• Home
 • »
 • News
 • »
 • national-international
 • »
 • UP Assembly Election 2022: ’ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ’; ಪ್ರಿಯಾಂಕಾ ಗಾಂಧಿ ತಾಕೀತು

UP Assembly Election 2022: ’ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ’; ಪ್ರಿಯಾಂಕಾ ಗಾಂಧಿ ತಾಕೀತು

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

ತಮ್ಮ ಮಾತು ನಿಜವಲ್ಲ ಎನ್ನುವುದು ಮೋದಿಗೆ ಗೊತ್ತು. ಆದರೆ ಚುನಾವಣೆ ಸೋಲುವ ಭಯದಿಂದ ಹೀಗೆಲ್ಲಾ ಹೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನೇಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳ ಬಗ್ಗೆ ಕೂಡ ಮಾತನಾಡಬೇಕು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ. 

 • Share this:

  ಲಕ್ನೋ (ಫೆ. 21): ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಮೂರನೇ ಹಂತದ ಮತದಾನ ಮುಗಿದಿದ್ದು ಚುನಾವಣಾ ಕಣದ ಬಿಸಿ‌ ಈಗ ಹೆಚ್ಚಾಗಿದೆ. ಆಡಳಿತಾರೂಢ ಬಿಜೆಪಿ (BJP) ಮತ್ತು ಪ್ರತಿಪಕ್ಷಗಳ (Opposition Parties)ಗಳ ನಡುವೆ ವಾಗ್ಯುದ್ದ ತೀವ್ರಗೊಂಡಿದೆ. ಪ್ರತಿಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress In charge and AICC General Secretary Priyanka Gandhi) ಅವರು 'ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ' ಎಂದು ತಾಕೀತು ಮಾಡಿದ್ದಾರೆ.


  ಸುಳ್ಳು ಹೇಳುತ್ತಿರುವ ಮೋದಿ


  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂತಹ ಆರೋಪ ಮಾಡುತ್ತಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಲಿ. ಪ್ರತಿಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂಬುದು ನಿಜವಲ್ಲ ಎನ್ನುವುದು ಅವರಿಗೂ (ಮೋದಿ) ಗೊತ್ತು. ಆದರೆ ಚುನಾವಣೆ ಕಾರಣಕ್ಕೆ ಮತ್ತು ಸೋಲುವ ಭಯದಿಂದ ಹೀಗೆಲ್ಲಾ ಹೇಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನೇಕ ಸರ್ಕಾರಿ ಹುದ್ದೆಗಳು ಖಾಲಿ ಇರುವಾಗ ಅವರು ಸಂಬಂಧಿತ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.


  ಇದನ್ನೂ ಓದಿ: Accident: ರಾಜಸ್ಥಾನ ಕಾರು ಅಪಘಾತಕ್ಕೆ ಮೋದಿ ಸಂತಾಪ, ಮೃತಪಟ್ಟವರಿಗೆ 2 ಲಕ್ಷ ಪರಿಹಾರ ಘೋಷಣೆ


  ಮೋದಿ ಹೇಳಿದ್ದೇನು?


  ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಭಾನುವಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, "ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರ ವರ್ತನೆ ಅಪಾಯಕಾರಿ, ಈ ಜನರು ಒಸಾಮಾ (ಬಿನ್ ಲಾಡೆನ್) ನಂತಹ ಭಯೋತ್ಪಾದಕನನ್ನು ಜಿ ಎಂದು ಕರೆಯುತ್ತಾರೆ. ಇಂತಬ ರಾಜಕೀಯ ಪಕ್ಷಗಳ ಬಗ್ಗೆ ನಾವು ಎಚ್ಚರದಿಂದಿರಬೇಕು. ಅವರು ಕುರ್ಚಿಗಾಗಿ ದೇಶವನ್ನು ಪಣಕ್ಕಿಡಬಹುದು. ಅವರು ದೇಶದ ಭದ್ರತೆಯೊಂದಿಗೆ ಆಟವಾಡುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಸೋಮವಾರ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಪ್ರಚಾರ ಮಾಡುತ್ತಾ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


  ಗೆಲುವು ನಮ್ಮದೇ ಎಂದ ಅಖಿಲೇಶ್ ಯಾದವ್


  ಇನ್ನೊಂದೆಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಹಿಂದೆ ಮೊದಲೆರಡು ಹಂತಗಳಲ್ಲಿ ಮತದಾನ ನಡೆದಿದ್ದ ಕ್ಷೇತ್ರಗಳ ಪೈಕಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷ ಶತಕ ಬಾರಿಸಿದೆ ಎಂದು ಹೇಳಿದ್ದರು‌. ಈಗ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ 3ನೇ ಹಂತದ ಮತದಾನದಲ್ಲೂ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನವಾದ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ:Punjab Assembly Elections: ಪಂಜಾಬ್​​ನಲ್ಲಿ ಕಡಿಮೆ ಪ್ರಮಾಣದ ಮತದಾನ- ಎಎಪಿ, ಸಿಧುಗೆ ಗೆಲುವಿನ‌ ಚಿಂತೆ


  ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ


  ಬಿಜೆಪಿ ನಾಯಕರು ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಮಾತೆತ್ತಿದರೆ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್ ಅವರು 'ರಾಜ್ಯದಲ್ಲಿ 'ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆಗ್ರಾದಲ್ಲಿ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ನಂತರ ಕೊಲ್ಲಲಾಯಿತು. ಆಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನಿದ್ದೆ ಮಾಡುತ್ತಿದ್ದಾರಾ? ಅವರು ಜವಾಬ್ದಾರಿಯನ್ನು ನಿಭಾಯಿಸಲು ಮತ್ತು ಅಪರಾಧಿಯನ್ನು ಶಿಕ್ಷಿಸಲು ಸಾಧ್ಯವಾಯಿತೇ? ಅವರು ಗೋರಖ್‌ಪುರದ ಎಕ್ಸ್‌ಪ್ರೆಸ್‌ವೇಗೆ ಸೇರಲು ಸಹ ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.

  Published by:Latha CG
  First published: