ಮುಹೂರ್ತದ ಹೊತ್ತಿಗೆ ಶವವಾದ ವಧು; ಮಂಟಪದಲ್ಲೇ ಮತ್ತೊಂದು ಹುಡುಗಿ ರೆಡಿ !

ಸುರಭಿ ಅವರ ಮೃತದೇಹವನ್ನು ಮತ್ತೊಂದು ಕೋಣೆಯಲ್ಲಿ ಇರಿಸಲಾಗಿತ್ತು. ನಂತರ ಮನೋಜ್ ಕುಮಾರ್ ಅವರ ವಿವಾಹವನ್ನು ಸುರಭಿ ಅವರ ಸಹೋದರಿ ನಿಶಾ ಅವರೊಂದಿಗೆ ನಡೆಸಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮದುವೆ ಮಂಟಪದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದ್ದು, ಸಮಾರಂಭದಲ್ಲಿ ನೆರೆದಿದ್ದವರೆಲ್ಲಾ ಶಾಕ್ ಆಗಿದ್ದಾರೆ. ವರ ತಾಳಿ ಕಟ್ಟುವಾಗಲೇ ವಧು ಸಾವನ್ನಪ್ಪಿದ್ದಾಳೆ. ಆದರೆ ಅದೇ ಮುಹೂರ್ತದಲ್ಲಿ ವರ ವಧುವಿನ ತಂಗಿಗೆ ತಾಳಿ ಕಟ್ಟಿದ್ದಾನೆ. ಇಂತಹ ಅಪರೂಪದ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ಈ ಘಟನೆ ನಡೆದಿದೆ. ಸನಾದ್ಪುರದ ನಿವಾಸಿ ಮನೋಜ್ ಕುಮಾರ್ ಎನ್ನುವ ವರನಿಗೆ ಸುರಭಿ ಎನ್ನುವ ಹುಡುಗಿಯ ಜೊತೆ ವಿವಾಹ ನಿಶ್ಚಯವಾಗಿತ್ತು.

  ಹಿಂದೂ ವಿವಾಹದ ಪ್ರಕಾರ ವಿಧಿ ವಿಧಾನಗಳು ನಡೆಯುತ್ತಿರುವಾಗ, ವಧು ಹೂ ಮಾಲೆ ಹಾಕಿದ ನಂತರ ಇದ್ದಕ್ಕಿದ್ದಂತೆ ವಧು ಸುರಭಿ ವಿವಾಹದ ವೇದಿಕೆಯಲ್ಲಿಯೇ ಕುಸಿದು ಬಿದ್ದಳು. ತಕ್ಷಣ ವೈದ್ಯಕೀಯ ಚಿಕಿತ್ಸೆ ಮಾಡಲಾಯಿತು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ವಧು ಸುರಭಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ. ವಿವಾಹದ ಒತ್ತಡದ ಕಾರಣ ಸುರಭಿಗೆ ಹೃದಯಾಘಾತವಾಗಿದೆ ಎನ್ನುವ ನಿರ್ಣಯಕ್ಕೆ ವೈದ್ಯರು ಬಂದರು. ವಧು ಮೃತಪಟ್ಟ ಕಾರಣ ವಿವಾಹವನ್ನು ನಿಲ್ಲಿಸಬೇಕೇ, ಬೇಡವೇ ಎನ್ನುವ ಚರ್ಚೆ ಆರಂಭವಾಯಿತು. ಕೊನೆಗೆ ವಧುವಿನ ತಂಗಿಯನ್ನು ವರನಿಗೆ ಮದುವೆ ಮಾಡಿಕೊಡುವ ಮೂಲಕ ಈ ವಿವಾಹವನ್ನು ನಿಲ್ಲಿಸದೆ ಮುಂದುವರಿಸುವ ನಿರ್ಣಯಕ್ಕೆ ಎರಡೂ ಕಡೆಯ ಹಿರಿಯರು ಬಂದರು.


  ಇದನ್ನೂ ಓದಿ:Assam Earthquake: 24 ಗಂಟೆ ಕಳೆಯುವ ಮುನ್ನವೇ ಅಸ್ಸಾಂನಲ್ಲಿ 2 ಬಾರಿ ಕಂಪಿಸಿದ ಭೂಮಿ; ರಿಕ್ಟರ್ ಮಾಪನದಲ್ಲಿ 3.8 ತೀವ್ರತೆ ದಾಖಲು

  ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಮಗೆ ತಿಳಿದಿರಲಿಲ್ಲ. ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ನನ್ನ ತಂಗಿ ನಿಶಾ ವರನನ್ನು ಮದುವೆಯಾಗಬೇಕೆಂದು ಯಾರೋ ಸಲಹೆ ನೀಡಿದರು. ಎರಡೂ ಕುಟುಂಬಗಳು ಈ ಬಗ್ಗೆ ಚರ್ಚಿಸಿದರು ಮತ್ತು ನಿಶಾಳನ್ನು ವಿವಾಹವಾಗಲು ವರ ಮನೋಜ್ ಕುಮಾರ್ ಒಪ್ಪಿಗೆ ಸೂಚಿಸಿದರು. ನಿಶಾ ಕೂಡ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದರು ಎಂದು ಸುರಭಿ ಅವರ ಸಹೋದರ ಸೌರಭ್ ಅವರು ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದರು.


  ಸುರಭಿ ಅವರ ಮೃತದೇಹವನ್ನು ಮತ್ತೊಂದು ಕೋಣೆಯಲ್ಲಿ ಇರಿಸಲಾಗಿತ್ತು. ನಂತರ ಮನೋಜ್ ಕುಮಾರ್ ಅವರ ವಿವಾಹವನ್ನು ಸುರಭಿ ಅವರ ಸಹೋದರಿ ನಿಶಾ ಅವರೊಂದಿಗೆ ನಡೆಸಲಾಯಿತು. ಮದುವೆಯ ನಂತರ, ದಿಬ್ಬಣ ಹೊರಟು ಹೋದ ಮೇಲೆ ಸುರಭಿ ಅವರ ಅಂತ್ಯ ಸಂಸ್ಕಾರವನ್ನು ಕೈಗೊಳ್ಳಲಾಯಿತು ಎಂದು ಸೌರಭ್ ಅವರು ಮಾಹಿತಿ ನೀಡಿದ್ದಾರೆ.


  ಇದನ್ನೂ ಓದಿ:Boris Johnson: ಯಾರು ಈ ಕ್ಯಾರಿ ಸೈಮಂಡ್ಸ್? ಬ್ರಿಟನ್ ಪ್ರಧಾನಿಯನ್ನು ಮದುವೆಯಾಗಿರೋ ಚೆಲುವೆ ಸಾಮಾನ್ಯದವಳಲ್ಲ..!

  ಸುರಭಿ ಅವರ ಚಿಕ್ಕಪ್ಪ ಅಜಾಬ್ ಸಿಂಗ್, “ಇದು ನಮ್ಮ ಕುಟುಂಬಕ್ಕೆ ಕಠಿಣ ಸಮಯವಾಗಿತ್ತು. ಒಂದು ಮಗಳು ಒಂದು ಕೋಣೆಯಲ್ಲಿ ಸತ್ತು ಮಲಗಿದ್ದರೆ ಇನ್ನೊಂದು ಮಗಳ ವಿವಾಹವನ್ನು ಇನ್ನೊಂದು ಕೋಣೆಯಲ್ಲಿ ನಡೆಸಲಾಗುತ್ತಿತ್ತು. ಅಂತಹ ಮಿಶ್ರ ಭಾವನೆಗಳಿಗೆ ನಾವು ಎಂದಿಗೂ ಸಾಕ್ಷಿಯಾಗಿಲ್ಲ. ಆಕೆಯ ಸಾವಿನ ದುಃಖ ಮತ್ತು ಈಕೆಯ ಮದುವೆಯ ಸಂತೋಷ ಇನ್ನೂ ನಮ್ಮ ಮನಸ್ಸಿನಲ್ಲಿ ತರಂಗಗಳನ್ನು ಎಬ್ಬಿಸುತ್ತಿದೆ ಎಂದು ಅವರು ಹೇಳಿದರು.
  ಈ ವರ್ಷ ಭಾರತದಲ್ಲಿ ವಿವಾಹೋತ್ಸವಗಳು ಶೋಕ ಸಾಗರದಲ್ಲಿ ಮುಳುಗಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಒಡಿಶಾದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಯುವ ವಧು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಳು. ವಿವಾಹದ ನಂತರ ನಡೆದ ಸಮಾರಂಭದಲ್ಲಿ ಅತಿಯಾಗಿ ಅತ್ತಿದ್ದಕ್ಕಾಗಿ ಆಕೆಗೆ ಹೃದಯಾಘಾತವಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಇದೀಗ ಅಂತಹದೇ ಘಟನೆಯ ಪುನರಾವರ್ತನೆ ನಡೆದಿದೆ.

  Published by:Latha CG
  First published: