• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Lucknow: ಲಕ್ನೋ ಹೆಸರು ಮೊಘಲ್​ರದ್ದು, ಅದನ್ನು ಲಖನ್​ಪುರ್ ಅಥವಾ ಲಕ್ಷ್ಮಣಪುರ್ ಎಂದು ಬದಲಾಯಿಸಿ, ಕೇಂದ್ರಕ್ಕೆ ಬಿಜೆಪಿ ಸಂಸದ ಮನವಿ

Lucknow: ಲಕ್ನೋ ಹೆಸರು ಮೊಘಲ್​ರದ್ದು, ಅದನ್ನು ಲಖನ್​ಪುರ್ ಅಥವಾ ಲಕ್ಷ್ಮಣಪುರ್ ಎಂದು ಬದಲಾಯಿಸಿ, ಕೇಂದ್ರಕ್ಕೆ ಬಿಜೆಪಿ ಸಂಸದ ಮನವಿ

ಸಂಗಮ್ ಲಾಲ್​ ಗುಪ್ತಾ

ಸಂಗಮ್ ಲಾಲ್​ ಗುಪ್ತಾ

ಮೊಘಲರ ಕಾಲದಲ್ಲಿ ಈಗಿನ ಲಕ್ನೋವನ್ನು ಲಕ್ಷ್ಮಣಪುರಿ ಎಂದು ಕರೆಯಲಾಗುತ್ತಿತ್ತು. ಮೊಘಲರು ನಗರದ ಹೆಸರನ್ನು ಲಕ್ನೋ, ನವಾಬರ ನಗರ ಎಂದು ಬದಲಾಯಿಸಿದರು. ಹಾಗಾಗಿ ಲಕ್ನೋ ನಗರವನ್ನು ಲಖನ್‌ಪುರಿ ಅಥವಾ ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Lucknow, India
  • Share this:

ಲಕ್ನೋ:  ದೇಶದಲ್ಲಿ ಈಗಾಗಲೆ ಕೆಲವು ನಗರ, ಉದ್ಯಾನವನ (Garden), ಸ್ಟೇಡಿಯಂಗಳ (Stadium) ಹೆಸರನ್ನು ಬದಲಾಯಿಸಲಾಗುತ್ತಿದೆ. ಕೆಲವು ಪ್ರಮುಖ ನಗರಗಳ ಹೆಸರನ್ನು ಬಿಜೆಪಿ (BJP) ಸರ್ಕಾರದಲ್ಲಿ ಬದಲಾಯಿಲಾಗಿದೆ. ಇದೀಗ ಉತ್ತರ ಪ್ರದೇಶದ (Uttar Pradesh) ಪ್ರತಾಪ್​ಗಢ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾ (Sangam lal Gupta)ಉತ್ತರ ಪ್ರದೇಶದ ರಾಜಧಾನಿ ಲಕ್ನೋ (Lucknow) ನಗರದ ಹೆಸರನ್ನು ಬದಲಾಯಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್​ ಶಾರಿಗೆ (Amit Shah) ಮನವಿ ಮಾಡಿದ್ದಾರೆ. ಗುಪ್ತಾ ಲಕ್ನೋ ನಗರವನ್ನು ಲಖನ್​ಪುರ (Lakhanpur) ಅಥವಾ ಲಕ್ಷ್ಮಣ್​ಪುರ (Lakshmanpur) ಎಂದು ಮರು ನಾಮಕರಣ ಮಾಡಬೇಕು. ಲಕ್ನೋ ಎಂಬುದು ಮೊಘಲು ನಗರಕ್ಕೆ ಇಟ್ಟಿರುವ ಹೆಸರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


" ಮೊಘಲರ ಕಾಲದಲ್ಲಿ ಈಗಿನ ಲಕ್ನೋವನ್ನು ಲಕ್ಷ್ಮಣಪುರಿ ಎಂದು ಕರೆಯಲಾಗುತ್ತಿತ್ತು. ಮೊಘಲರು ನಗರದ ಹೆಸರನ್ನು ಲಕ್ನೋ, ನವಾಬರ ನಗರ ಎಂದು ಬದಲಾಯಿಸಿದರು. ಹಾಗಾಗಿ ಲಕ್ನೋ ನಗರವನ್ನು ಲಖನ್‌ಪುರಿ ಅಥವಾ ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಹೇಳಿದ್ದಾರೆ.


ರಾಮ ಲಕ್ಷ್ಮಣನಿಗೆ ಕೊಟ್ಟ ಉಡುಗೊರೆ


ಅಂದಿನ ನವಾಬ್ ಅಸಫ್-ಉದ್-ದೌಲಾ ನಗರದ ಹೆಸರನ್ನು ಲಕ್ನೋ ಎಂದು ಮರುನಾಮಕರಣ ಮಾಡಿದ್ದಾರೆ. ತ್ರೇತಾ ಯುಗದಲ್ಲಿ ಭಗವಾನ್ ರಾಮ ತನ್ನ ಸಹೋದರ ಮತ್ತು ಅಯೋಧ್ಯೆಯ ರಾಜ ಲಕ್ಷ್ಮಣನಿಗೆ ಈ ನಗರವನ್ನು ಉಡುಗೊರೆಯಾಗಿ ನೀಡಿದ್ದರು. ಲಕ್ನೋದ ಹೆಸರು ಆಗ ಲಖನ್‌ಪುರ ಮತ್ತು ಲಕ್ಷ್ಮಣಪುರವಾಗಿತ್ತು. ಆದರೆ 48ನೇ ಶತಮಾನದಲ್ಲಿ, ನವಾಬ್ ಅಸಫ್-ಉದ್-ದೌಲಾ ಇದನ್ನು ಲಕ್ನೋ ಎಂದು ಮರುನಾಮಕರಣ ಮಾಡದ್ದಾನೆ ಎಂದು ಗುಪ್ತಾ ವಾದಿಸಿದ್ದಾರೆ.


ಇದನ್ನೂ ಓದಿ: Mamata Banerjee: ಈಗಿರುವ ಕಾಂಗ್ರೆಸ್ ಬಿಜೆಪಿ ಬಿ ಟೀಮ್, ಡಬಲ್ ಇಂಜಿನ್ ಸರ್ಕಾರದ ಸದ್ದಡಗಿಸಲು ಟಿಎಂಸಿಯಿಂದ ಮಾತ್ರ ಸಾಧ್ಯ ಎಂದ ದೀದಿ


ಮೊಘಲ್ ಇತಿಹಾಸ ಹೇಳುವುದು ಬೇಡ


ಲಕ್ನೋದ ನವಾಬ್​ ಐಷಾರಾಮಿ ಮತ್ತು ದುಂದುವೆಚ್ಚದ ಕಥೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಹೇಳುವ ಮೂಲಕ ಈ ಅಮೃತ ಕಾಲ ದಲ್ಲೂ ಗುಲಾಮಗಿರಿಯ ಸಂದೇಶವನ್ನು ರವಾನಿಸುವುದು ತಪ್ಪಾಗುತ್ತದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಸಲುವಾಗಿ ನಗರವನ್ನು ಮರುನಾಮಕರಣ ಮಾಡುವಂತೆ ಸಂಗಮ್ ಲಾಲ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.




ಅಲಹಾಬಾದ್​ ಅನ್ನು ಪ್ರಯಾಗ್​ರಾಜ್ ಎಂದು ಬದಲಾವಣೆ


ಉತ್ತರ ಪ್ರದೇಶದಲ್ಲಿ ಈ ಹಿಂದೆ ನಗರದ ಹೆಸರು ಬದಲಾವಣೆ ನಡೆದಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್ ಎಂಬ ಹಳೆಯ ಹೆಸರಿಗೆ ಮರುನಾಮಕರಣ ಮಾಡಲಾಗಿತ್ತು. ಅಲ್ಲದೆ ಮುಸ್ತಫಾಬಾದ್​ಗೆ ರಾಮ್​ಪುರ ಎಂದು ಬದಲಿಸಿದ್ದರು. ಐತಿಹಾಸಿಕ ಮುಘಲ್ ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು. ನಂತರ ಆದಿತ್ಯನಾಥ್​ ಸರ್ಕಾರದ ಆಗ್ರಾದ ಹೆಸರನ್ನು ಬದಲಾವಣೆ ಮಾಡಲು ಚಿಂತನೆ ನಡೆಸಿತ್ತಾದರೂ, ವಿಶ್ವ ವಿಖ್ಯಾತ ತಾಜ್​ಮಹಲ್​ ಆಗ್ರದೊಂದಿಗೆ ಪ್ರಸಿದ್ಧಿ ಪಡೆದಿದ್ದರಿಂದ ಆ ಯೋಜನೆ ಕೈಗೂಡಿರಲಿಲ್ಲ.


ಹೈದರಾಬಾದ್​ಗೆ ಭಾಗ್ಯನಗರ ಹೆಸರು


2020ರಲ್ಲಿ ಹೈದರಾಬಾದ್​ ಸ್ಥಳೀಯ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದ್ದರು.


ಪ್ರಧಾನಿಯಿಂದಲೂ ಸುಳಿವು


ಕಳೆದ ವರ್ಷ ಜುಲೈನಲ್ಲಿ ಹೈದರಾಬಾದ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಹೈದರಾಬಾದ್​ ನಗರವನ್ನು ಭಾಗ್ಯನಗರ ಎಂದು ಕರೆದಿದ್ದರು. ಹೈದರಾಬಾದ್​ ಎಂಬ ಹೆಸರು ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ಬಂದಿದೆ. ಈ ನಗರವನ್ನು ಸರ್ಧಾರ್​ ವಲ್ಲಭ ಭಾಯಿ ಪಟೇಲರು ಭಾಗ್ಯ ನಗರ ಎಂದು ಕರೆದಿದ್ದರು. ನಾವು ಪಟೇಲರ ಕಲ್ಪನೆಯನ್ನು ಜಾರಿಗೆ ತರಲು ಬಿಜೆಪಿ ಕಾರ್ಯಪ್ರೌವೃತ್ತರಾಗಬೇಕೆಂದು ತಿಳಿಸಿದ್ದರು.

Published by:Rajesha M B
First published: