ಹುಡುಗಿ ಕೈಲಿ 22 ಬಾರಿ ಹೊಡೆಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಈಗ ರಾಜಕಾರಣಿ

Saadat Ali enters Politics- ಲಕ್ನೋ ನಗರದಲ್ಲಿ ಸಾರ್ವಜನಿಕವಾಗಿ ಹುಡುಗಿಯೊಬ್ಬಳಿಂದ 22 ಬಾರಿ ಹೊಡೆತ ತಿಂದಿದ್ದ ಕ್ಯಾಬ್ ಡ್ರೈವರ್ ಸಾದತ್ ಅಲಿ ಎಂಬಾತ ಪ್ರಗತಿಶೀಲ್ ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ.

ಲಕ್ನೋನಲ್ಲಿ ಕ್ಯಾಬ್ ಚಾಲಕನಿಗೆ ಯುವತಿ ಹೊಡೆಯುತ್ತಿರುವುದು.

ಲಕ್ನೋನಲ್ಲಿ ಕ್ಯಾಬ್ ಚಾಲಕನಿಗೆ ಯುವತಿ ಹೊಡೆಯುತ್ತಿರುವುದು.

 • News18
 • Last Updated :
 • Share this:
  ಲಕ್ನೋ: ಮಹಿಳೆಯರಿಗೆ ಅನ್ಯಾಯ ಆದರೆ ನೂರೆಂಟು ಸಂಘಟನೆಗಳು ದೌಡಾಯಿಸಿ ಬರುತ್ತವೆ. ಅದೇ ಮಹಿಳೆಯಿಂದ ಪುರುಷನಿಗೆ ದೌರ್ಜನ್ಯವಾದರೆ ಗೋಳು ಕೇಳುವವರು ಯಾರು ಇರುವುದಿಲ್ಲ. ಇಂಥ ಸ್ಥಿತಿಯಲ್ಲಿ ಪುರುಷರ ನೋವಿಗೆ ಧ್ವನಿಯಾಗುವ ಸಲುವಾಗಿ ಸಾದತ್ ಅಲಿ ಎಂಬ ಕ್ಯಾಬ್ ಚಾಲಕ ಉತ್ತರ ಪ್ರದೇಶದಲ್ಲಿ ರಾಜಕಾರಣಕ್ಕೆ ಸೇರಿಕೊಂಡಿದ್ದಾರೆ. ರಾಜ್ಯದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್ ಸ್ಥಾಪಿಸಿರುವ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ ಪಕ್ಷವನ್ನು ಅವರು ಸೇರಿಕೊಂಡಿದ್ದು, ಮಹಿಳೆಯರಿಂದ ಹಿಂಸೆ ಅನುಭವಿಸುತ್ತಿರುವ ಪುರುಷರಿಗೆ ಧ್ವನಿಯಾಗುವುದಾಗಿಯೂ, ಅವರಿಗೆ ನ್ಯಾಯ ಕೊಡಿಸಲು ಹೋರಾಡುವುದಾಗಿಯೂ ಹೇಳಿಕೊಂಡಿದ್ದಾರೆ.

  ಅಂದಹಾಗೆ, ಸಾದತ್ ಅಲಿ ಒಬ್ಬ ಕ್ಯಾಬ್ ಚಾಲಕ. ಈತ ಸೋಷಿಯಲ್ ಮೀಡಿಯಾದಲ್ಲಿ ಬೇರೆಯದೇ ಕಾರಣಕ್ಕೆ ತುಸು ಖ್ಯಾತನಾಗಿದ್ದಾನೆ. ಲಕ್ನೋ ನಗರದ ರಸ್ತೆಯಲ್ಲಿ ಇದೇ ಜುಲೈ 30ರಂದು ಸಾರ್ವಜನಿಕವಾಗಿ ಪ್ರಿಯದರ್ಶಿನಿ ಯಾದವ್ ಎಂಬ ಯುವತಿಯೊಬ್ಬಳು ಈತನ ಮೇಲೆ ಹಲ್ಲೆ ಎಸಗಿದ್ದಳು. ಈತನಿಗೆ 22 ಬಾರಿ ಹಿಗ್ಗಾಮುಗ್ಗ ಹೊಡೆದಿದ್ದಳು. ಈ ವಿಡಿಯೋ ಬಹಳ ವೈರಲ್ ಆಗಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರೀಶೇರ್ ಆಗುತ್ತಲೇ ಇರುತ್ತದೆ.

  ಝೀಬ್ರಾ ಕ್ರಾಸಿಂಗ್ ಬಳಿಯೇ ಕ್ಯಾಬ್ ಡ್ರೈವರ್ ಸಾದತ್ ಅಲಿ ಮೇಲೆ ಪ್ರಿಯದರ್ಶಿನಿ ಯಾದವ್ ಝಾಡಿಸಿದ್ದು ಹಲವರ ಹುಬ್ಬೇರಿಸಿದೆ. ಅಂದು ಘಟನೆ ನಡೆದಾಗ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದರಾದರೂ ಆ ಹುಡುಗಿ ಆಕ್ರೋಶ ತಣಿಯಲಿಲ್ಲ. ಪೊಲೀಸರಿಗೂ ಕೇರ್ ಮಾಡದೇ ಆಕೆ ಸಾದತ್ ಅಲಿಗೆ ಹೊಡೆಯುವುದನ್ನ ಮುಂದುವರಿಸಿದ್ದಳು.

  ಈ ಘಟನೆಗೆ ಕಾರಣ ಏನೆಂಬುದು ಮಾತ್ರ ಗೊತ್ತಾಗಿಲ್ಲ. ಆಕೆ ಅಷ್ಟು ಆಕ್ರೋಶಗೊಳ್ಳುವಂಥ ವರ್ತನೆಯನ್ನ ಕ್ಯಾಬ್ ಡ್ರೈವರ್ ತೋರಿದ್ದನಾ? ಆಥವಾ ಸಣ್ಣ ವಿಚಾರಕ್ಕೆ ಆ ಹುಡುಗಿ ಉಗ್ರಾವತಾರ ತೋರಿದ್ದಳಾ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈಕೆಯ ವರ್ತನೆ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿರುವುದು ಉಂಟು.

  ಆದರೆ, ಸಾದತ್ ಅಲಿ ತನ್ನದೇನೂ ತಪ್ಪಿಲ್ಲ ಎಂದು ವಾದಿಸಿದ್ಧಾನೆ. ಆ ಘಟನೆಯಲ್ಲಿ ತನಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಹೇಳಿರುವ ಆತ, ನ್ಯಾಯ ಪಡೆಯಲೆಂದೇ ರಾಜಕೀಯಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾನೆ.

  ನನಗೆ ನ್ಯಾಯ ಪಡೆಯುವುದು ಮಾತ್ರವಲ್ಲ, ಇತರ ಬಾಧಿತ ಪುರುಷರಿಗೂ ನ್ಯಾಯ ಕೊಡಿಸಲು ಹೋರಾಡುತ್ತೇನೆ. ಹಲವು ಪ್ರಕರಣಗಳಲ್ಲಿ ಪುರುಷರ ಮಾತುಗಳನ್ನ ಆಲಿಸುವ ಕಿವಿಗಳೇ ಇಲ್ಲ ಎಂದು ಹೇಳುವ ಸಾದತ್ ಅಲಿ, ತಾನು ಮಹಿಳೆಯರಿಂದ ಹಿಂಸೆಗೊಳಗಾದ ಪುರಷರಿಗಾಗಿ ಮತ್ತು ದೇಶಾದ್ಯಂತ ಇರುವ ಎಲ್ಲಾ ಕ್ಯಾಬ್ ಚಾಲಕರಿಗಾಗಿ ಧ್ವನಿ ಎತ್ತುತ್ತೇನೆ ಎಂದಿದ್ಧಾರೆ.

  ಇದನ್ನೂ ಓದಿ: PM Kisan Scheme ಹಣ 16 ಸಾವಿರ ರೂಗೆ ಹೆಚ್ಚಿಸಲು ಕೃಷಿ ಬೆಲೆ ಆಯೋಗ ಶಿಫಾರಸು; ಇಲ್ಲಿದೆ ಅದರ ಸಲಹೆಗಳ ಪಟ್ಟಿ

  ಮದುವೆಗೆಂದು ಇಟ್ಟಿದ್ದ 10 ಲಕ್ಷ ಹಣ ಕಳೆದುಕೊಂಡವನ ಕಟ್ಟುಕಥೆ:

  ಮಗಳ ಮದುವೆಗೆ ಒಂದು ತಿಂಗಳು ಮಾತ್ರ ಇದೆ. ಅದಕ್ಕೆಂದೇ 10 ಲಕ್ಷ ರೂ ತೆಗೆದಿರಿಸಿದ್ದ. ಆದರೆ, ಇನ್ನಷ್ಟು ಹಣ ಬೆಳೆಸುವ ಆಸೆಗೆ ಬಿದ್ದು ಬಿಟ್​ಕಾಯಿನ್ ವ್ಯಾಪಾರಕ್ಕೆ ಆ ಹಣ ವಿನಿಯೋಗಿಸಿದ. ಆದರೆ, ನಸೀಬು ಬೇರೆಯೇ ಇತ್ತು. ಆ ಎಲ್ಲಾ 10 ಲಕ್ಷ ರೂ ಹಣವನ್ನು ಬಿಟ್​ಕಾಯಿನ್ ವ್ಯಾಪಾರದಲ್ಲಿ ಕಳೆದುಕೊಂಡ. ಇದು ಮಹಾರಾಷ್ಟ್ರದ ಪಾಲಗಡ್ ಜಿಲ್ಲೆಯ ವ್ಯಾಪಾರಿಯೊಬ್ಬನ ಶೋಚನೀಯ ಕಥೆ. ಇಷ್ಟೇ ಆಗಿದ್ದ ಈ ಸುದ್ದಿ ಬರುತ್ತಿರಲಿಲ್ಲ. ಆತ ಬಿಟ್​ಕಾಯಿನ್ ದಂಧೆಯಲ್ಲಿ ಮದುವೆಗೆಂದು ಎತ್ತಿಟ್ಟಿದ್ದ ಹಣ ಕಳೆದುಕೊಂಡ ಎಂದು ಗೊತ್ತಾದರೆ ಜನರು ಅಪಹಾಸ್ಯ ಮಾಡಬಹುದು ಎಂದು ಭಯಗೊಂಡು ಕಳ್ಳರು ಹಣ ಲಪಟಾಯಿಸಿದರೆಂದು ಸುಳ್ಳು ಕಥೆ ಕಟ್ಟಿದ. ಜೊತೆಗೆ ಪೊಲೀಸ್ ಠಾಣೆಯಲ್ಲೂ ದೂರು ಕೊಟ್ಟ.

  ಇದು ಸುಮಂತ್ ಲಿಗಾಯತ್ ಎಂಬಾತನ ಕಥೆ. ಪಾಲ್​ಗಡ್​ನಲ್ಲಿ ಅಂಗಡಿಗಳಿಗೆ ಈತ ದಿನಸಿ ಮತ್ತಿತರ ವಸ್ತುಗಳನ್ನ ಪೂರೈಸುವ ವ್ಯಾಪಾರಿ. ತನ್ನಿಡೀ ಜೀವಮಾನದಲ್ಲಿ ದುಡಿದು ಉಳಿಸಿದ 10 ಲಕ್ಷ ರೂ ಹಣ ದುರದೃಷ್ಟಕ್ಕೆ ಬಿಟ್​ಕಾಯಿನ್ ವ್ಯವಹಾರದಲ್ಲಿ ನಷ್ಟವಾಗಿ ಹೋಗಿದ್ದು ದುರಂತ. ಅದರಲ್ಲೂ ಮಗಳ ಮದುವೆಗೆ ಒಂದು ತಿಂಗಳಷ್ಟೇ ಇರುವಾಗ ಈ ಬೆಳವಣಿಗೆ ಆಗಿದ್ದು ಸುಮಂತ್​ಗೆ ದಿಕ್ಕು ತೋಚದಂತಾಗಿತ್ತು. ಮನೆಯವರಿಗೆ ವಿಷಯ ತಿಳಿದರೆ ರಾದ್ಧಾಂತ ಆಗುತ್ತದೆಂದು ಕಳ್ಳತನದ ಕಥೆ ಕಟ್ಟಿ ಬಚಾವಾಗಲು ಯತ್ನಿಸಿದ್ದ.

  ಪೊಲೀಸರು ಈತನ ದೂರನ್ನು ಸ್ವೀಕರಿಸಿ ಪ್ರಕರಣವನ್ನ ದಾಖಲಿಸಿಕೊಂಡರು. ತನಿಖೆ ನಡೆಸಿದ ಬಳಿಕ ಪೊಲೀಸರಿಗೆ ಈತ ಕೊಟ್ಟಿದ್ದು ಸುಳ್ಳು ದೂರು ಎಂದು ಗೊತ್ತಾಯಿತು. ಸುಮಂತ್ ಲಿಗಾಯತ್​ನಿಗೆ ಮತ್ತೊಮ್ಮೆ ಇಂಥ ಸುಳ್ಳು ಕಂಪ್ಲೇಂಟ್ ಕೊಡಬಾರೆಂದು ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
  Published by:Vijayasarthy SN
  First published: