್ಲದವರು ಈ ರೀತಿ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.


ಇದನ್ನೂ ಓದಿ: Uttar Pradesh: ದೆಹಲಿ ಗೆದ್ದಾಯ್ತು, ಮುಂದಿನ ಗುರಿ ಉತ್ತರ ಪ್ರದೇಶ! ಆಪ್ ನಾಯಕರ ತಯಾರಿ ಹೀಗಿದೆ ನೋಡಿ


ಅಯೋಧ್ಯೆ ಕಾಮಗಾರಿ ಶೀಘ್ರ ಪೂರ್ಣ


ಇನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕಾಮಗಾರಿಯ ಬಗ್ಗೆಯೂ ಮಾತನಾಡಿದ ಆದಿತ್ಯನಾಥ್, ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಮಂದಿರದ ಕಾಮಗಾರಿಯು ಕೊಟ್ಟಿರುವ ನಿಗದಿತ ಸಮಯದಲ್ಲೇ ಪೂರ್ಣಗೊಳ್ಳುತ್ತದೆ ಎಂದರು. ಇನ್ನು ಉತ್ತರ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪ್ರಪಂಚದಾದ್ಯಂತ ರಾಜ್ಯದ ಬಗ್ಗೆ ಇರುವ ಗ್ರಹಿಕೆಯನ್ನೇ ಬದಲಾಯಿಸಿದೆ ಎಂದ ಅವರು, ನಮ್ಮ ಬಿಜೆಪಿ ಸರ್ಕಾರ ಕಳೆದ 6 ವರ್ಷಗಳಲ್ಲಿ 5 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ. ಮುಂದಿನ 4 ವರ್ಷಗಳಲ್ಲೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡಲಿದ್ದೇವೆ ಎಂದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ ದೇಶದಲ್ಲಿ ವಿಭಜನೆಯ ರಾಜಕೀಯ ಮಾಡಿದೆ. ರಾಹುಲ್ ಗಾಂಧಿ ಅವರು ನಕರಾತ್ಮಕ ಯೋಚನೆಯನ್ನು ಬಿಟ್ಟಿದ್ದರೆ ಕಾಂಗ್ರೆಸ್‌ಗೆ ಲಾಭ ಆಗುತ್ತಿತ್ತು ಎಂದು ಯೋಗಿ ಆದಿತ್ಯನಾಥ್ ಹೇಳಿದರು.

Published by:Avinash K
First published: