Yogi Cabinet Expansion: ಚುನಾವಣೆ ಹೊಸ್ತಿಲಲ್ಲಿ ಯೋಗಿ ಸಂಪುಟ ವಿಸ್ತರಣೆ; ಹಿಂದುಳಿದ-ದಲಿತರಿಗೆ ಮಂತ್ರಿಗಿರಿ

Uttar Pradesh Cabinet new 7 ministers list: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿ ಇದೆ. ಹಾಗಾಗಿ ಕ್ಷೇತ್ರ ಮತ್ತು ಜಾತಿ ಸಮೀಕರಣದಲ್ಲಿ ಬಿಜೆಪಿ ಸಂಪುಟ ಸರ್ಜರಿಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಿಂದುಳಿದ ಮತ್ತು ದಲಿತ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಅಹಿಂದ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ

ಮೋದಿ,ಸಿಎಂ ಯೋಗಿ  (ಸಾಂದರ್ಭಿಕ ಚಿತ್ರ)

ಮೋದಿ,ಸಿಎಂ ಯೋಗಿ (ಸಾಂದರ್ಭಿಕ ಚಿತ್ರ)

  • Share this:
ಲಕ್ನೋ: ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(cm yogi adityanath) ಸಂಪುಟ ವಿಸ್ತರಣೆಗೆ (cabinet expansion in Uttar Pradesh) ಮುಂದಾಗಿದ್ದಾರೆ. ಇಂದು ಸಂಜೆ 5.3.0ಕ್ಕೆ ಏಳು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಳರಲ್ಲಿ ಓರ್ವ ಬ್ರಾಹ್ಮಣ ಇನ್ನುಳಿದವರು ಹಿಂದುಳಿದ ಮತ್ತು ದಲಿತ ಪಂಗಡಕ್ಕೆ ಸೇರಿದ ಮುಖಂಡರಾಗಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಗುಜರಾತಿನಿಂದ ಮಧ್ಯಾಹ್ನ 2 ಗಂಟೆಗೆ ಲಕ್ನೋ ತಲುಪಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆ ಹಿನ್ನೆಲೆ ಹೈಲೆವಲ್ ಸಭೆ ಸಭೆ ನಡೆಯಲಿದ್ದು, ತದನಂತರ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ನಡುವೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜಿತಿನ್ ಪ್ರಸಾದ್ ಅವರನ್ನು ದೆಹಲಿಯಿಂದ ಲಕ್ನೋಗೆ ಕರೆಸಲಾಗಿದೆ. ಜಿತಿನ್ ಪ್ರಸಾದ್ ಸಹ ಸಂಪುಟ ವಿಸ್ತರಣೆ ಕುರಿತ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಜಿತಿನ್ ಪ್ರಸಾದ್ ಅವರಿಗೂ ಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ಜಾತಿ ಸಮೀಕರಣದ ಲೆಕ್ಕಾಚಾರ 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿ ಇದೆ. ಹಾಗಾಗಿ ಕ್ಷೇತ್ರ ಮತ್ತು ಜಾತಿ ಸಮೀಕರಣದಲ್ಲಿ ಬಿಜೆಪಿ ಸಂಪುಟ ಸರ್ಜರಿಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಿಂದುಳಿದ ಮತ್ತು ದಲಿತ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಅಹಿಂದ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂಬಿತ್ಯಾದಿ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ  ಬರುತ್ತಿವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಬಿಜೆಪಿಗೆ ಜಾಟ್ ಸಮುದಾಯದ ಮತಗಳು ಕೈತಪ್ಪುವ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ.

ಯಾರಿಗೆ ಮಂತ್ರಿ ಭಾಗ್ಯ? 

ಸಂಪುಟ ವಿಸ್ತರಣೆ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಕೆಲ ಹೆಸರುಗಳು ಯುಪಿ ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬಂದಿವೆ. ಆದ್ರೆ ಇದುವರೆಗೂ ಯಾರ ಹೆಸರು ಸಹ ಅಧಿಕೃತಗೊಂಡಿಲ್ಲ.

  •  ಜಿತಿನ್ ಪ್ರಸಾದ್ (ಬ್ರಾಹ್ಮಣ): ಇವರಿಗೆ ಕರೆ ಮಾಡಲಾಗಿದ್ದು, ಈಗಾಗಲೇ ಲಕ್ನೋ ತಲುಪಿದ್ದಾರೆ.

  •  ಸಂಜಯ್ ಗೌಡ (ಅನುಸೂಚಿ ಜಾತಿ): ಇವರು ಅನುಸೂಚಿತ ಜಾತಿ ಮೊರ್ಚಾದ ಅಧ್ಯಕ್ಷರಾಗಿದ್ದಾರೆ.

  •  ಛತ್ರಪಾಲ್ ಗಂಗಾವರ್ (ಕುರ್ಮಿ): ಛತ್ರಪಾಲ್ ಗಂಗಾವರ್ ಬರೇಲಿ ವಿಧಾನಸಭಾ ಕ್ಷೇತ್ರದ ಶಾಸಕರು, ಕುರ್ಮಿ ಸಮುದಾಯನ್ನು ಪ್ರತಿನಿಧಿಸುತ್ತಾರೆ.

  •  ಧರ್ಮವೀರ್ ಪ್ರಜಾಪತಿ (ಓಬಿಸಿ): ಸದ್ಯ ಮಾಟಿಕಲಾ (ಮಣ್ಣಿನ ಕಲೆ)ಬೋರ್ಡ್ ಅಧ್ಯಕ್ಷರಾಗಿದ್ದಾರೆ.

  •  ಪಲಟೂ ರಾಮ್ (ದಲಿತ): ಬಲರಾಂಪುರ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಹೆಸರು ಮೊದಲಿನಿಂದಲೂ ಮಂತ್ರಿ ಸ್ಥಾನಕ್ಕಾಗಿ ವ್ಯಾಪಕವಾಗಿ ಕೇಳಿ ಬಂದಿತ್ತು.

  •  ದಿನೇಶ್ ಖಟಿಕ್ (ಎಸ್‍ಸಿ): ಮೀರತ್ ವಿಧಾನಸಭಾ ಕ್ಷೇತ್ರದ ಶಾಸಕರು. ಖಟಿಕ್ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.

  • ಸಂಗೀತಾ ಬಿಂದ್ (ನಿಷದ್): ಗಾಜಿಪುರ ಸದರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಆಗಿದ್ದ ದಿನಗಳಿಂದಲೇ ಸಂಗೀತಾ ಬಿಂದ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: Punjab Cabinet List: ಪಂಜಾಬ್ ಕ್ಯಾಬಿನೆಟ್ ಫೈನಲ್; ಅಮರೀಂದರ್ ಆಪ್ತರಿಗೆ ಕೊಕ್, 7 ಹೊಸ ಮುಖಗಳಿಗೆ ಮಣೆ

2ನೇ ಬಾರಿ ಸಂಪುಟ ವಿಸ್ತರಣೆ

19 ಮಾರ್ಚ್ 2017ರಂದು ಸರ್ಕಾರ ರಚನೆಯ ಬಳಿಕ 22 ಆಗಸ್ಟ್ 2019ರಂದು ಯೋಗಿ ಸರ್ಕಾರದ ಸಂಪುಟ ವಿಸ್ತರಣೆ ಮಾಡಲಾಗಿತ್ತು. ಅಂದು ಯೋಗಿ ಸಂಪುಟ 56 ಸದಸ್ಯರನ್ನು ಹೊಂದಿತ್ತು. ಮಹಾಮಾರಿ ಕೊರೊನಾಗೆ ಸಂಪುಟದ ಮೂವರ ಸಚಿವರು ನಿಧನ ಹೊಂದಿದ್ದರು. ವಿಜಯ್ ಕುಮಾರ್ ಕಶ್ಯಪ್, ಚೇತನ್ ಚೌಹಾಣ್ ಮತ್ತು ಕಮಲ್ ರಾಣಿ ವರೂಣ್ ಕೊರೊನಾದಿಂದ ಸಾವನ್ನಪ್ಪಿದ್ದರು.

ವರದಿ: ಮಹ್ಮದ್​​ ರಫೀಕ್​ ಕೆ
Published by:Kavya V
First published: