Yogi Adityanath| ಭಯೋತ್ಪಾದನೆಯ ಬೇರುಗಳನ್ನು ಕಲಂ 370 ಹೆಸರಲ್ಲಿ ಕಾಂಗ್ರೆಸ್ 1952ರಲ್ಲಿ ನೆಟ್ಟಿತ್ತು; ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿನ ತಮ್ಮದೇ ಆಡಳಿತದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಯೋಗಿ ಆದಿತ್ಯನಾಥ್, "ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಮಾಫಿಯಾ ಬಡವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.

ಯುಪಿ ಸಿಎಂ ಯೋಗಿ.

ಯುಪಿ ಸಿಎಂ ಯೋಗಿ.

 • Share this:
  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (Uttara Pradesh Assembly Election 2021) ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇದೆ. ಆದರೆ, ಈಗಲೇ ಪ್ರಚಾರ ಆರಂಭಿಸಿರುವ ಬಿಜೆಪಿ ನಾಯಕರು (BJP Leaders) ಕಾಂಗ್ರೆಸ್ (Congress)​ ಮತ್ತು ಇತರೆ ವಿರೋಧ ಪಕ್ಷಗಳ (Opposition Party) ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಅಲ್ಲದೆ, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ (Yogi Adityanath) ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದು, "ಭಯೋತ್ಪಾದನೆಗೆ (Terrorism) ಕಾಂಗ್ರೆಸ್​ ಕಾರಣ. 1952 ರಲ್ಲಿ ಕಾಂಗ್ರೆಸ್​ ಕಲಂ 370 (Article 370) ಹೆಸರಿನಲ್ಲಿ ಭಯೋತ್ಪಾದನೆಯನ್ನು ಕಾಶ್ಮೀರದಲ್ಲಿ (Kashmir) ಬಿತ್ತಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಭಯೋತ್ಪಾದನೆಯನ್ನು ಶವಪೆಟ್ಟಿಗೆಗೆ ಇಳಿಸಿ ಕೊನೆಯ ಮೊಳೆ ಹೊಡೆದಿದ್ದಾರೆ" ಎಂದಿದ್ದಾರೆ.

  ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ; ಯೋಗಿ ಆದಿತ್ಯನಾಥ್

  ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಭಯೋತ್ಪಾದನೆಯ ಮೂಲ ಕಾಂಗ್ರೆಸ್​ ಪಕ್ಷ. ಕಲಂ 370ನ್ನು ಕಾಶ್ಮೀರದಲ್ಲಿ ಜಾರಿಗೆ ತರುವ ಮೂಲಕ ದೇಶದಲ್ಲಿ ಭಯೋತ್ಪಾದನೆಗೆ ನಾಂದಿ ಹಾಡಲಾಯಿತು. ಆದರೆ, ಬಿಜೆಪಿ ಸರ್ಕಾರ ಈ ಕಲಂ ಅನ್ನು ರದ್ದು ಮಾಡುವ ಮೂಲಕ ಭಯೋತ್ಪಾದನೆಯ ಶವಪೆಟ್ಟಿಗೆಯಲ್ಲಿ ಅಂತಿಮ ಮೊಳೆ ಹೊಡೆದಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

  ಅಖಿಲೇಶ್ ಯಾದವ್ ವಿರುದ್ಧ ಕಿಡಿ:

  ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ಯೋಗಿ ಆದಿತ್ಯನಾಥ್, "ಅಖಿಲೇಶ್ ಯಾದವ್​ ಉತ್ತರ ಪ್ರದೇಶದ ಅಧಿಕಾರದಲ್ಲಿದ್ದಾಗ ಅಂದಿನ ಸರ್ಕಾರವು ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿದೆ ಮತ್ತು ಹಿಂದುಗಳ ವಿರುದ್ಧ ದೂರುಗಳನ್ನು ಸಲ್ಲಿಸಿತ್ತು" ಎಂದು ಆರೋಪಿಸಿದ್ದಾರೆ.

  "ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ, ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಯಿತು. ಭಯೋತ್ಪಾದಕರನ್ನು ಪೂಜಿಸಲಾಯಿತು, ಹಿಂದೂಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ರಾಮ ಜನ್ಮಭೂಮಿಯ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಕೃಷಿ ಸಾಲವನ್ನು ಮನ್ನಾ ಮಾಡಿದ್ದೇವೆ"ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: Modi Speech: 100 ಕೋಟಿ ಲಸಿಕೆ ಸಾಧನೆ; ದೇಶದ ಜನರಿಗೆ ಮೋದಿ ಶುಭಾಶಯ; ಇಲ್ಲಿದೆ ಪ್ರಧಾನಿ ಭಾಷಣದ ಹೈಲೈಟ್ಸ್​​

  ತಮ್ಮ ಆಡಳಿತವನ್ನು ತಾವೇ ಮೆಚ್ಚಿಕೊಂಡ ಆದಿತ್ಯನಾಥ್:

  ಈ ನಡುವೆ ಉತ್ತರ ಪ್ರದೇಶದಲ್ಲಿನ ತಮ್ಮದೇ ಆಡಳಿತದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಯೋಗಿ ಆದಿತ್ಯನಾಥ್, "ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಮಾಫಿಯಾ ಬಡವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಧೈರ್ಯ ಮಾಡುವುದಿಲ್ಲ, ಅವರು ಆ ಧೈರ್ಯವನ್ನು ಮಾಡಿದರೆ, ರಾಜ್ಯ ಸರ್ಕಾರದ ಬುಲ್ಡೋಜರ್ ಅವರ ಎದೆಯ ಮೇಲೆಯೇ ಚಲಿಸುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ: Mumbai Blaze: ಮುಂಬೈನ ಅಪಾರ್ಟ್​​ಮೆಂಟ್​​ನಲ್ಲಿ ಅಗ್ನಿ ಅವಘಡ; 19ನೇ ಅಂತಸ್ತಿನಿಂದ ಜಿಗಿದು ನಿವಾಸಿ ಸಾವು!

  ಮಹತ್ವದ ಉತ್ತರಪ್ರದೇಶ ಚುನಾವಣೆ ಮೇಲೆ ಎಲ್ಲರ ಕಣ್ಣು:

  ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆಲ್ಲುತ್ತಾರೆ ಎಂಬುದು ರಾಜಕೀಯ ನಾಡ್ನುಡಿ. ಹೀಗಾಗಿ ಎಲ್ಲಾ ಪಕ್ಷಗಳು ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆಗೆ ಏರುವ ತವಕದಲ್ಲಿದ್ದಾರೆ. ಇನ್ನೂ ಉತ್ತರ ಪ್ರದೇಶದಲ್ಲಿ ಚುನಾವಣೆ ಬೆನ್ನಿಗೆ ಬಿಜೆಪಿ ಆಡಳಿತ ವಿರೋಧಿ ಅಲೆ ತಲೆ ಎತ್ತಿರುವುದು ಬಿಜೆಪಿಯ ಒಳಗೂ ಸಣ್ಣ ನಡುಕಕ್ಕೆ ಕಾರಣವಾಗಿದೆ. ಇನ್ನೂ ಲಖೀಂಪುರ್​ ಖೇರಿ ಹತ್ಯಾಕಾಂಡ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಪ್ರಸ್ತುತ ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾಗಿದೆ. ಅಲ್ಲದೆ, ಮುಂದಿನ ದೇಶದ ರಾಜಕೀಯಕ್ಕೆ ಉತ್ತರಪ್ರದೇಶ ಚುನಾವಣೆ ದಿಕ್ಸೂಚಿಯಾಗಿರಲಿದೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
  Published by:MAshok Kumar
  First published: