HOME » NEWS » National-international » UP BRIDE CALLS OFF WEDDING AFTER GROOM FAILS TO RECITE MULTIPLICATION TABLE OF 2 KVD

ಮದುವೆ ಮಂಟಪದಲ್ಲಿ ಮಗ್ಗಿ ಹೇಳುವಂತೆ ವರನಿಗೆ ಪರೀಕ್ಷೆಯೊಡ್ಡಿದ ವಧು.. ಮುರಿದು ಬಿತ್ತು ಮದುವೆ!

ತಾಳಿ ಕಟ್ಟುವ ಶುಭ ವೇಳೆ ತಪ್ಪಿತು ಲೆಕ್ಕ. ಮಗ್ಗಿ ಪರೀಕ್ಷೆಯಲ್ಲಿ ಮುಗ್ಗರಿಸಿತು ಮದುವೆ.

Kavya V | news18-kannada
Updated:May 8, 2021, 7:15 PM IST
ಮದುವೆ ಮಂಟಪದಲ್ಲಿ ಮಗ್ಗಿ ಹೇಳುವಂತೆ ವರನಿಗೆ ಪರೀಕ್ಷೆಯೊಡ್ಡಿದ ವಧು.. ಮುರಿದು ಬಿತ್ತು ಮದುವೆ!
ಸಾಂದರ್ಭಿಕ ಚಿತ್ರ
  • Share this:
ಲಖನೌ: ಮದುವೆಯಾಗಲು ಬಯಸುವ ಪ್ರತಿ ಹೆಣ್ಣು ತನ್ನ ಪತಿಯಾಗಿ ಬರುವಾತನಲ್ಲಿ ಕೆಲವೊಂದು ಗುಣಗಳನ್ನು ನಿರೀಕ್ಷಿಸೋದು ಸಹಜ. ಚನ್ನಾಗಿ ಓದಿಕೊಂಡಿರಬೇಕು, ಕೆಲಸವಿರಬೇಕು, ಒಳ್ಳೆಯ ಮನಸ್ಸಿರಬೇಕು ಅಂತೆಲ್ಲ ಅಂದುಕೊಂಡಿರುತ್ತಾರೆ. ತಾವು ಬಯಸಿದ ಗುಣಗಳು ಗಂಡನಲ್ಲಿ ಇಲ್ಲದಿದ್ದಾಗ ಹೆಂಡತಿಗೆ ಸಹಜವಾಗೇ ನೋವಾಗುತ್ತೆ. ಉತ್ತರ ಪ್ರದೇಶದಲ್ಲಿ ನಡೆದ ಮದುವೆಯಲ್ಲೂ ಇದೇ ಆಗಿದೆ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದಿದೆ. ವಧು ಮಂಟಪದಲ್ಲಿ ಮದುವೆಗೆ ಒಲ್ಲೆ ಅಂದಿದ್ದು ಏಕೆ ಅಂತ ಕಾರಣ ಕೇಳಿದ್ರೆ ಎಂಥವರಿಗಾದರೂ ಅಚ್ಚರಿಯಾಗುತ್ತೆ. ಕೇಬಲ ಮಗ್ಗಿ ಹೇಳಲು ತಡಬಡಾಯಿಸಿದ ವರನನ್ನು ವರಿಸಲು ಸಾಧ್ಯವೇ ಇಲ್ಲ ಎಂದು ವಧು ಮಂಟಪದಿಂದ ಹೊರ ನಡೆದಿದ್ದಾಳೆ.  

ಮಹೋಬಾ ಜಿಲ್ಲೆಯ ದಾವರ್​​ ಗ್ರಾಮದ ಯುವಕನಿಗೆ ಮನೆಯವರು ಹುಡುಗಿಯನ್ನು ನಿಶ್ಚಿಯಿಸಿದ್ದರು. ಎರಡು ಮನೆಯವರು ಒಪ್ಪಿ ಮದುವೆಯನ್ನೂ ನಿಗದಿಪಡಿಸಿದ್ದರು. ಗಂಡು-ಹೆಣ್ಣಿನ ಮನೆಯ ಕಡೆಯವರೆಲ್ಲಾ ಮದುವೆ ಮಂಟಪದಲ್ಲಿ ಸೇರಿದ್ದರು. ವರ ಶೇರ್ವಾನಿ ತೊಟ್ಟು ತಯಾರಾಗಿದ್ದರೆ, ವಧು ಭರ್ಜರಿ ಲೆಹಂಗಾ ಕಂಗೊಳಿಸುತ್ತಿದ್ದಳು. ಪುರೋಹಿತರು ವರ-ವಧುವನ್ನು ಮಂಟಪಕ್ಕೆ ಕರೆದು ಹಾರ ಬದಲಾಯಿಸಿಕೊಳ್ಳಲು ಹೇಳಿದ್ದಾರೆ. ಹಾರ ಹಾಕಲು ವರ ಮುಂದಾಗುತ್ತಿದಂತೆ ವಧು ತಡೆದಿದ್ದಾಳೆ.

ಹಾರ ಹಾಕುವುದನ್ನು ತಡೆದ ವಧು ಮಗ್ಗಿ ಹೇಳುವಂತೆ ವರನಿಗೆ ಕೇಳಿದ್ದಾಳೆ. ಅರೆ ಇದೆಂಥಾ ಹುಚ್ಚಾಟ ಮದುವೆ ಶಾಸ್ತ್ರದಲ್ಲಿ ಮಗ್ಗಿ ಏಕೆ ಎಂದು ಸುತ್ತ ನೆರೆದಿದ್ದವರು ಅಚ್ಚರಿಕೊಂಡಿದ್ದಾರೆ. ವರ ಸಹ ವಧುವಿನ ವರಸೆಗೆ ಗಾಬರಿಯಾಗಿದ್ದ. ಆದರೆ ದೃಢವಾಗಿ ನಿಂತಿದ್ದ ವಧು 2ರ ಮಗ್ಗಿ ಹೇಳಿದ ಬಳಿಕವೇ ತಾಳಿ ಕಟ್ಟಿಸಿಕೊಳ್ಳೋದು ಅಂತ ಹಠ ಹಿಡಿದಿದ್ದಾಳೆ. ಆಗ ಬೆವರಲು ಶುರುವಾದ ವರ 2ರ ಮಗ್ಗಿಯನ್ನು ಹೇಳಲು ತಡವರಿಸಿದ್ದಾರೆ. 2ರ ಮಗ್ಗಿಯನ್ನೇ ಸರಿಯಾಗಿ ಹೇಳಲು ಬರದವನನ್ನು ಮದುವೆಯಾಗಲ್ಲ ಎಂದು ವಧು ಮಂಟಪದಿಂದ ಹೊರ ನಡೆದಿದ್ದಾಳೆ.

ಯುವತಿಯ ಮನೆಯವರು ಆರೋಪಿಸಿರುವ ಪ್ರಕಾರ ವರನ ಓದಿನ ಬಗ್ಗೆ ಅವರ ಮನೆಯವರು ಸುಳ್ಳು ಹೇಳಿದ್ದಾರಂತೆ. ಶಾಲೆಗೇ ಹೋಗದವನನ್ನು ಪದವಿ ಪಡೆದಿದ್ದಾನೆ ಎಂದು ಯಾಮಾರಿಸಲು ಯತ್ನಿಸಿದ್ದಾರೆ. ಕೊನೆ ಕ್ಷಣದಲ್ಲಿ ವಧುವಿಗೆ ಅನುಮಾನ ಬಂದು ಮಗ್ಗಿ ಹೇಳುವಂತೆ ಪರೀಕ್ಷೆಯೊಡ್ಡಿದ್ದಾಳೆ. ಆಗ ವರನ ಓದಿನ ಬಂಡವಾಳ ಬಯಲಾಗಿದೆ. ಶಿಕ್ಷಣದ ಬಗ್ಗೆ ಸುಳ್ಳು ಹೇಳಿದ್ದಕ್ಕೆ ಮದುವೆ ಮುರಿದು ಬಿದ್ದಿದೆ.

ಮದುವೆ ಮಂಟಪದಲ್ಲಿದ್ದ ಕೆಲವರು ವಧುವನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ವಧು ಬಿಲ್​ಕುಲ್​ ಇದಲ್ಲೆ ಒಪ್ಪಿಲ್ಲ. ಸರಳವಾದ ಲೆಕ್ಕವೂ ಬರದವನು, ಮದುವೆಗೆ ಮುನ್ನವೇ ಸುಳ್ಳು ಹೇಳಿದವನು ನನಗೆ ಗಂಡನಾಗುವು ಬೇಡ ಎಂದು ದಿಟ್ಟವಾಗಿ ಹೇಳಿದ್ದಾರೆ. ಮಗ್ಗಿ ಹೇಳಲು ಮುಗ್ಗರಿಸಿ ವರ ಮಹಾಶಯ ಪೆಚ್ಚು ಮೋರೆ ಹಾಕಿಕೊಂಡು ಮನೆಯತ್ತ ಮುಖ ಮಾಡಿದ್ದಾನೆ. ಮದುವೆಗೆ ಓದಿರಲೇ ಬೇಕು ಅಂತಲ್ಲ, ಆದರೆ ಓದಿನ ಬಗ್ಗೆ ಸುಳ್ಳು ಹೇಳುವುದು ತಪ್ಪು. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ ಈ ಮದುವೆ ಮುರಿದು ಬಿದ್ದಿದೆ.
Published by: Kavya V
First published: May 8, 2021, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories