Yogi Govt 2.0: ಮತ್ತೆ ಅಧಿಕಾರಕ್ಕೆ ಬಂದೊಡನೆ ಉಚಿತ ಪಡಿತರ ಯೋಜನೆಯನ್ನು ಮುಂದುವರೆಸಿದ ‘ಯೋಗಿ ಸರ್ಕಾರ್’

ಉಚಿತ ಪಡಿತರ ಯೋಜನೆಯನ್ನು (Free Ration Scheme) ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲು ರಾಜ್ಯ ಕ್ಯಾಬಿನೆಟ್ ಶನಿವಾರ ನಿರ್ಧರಿಸಿದೆ. ಉಚಿತ ಪಡಿತರ ಯೋಜನೆ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು.  ರಾಜ್ಯದಲ್ಲಿ ಒಟ್ಟು 15 ಕೋಟಿ ಜನರು ಉಚಿತ ಪಡಿತರ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಆದಿತ್ಯನಾಥ್

  • Share this:
ಲಖ್ನೋ: ಚುನಾವಣೆ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿ (UP Election Result 2022) 2ನೇ ಅವಧಿಗೆ (Yogi Govt 2.0) ಅಧಿಕಾರದ ಚುಕ್ಕಾಣಿ ಹಿಡಿದಿರುವ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಮೊದಲ ಪ್ರಮುಖ ನಿರ್ಧಾರವನ್ನು ಘೋಷಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಿದ ಉಚಿತ ಪಡಿತರ ಯೋಜನೆಯನ್ನು (Free Ration Scheme) ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲು ರಾಜ್ಯ ಕ್ಯಾಬಿನೆಟ್ ಶನಿವಾರ ನಿರ್ಧರಿಸಿದೆ. ಉಚಿತ ಪಡಿತರ ಯೋಜನೆ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು.  ರಾಜ್ಯದಲ್ಲಿ ಒಟ್ಟು 15 ಕೋಟಿ ಜನರು ಉಚಿತ ಪಡಿತರ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆದಿತ್ಯನಾಥ್ ಹೇಳಿದರು. ಉಚಿತ ಪಡಿತರ ಮುಂದುವರೆಸುವುದಾಗಿ ಚುನಾವಣೆ ಸಮಯದಲ್ಲಿ ಯೋಗಿ ಸರ್ಕಾರ ಹೇಳಿದ್ದು, ಕೊಟ್ಟ ಮಾತಿನಂತೆ ಈಗ ಯೋಜನೆಯನ್ನು ಮುಂದುವರೆಸಲಾಗಿದೆ.

ಇದನ್ನೂ ಓದಿ: Viral Video: ಪುಟ್ಟ ಮಗಳ ಶವ ಹೊತ್ತು 10 ಕಿಲೋ ಮೀಟರ್ ನಡೆದ ತಂದೆ! ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ

15 ಕೋಟಿ ಬಡವರಿಗೆ ಸಮರ್ಪಣೆ

ರಾಜ್ಯದ 15 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದುವರೆಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಶನಿವಾರ ಲೋಕಭವನದಲ್ಲಿ ನಡೆದ ಯೋಗಿ 2.0 ಸಂಪುಟದ ಮೊದಲ ಸಭೆಯಲ್ಲಿ ಈ ಬಗ್ಗೆ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. "ಉತ್ತರ ಪ್ರದೇಶದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದ ಮೊದಲ ನಿರ್ಧಾರವು 15 ಕೋಟಿ ಬಡವರಿಗೆ ಸಮರ್ಪಿತವಾಗಿದೆ" ಎಂದು ಸಿಎಂ ಆದಿತ್ಯನಾಥ್ ಈ ಘೋಷಣೆ ಮಾಡಿದರು.

80 ಕೋಟಿ ಜನರಿಗೆ ಪ್ರಯೋಜನ

ಕೋವಿಡ್​​ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ನಾಗರಿಕರಿಗೆ ನೆರವು ನೀಡುವ ಉದ್ದೇಶದಿಂದ “ಅನ್ನ ಯೋಜನೆ”ಪ್ರಾರಂಭಿಸಿದ್ದಾರೆ ಎಂದು ಆದಿತ್ಯನಾಥ್ ಹೇಳಿದರು. ಏಪ್ರಿಲ್ 2020 ರಿಂದ ಮಾರ್ಚ್ 2022 ರವರೆಗೆ ದೇಶದ ಸುಮಾರು 80 ಕೋಟಿ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಜೊತೆಗೆ ಯುಪಿ ಸರ್ಕಾರವೂ ಉಚಿತ ಪಡಿತರ ವಿತರಣೆ ಮಾಡಿತ್ತು.

ಮೊದಲ ಕ್ಯಾಬಿನೆಟ್ ಸಭೆಯ ಮೊದಲ ನಿರ್ಧಾರ

ಕೊರೋನಾ ಕಷ್ಟ ಕಾಲದಲ್ಲಿ ಕೆಲಸದ ನಷ್ಟದಿಂದ ಉಂಟಾಗಿದ್ದ ಸಮಸ್ಯೆಯನ್ನು ಪರಿಹರಿಸಲು ಉಚಿತ ಪಡಿತರ ಯೋಜನೆ ತುಂಬಾ ಉಪಯುಕ್ತವಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. ಯೋಜನೆಯಡಿಯಲ್ಲಿ, ಅಂತ್ಯೋದಯ ಮತ್ತು ಅರ್ಹ ಗೃಹ ಕಾರ್ಡ್ ಹೊಂದಿರುವವರು ಕೂಡ ಉಚಿತ ಪಡಿತರವನ್ನು ಪಡೆದಿದ್ದಾರೆ. ಹೊಸ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ಜೂನ್ 22 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಎರಡನೇ ಬಾರಿ Uttar Pradesh CM ಆಗಿ ಯೋಗಿ ಪ್ರಮಾಣ ವಚನ; ಪ್ರಧಾನಿ ಸೇರಿದಂತೆ ಈ ಗಣ್ಯರು ಹಾಜರು

ಯೋಗಿ ಸರ್ಕಾರದ ಸಾಧನೆ

ಪಡಿತರ ವಿತರಣೆಯಲ್ಲಿ ಪಾರದರ್ಶಕ ವ್ಯವಸ್ಥೆಗೆ ಒತ್ತು ನೀಡಿದ ಸಿಎಂ ಯೋಗಿ, ರಾಜ್ಯದ 80 ಸಾವಿರ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಇದರಿಂದ ಸರಿಯಾದ ಫಲಾನುಭವಿಗೆ ಪಡಿತರ ವಿತರಣೆ ಸಾಧ್ಯವಾಗಿದೆ ಎಂದರು. ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ರಾಜ್ಯ ಸರ್ಕಾರವು 15 ಕೋಟಿ ಬಡವರಿಗೆ ತನ್ನ ಸ್ವಂತ ಸಂಪನ್ಮೂಲದಿಂದ ಉಚಿತ ಪಡಿತರವನ್ನು ನೀಡುತ್ತಿದೆ. ಯೋಜನೆಯಡಿ, ರಾಜ್ಯ ಸರ್ಕಾರದಿಂದ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದ್ದು, ಅರ್ಹ ಕುಟುಂಬಗಳು ಪ್ರತಿ ಯೂನಿಟ್‌ಗೆ ಐದು ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಿವೆ.  ಡಿಸೆಂಬರ್ 2021 ರಿಂದ, ರಾಜ್ಯ ಸರ್ಕಾರವು ಆಹಾರ ಧಾನ್ಯಗಳ ಜೊತೆಗೆ ಒಂದು ಲೀಟರ್ ಸಂಸ್ಕರಿಸಿದ ಎಣ್ಣೆ, ಒಂದು ಕೆಜಿ ಬೇಳೆ ಮತ್ತು ಒಂದು ಕೆಜಿ ಉಪ್ಪನ್ನು ಸಹ ಒದಗಿಸಿದೆ. ಅಂತ್ಯೋದಯ ವರ್ಗದ ಕುಟುಂಬಗಳಿಗೆ ಒಂದು ಕೆಜಿ ಸಕ್ಕರೆಯನ್ನು ಸಹ ನೀಡಲಾಗುತ್ತಿದೆ.

ಸಿಎಂ ಸಭೆ ಮುನ್ನ ಬುಧವಾರ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ರಮಾಪತಿ ಶಾಸ್ತ್ರಿ ಅವರನ್ನು ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ನಾಲ್ವರು ಸದಸ್ಯರ ಸಮಿತಿಯು ಮಾಜಿ ಸಚಿವರು ಮತ್ತು ಶಾಸಕ ಶಾಸ್ತ್ರಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದೆ.  ರಾಜ್ಯಪಾಲರು ಶನಿವಾರ ಸ್ಪೀಕರ್‌ಗೆ ಪ್ರಮಾಣ ವಚನ ಬೋಧಿಸಿದರು.
Published by:Kavya V
First published: