UP: ಬಿಜೆಪಿ ಉತ್ತರ ಪ್ರದೇಶದ ಸಮಸ್ಯೆ ಮರೆಮಾಚಲು ಪ್ರಯತ್ನಿಸುತ್ತಿದೆ: ಕಾಂಗ್ರೆಸ್ ಆರೋಪ

ಸೋಮವಾರದ ಚುನಾವಣೆಯ ನಂತರ, ಉತ್ತರ ಪ್ರದೇಶವು ತನ್ನ ಮೊದಲ ಉಪ ಸಭಾಪತಿಯನ್ನು 14 ವರ್ಷಗಳ ಅಂತರದ ನಂತರ ಪಡೆಯುತ್ತದೆ. 2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, 403 ಸದಸ್ಯ ಬಲದ ಯುಪಿ ಶಾಸಕಾಂಗ ಸಭೆಯಲ್ಲಿ ಬಿಜೆಪಿ 304 ಸ್ಥಾನಗಳನ್ನು ಗೆದ್ದಿತ್ತು ಮತ್ತು ಸದನದಲ್ಲಿ ಅತ್ಯಂತ ಹೆಚ್ಚಿನ ಬಹುಮತ ಇರುವ ಕಾರಣ ಅಗರ್ವಾಲ್ ಗೆಲುವು ನೂರರಷ್ಟು ಖಚಿತವಾದಂತಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಆಡಳಿತಾರೂ BJP ಬಿಜೆಪಿ ಉಪಸಭಾಪತಿ ಸ್ಥಾನಕ್ಕೆ ಅನವಶ್ಯಕ ಚುನಾವಣೆಗೆ ಹೋಗುವ ಮೂಲಕ ಉತ್ತರ ಪ್ರದೇಶವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಸರ್ಕಾರ ಏನನ್ನೂ ಉತ್ತರ ನೀಡದೆ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ Congress ಸೋಮವಾರ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿತು.

  ಅಕ್ಟೋಬರ್ 3 ರಂದು ಲಖಿಂಪುರ್ ಖೇರಿ Lakhimpur Kheri ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ವಿಧಾನಸೌಧದ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು.

  ಬಿಜೆಪಿ ಮತ್ತು ಎಸ್‌ಪಿ ಎರಡೂ ಈ ವಿಚಾರವಾಗಿ ಸೌಹಾರ್ದ ಯುತ ಹೋರಾಟದಲ್ಲಿ ತೊಡಗಿಕೊಂಡಿವೆ ಮತ್ತು ಚುನಾವಣೆಗೆ ಸಜ್ಜಾಗಿ ಕುಳಿತುಕೊಂಡಿವೆ ಮತ್ತು ರಾಜ್ಯ ಎದುರಿಸುತ್ತಿರುವ ವಿವಿಧ ತೀವ್ರತರವಾದ ಸಮಸ್ಯೆಗಳ ಬಗ್ಗೆ ಸರ್ಕಾರ ಚರ್ಚಿಸುವುದಿಲ್ಲ ಎಂದು ಪಕ್ಷವು ಆರೋಪಿಸಿದೆ. ಬಿಜೆಪಿ ಅಥವಾ ಸಮಾಜವಾದಿ ಪಕ್ಷವು ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ರೈತರಿಗೆ ನ್ಯಾಯ ಒದಗಿಸಲು ಅಥವಾ ಈ ಮಹತ್ವದ ವಿಷಯವನ್ನು ಚರ್ಚಿಸಲು ಬಯಸುವುದಿಲ್ಲ. ಅವರು "ನೂರಾ ಕುಸ್ತಿ" (ಸ್ನೇಹಪರ ಹೋರಾಟ) ಮತ್ತು ಆದ್ದರಿಂದ ನಾವು ಉಪ ಸ್ಪೀಕರ್ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಮತ್ತು ಧರಣಿಯಲ್ಲಿ ಕುಳಿತಿದ್ದೇವೆ ಎಂದು ಯುಪಿಸಿಸಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಪಿಟಿಐಗೆ ತಿಳಿಸಿದರು.

  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವವರೆಗೂ ಕಾಂಗ್ರೆಸ್ ಈ ಹೋರಾಟವನ್ನು ಮುಂದುವರಿಸುತ್ತದೆ, ಈ ವಿಷಯದ ಕುರಿತು ನಾವು ಧರಣಿ ಕುಳಿತಿದ್ದೇವೆ ಎಂದು ಅವರು ಹೇಳಿದರು. ಉಪ ಸ್ಪೀಕರ್ ಹುದ್ದೆಗೆ ನಂತರದ ದಿನಗಳಲ್ಲಿ ಚುನಾವಣೆ ನಡೆಯಲಿ, ಈಗ ಏಕೆ ಅವಸರ ಎಂದು ಪ್ರಶ್ನಿಸಿದರು.

  ಸಮಾಜವಾದಿ ಪಕ್ಷದ ಶಾಸಕರಾಗಿ ಆಯ್ಕೆಯಾದ ಆದರೆ ಆಡಳಿತಾರೂ BJP ಬಿಜೆಪಿಗೆ ಒಗ್ಗೂಡಿದ ನಿತಿನ್ ಅಗರ್ವಾಲ್, ಕೇಸರಿ ಪಕ್ಷದ ಬೆಂಬಲದೊಂದಿಗೆ ಉತ್ತರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಲು ಸಿದ್ಧರಾಗಿದ್ದಾರೆ.

  ಸ್ಪರ್ಧೆಯಲ್ಲಿ ತನ್ನ ಅಧಿಕೃತ ಅಭ್ಯರ್ಥಿಯಾಗಿ ನರೇಂದ್ರ ವರ್ಮಾ ಅವರನ್ನು ಕಣಕ್ಕಿಳಿಸಿರುವ ಸಮಾಜವಾದಿ ಪಕ್ಷವು ಈಗ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಿದೆ. ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಜಾಪ್ರಭುತ್ವವನ್ನು ಹಾಳುಗೆಡವಲು ಯತ್ನಿಸುತ್ತಿದೆ ಎಂದು ಆರೋಪಿಸಿ, ಆ ಸ್ಥಾನ ಸಾಂಪ್ರದಾಯಿಕವಾಗಿ ವಿರೋಧ ಪಕ್ಷಕ್ಕೆ ಹೋಗಬೇಕು ಎಂದು ಪ್ರತಿಪಾದಿಸಿದ್ದಾರೆ.

  ಸೋಮವಾರದ ಚುನಾವಣೆಯ ನಂತರ, ಉತ್ತರ ಪ್ರದೇಶವು ತನ್ನ ಮೊದಲ ಉಪ ಸಭಾಪತಿಯನ್ನು 14 ವರ್ಷಗಳ ಅಂತರದ ನಂತರ ಪಡೆಯುತ್ತದೆ. 2017 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, 403 ಸದಸ್ಯ ಬಲದ ಯುಪಿ ಶಾಸಕಾಂಗ ಸಭೆಯಲ್ಲಿ ಬಿಜೆಪಿ 304 ಸ್ಥಾನಗಳನ್ನು ಗೆದ್ದಿತ್ತು ಮತ್ತು ಸದನದಲ್ಲಿ ಅತ್ಯಂತ ಹೆಚ್ಚಿನ ಬಹುಮತ ಇರುವ ಕಾರಣ ಅಗರ್ವಾಲ್ ಗೆಲುವು ನೂರರಷ್ಟು ಖಚಿತವಾದಂತಾಗಿದೆ.

  ಲಖಿಂಪುರ ಹಿಂಸಾಚಾರಕ್ಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಲಲ್ಲು, ರೈತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅದು ಸಿಗುವುದೂ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ರೈತರು ಹೀನಾಯವಾಗಿ ಕೊಲ್ಲಲ್ಪಟ್ಟರು ಮತ್ತು ನ್ಯಾಯ ಸಿಗಲಿಲ್ಲ, ಉತ್ತರ ಪ್ರದೇಶದ ಜನರು ತಮ್ಮ ಪಾಡಿಗೆ ತಾವು ಈ ಎಲ್ಲಾ ಕೃತ್ಯಗಳನ್ನು ನೋಡುತ್ತಿದ್ದಾರೆ. ಸಚಿವರನ್ನು ಇನ್ನೂ ವಜಾ ಮಾಡಿಲ್ಲ. ಮಗನನ್ನು ಸುಮ್ಮನೆ ಬಂಧಿಸಲಾಗಿದೆ, ತಂದೆ ತನ್ನ ಸ್ಥಾನವನ್ನು ಬಿಡದೆ ಮುಂದುವರಿಯುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ. ಈ ವಿಷಯದ ತನಿಖೆಗಾಗಿ ಅಲ್ಲಿಗೆ ಹೋಗುವ ಅಧಿಕಾರಿ ಮಂತ್ರಿಗೆ ಅಡಿಯಾಳಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಯುತ ತನಿಖೆ ಇದರಿಂದ ಸಾಧ್ಯವೇ ಎಂದು ಲಲ್ಲು ಕೇಳಿದರು.

  ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಎಂಟು ಜನರಲ್ಲಿ ನಾಲ್ವರು ರೈತರು, ಬಿಜೆಪಿ ಕಾರ್ಯಕರ್ತರು ಇದ್ದ ವಾಹನವನ್ನು ಹತ್ತಿಸಿ ಹೊಡೆದುರುಳಿಸಲಾಯಿತು. ಆಗ ಕೋಪಗೊಂಡ ರೈತರು ವಾಹನಗಳಲ್ಲಿ ಇದ್ದ ಕೆಲವರನ್ನು ಹೊಡೆದರು. ಮೃತರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಚಾಲಕ ಸೇರಿದ್ದಾರೆ. ಕೇಂದ್ರ ಗೃಹ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರು ಒಂದು ವಾಹನದಲ್ಲಿದ್ದರು ಎಂದು ರೈತರು ಹೇಳಿದ್ದಾರೆ, ಅವರು ಆ ಸಮಯದಲ್ಲಿ ಬೇರೆ ಕಾರ್ಯಕ್ರಮದಲ್ಲಿದ್ದರು ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ಸೃಷ್ಟಿಸಲಾಗುತ್ತಿದೆ. ಹೋರಾಟ ತೀವ್ರವಾದ ಮೇಲೆ ಆಶಿಶ್ ಮಿಶ್ರಾ ಅವರನ್ನು ಅಕ್ಟೋಬರ್ 9 ರಂದು ಬಂಧಿಸಲಾಯಿತು.

  ಸರ್ಕಾರದಿಂದ ಮೂರು ಹೊಸ ಕೃಷಿ ಕಾನೂನುಗಳ ಬಗ್ಗೆ ಯಾವುದೇ ಹೇಳಿಕೆಯಿಲ್ಲ ಮತ್ತು ಕಬ್ಬು, ಭತ್ತದ ಬೆಲೆ ಅಥವಾ ಬೀದಿ ಜಾನುವಾರುಗಳ ಸಮಸ್ಯೆಯ ಬಗ್ಗೆ ಚರ್ಚಿಸುವ ಅಗತ್ಯವೇ ಅವರಿಗೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಆದರೆ, ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಉಪ ಸ್ಪೀಕರ್ ಆಯ್ಕೆಗೆ ಉತ್ಸುಕರಾಗಿದ್ದು, ನಾಮಪತ್ರ ಸಲ್ಲಿಸಲಾಗುತ್ತಿವೆ ಎಂದು ಅವರು ಹೇಳಿದರು.

  Also read: Operation Congress: ಬೆಳಗಾವಿಯಲ್ಲಿ ಆಪರೇಷನ್ ಕಾಂಗ್ರೆಸ್; ರಮೇಶ್​​ ಜಾರಕಿಹೊಳಿಗೆ‌ ಫೈಟ್‌ ಕೊಡಲು ಪೂಜಾರಿಗೆ ಗಾಳ..!

  ದೇಶದ ರೈತರು ಮತ್ತು ಸೈನಿಕರು ಇಂದು "ಅತೃಪ್ತರಾಗಿದ್ದಾರೆ" ಆದರೆ ಸರ್ಕಾರದಿಂದ ಅವರಿಗೆ ಕಿಂಚಿತ್ತೂ ಉಪಯೋಗವಿಲ್ಲ. ಎಸ್ ಪಿ ಕೂಡ ಈ ಸಮಸ್ಯೆಗಳನ್ನು ಎತ್ತಲು ಬಯಸುವುದಿಲ್ಲ ಎಂದು ಆರೋಪಿಸಿದರು.
  Published by:HR Ramesh
  First published: