ಯುವಕನಿಗೆ ಬ್ಯಾಕ್ ಟು ಬ್ಯಾಕ್ ಕಪಾಳ ಮೋಕ್ಷ ಮಾಡಿದ ACP, ವಿಡಿಯೋ ವೈರಲ್

ಉತ್ತರ ಪ್ರದೇಶದಲ್ಲಿ ರೋಡ್ ರೋಮಿಯೋ ಒಬ್ಬನಿಗೆ ಎಸಿಪಿ ಕಪಾಳಮೋಕ್ಷ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರೋಡ್ ರೋಇಯೋಗೆ ಕಪಾಳಮೋಕ್ಷ

ರೋಡ್ ರೋಇಯೋಗೆ ಕಪಾಳಮೋಕ್ಷ

  • Share this:
ಉತ್ತರ ಪ್ರದೇಶ(Uttar Pradesh)ದಲ್ಲಿ ಪೊಲೀಸರು ರೋಡ್ ರೋಮಿಯೋಗಳಿಗೆ ಬಿಸಿ ಮುಟ್ಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಗಲ್ಲಿ ಗಲ್ಲಿ ಸುತ್ತಿಕೊಂಡು ಹೆಣ್ಮಕ್ಕಳನ್ನು ಛೇಡಿಸೋ (Teasing girls) ಯುವಕರಿಗೆ ಇಲ್ಲಿ ಪೊಲೀಸರ ದೊಣ್ಣೆ ಏಟು ಪಕ್ಕಾ. ಇದೀಗ ಉತ್ತರ ಪ್ರದೇಶದಲ್ಲಿ ರೋಡ್ ರೋಮಿಯೋ (Road Romeo) ಒಬ್ಬನಿಗೆ ಎಸಿಪಿ (ACP) ಕಪಾಳಮೋಕ್ಷ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾ(Social media)ದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿಯಾನಾಥ್ ಅವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಆ್ಯಂಟಿ ರೋಮಿಯೋ ಸ್ಕ್ವಾಡ್ (Anti-Romeo Squad) ಮತ್ತೆ ಸಕ್ರಿಯವಾಗಿದೆ. ತಾಜಾ ಘಟನೆಯೊಂದರಲ್ಲಿ, ಕಾನ್ಪುರ ಜಿಲ್ಲೆಯಲ್ಲಿ ಈವ್ಟೀಸಿಂಗ್ ಆರೋಪದ ಮೇಲೆ ಯುವಕನೊಬ್ಬನಿಗೆ ಯುಪಿ ಪೊಲೀಸ್ ಎಸಿಪಿ ಕ್ರೂರವಾಗಿ ಕಪಾಳಮೋಕ್ಷ ಮಾಡಿದ್ದಾನೆ.

ಎಸಿಪಿ ಕರ್ನಲ್‌ಗಂಜ್ ತಿರ್ಪುರಾರಿ ಪಾಂಡೆ ಆ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ಆರೋಪಿಯನ್ನು ಗುರುತಿಸಿದಾಗ ಆರೋಪಿಯು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ಕೊಟ್ಟ ಯುವಕ

ಪೊಲೀಸರು ಆರೋಪಿಯನ್ನು ಹಿಡಿದು ಎಸಿಪಿಗೆ ಒಪ್ಪಿಸಿದ್ದಾರೆ. ಒಮ್ಮೆ ಪೊಲೀಸರ ಬಲೆಗೆ ಬಿದ್ದ ಎಸಿಪಿ ಆರೋಪಿಯ ಮುಖಕ್ಕೆ ಕಪಾಳಮೋಕ್ಷ ಮಾಡತೊಡಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಇಂತಹ ಅಪರಾಧಗಳಲ್ಲಿ ತೊಡಗುವವರಿಗೆ ತಡೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಯುವಕನೊಬ್ಬ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಘಟನೆ ಗ್ವಾಲ್ಟೋಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮರ್ಚೆಂಟ್ ಚೇಂಬರ್ಸ್ ಬಳಿ ನಡೆದಿದೆ.

ಸಾರ್ವಜನಿಕವಾಗಿಯೇ ಕಪಾಳಮೋಕ್ಷ

ಹೆಚ್ಚುವರಿ ಡಿಸಿಪಿ (ಪಶ್ಚಿಮ) ಬ್ರಜೇಶ್ ಶ್ರೀವಾಸ್ತವ ಅವರ ಪ್ರಕಾರ, ಎಸಿಪಿ (ಕರ್ನಲ್ ಗಂಜ್) ತಿರ್ಪುರಾರಿ ಪಾಂಡೆ ಯುವಕನನ್ನು ತಡೆದು ಸಾರ್ವಜನಿಕರ ನಡುವೆ ಪದೇ ಪದೇ ಕಪಾಳಮೋಕ್ಷ ಮಾಡಿದರು.

ಖಡಕ್ ವಾರ್ನಿಂಗ್ ಕೊಟ್ಟ ಎಸಿಪಿ

ಇಂತಹ ಅಪರಾಧಗಳಲ್ಲಿ ತೊಡಗಿಸಿಕೊಂಡರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿರ್ಪುರಾರಿ ಪಾಂಡೆ ಯುವಕರಿಗೆ ಎಚ್ಚರಿಕೆ ನೀಡಿದರು. ರಸ್ತೆಯಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶನಿವಾರ ಯುವಕನಿಗೆ ಕಪಾಳಮೋಕ್ಷ ಮಾಡಿರುವುದಾಗಿ ಎಸಿಪಿ ಒಪ್ಪಿಕೊಂಡಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಆಂಟಿ ರೋಮಿಯೋ ಸ್ಕ್ವಾಡ್‌ಗಳು 14,454 ಜನರ ಬಂಧನ

2017 ಮತ್ತು 2020 ರ ನಡುವೆ, ರಾಜ್ಯದಲ್ಲಿ ಆಂಟಿ ರೋಮಿಯೋ ಸ್ಕ್ವಾಡ್‌ಗಳು 14,454 ಜನರನ್ನು ಬಂಧಿಸಿವೆ ಎಂದು ಯುಪಿ ಪೊಲೀಸರು ಇಂಡಿಯಾ ಟುಡೇ ಸಲ್ಲಿಸಿದ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Twitter Hacked: ಉತ್ತರ ಪ್ರದೇಶ ಸಿಎಂಒ ಟ್ವಿಟರ್ ಖಾತೆ ಹ್ಯಾಕ್, ಸಿಎಂ ಕಚೇರಿ ಖಾತೆಗೆ ಈತರ ಪ್ರೊಫೈಲ್ ಫೊಟೋ ಹಾಕೋದಾ?

ಈ ತಂಡ ಏನು ಮಾಡುತ್ತೆ?

* ಪ್ರತಿ ತಂಡದಲ್ಲಿ ಇಬ್ಬರು ಪೊಲೀಸರು ಇರುತ್ತಾರೆ. ಹೆಚ್ಚಾಗಿ ಒಂದು ಗಂಡು ಮತ್ತು ಒಂದು ಹೆಣ್ಣು.

* ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡರಿಂದ ಮೂರು ತಂಡಗಳನ್ನು ನಿಯೋಜಿಸಬಹುದು.

* ನಿಯೋಜಿಸಲಾದ ತಂಡಗಳ ಸಂಖ್ಯೆಯು ಪ್ರದೇಶದಲ್ಲಿರುವ ಶಾಲೆಗಳು ಮತ್ತು ಕಾಲೇಜುಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

* ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶಾಲಾ-ಕಾಲೇಜುಗಳ ಬಳಿ ಸಂಚರಿಸುತ್ತಾರೆ.

* ಗುಂಪಿನಲ್ಲಿ ಈವ್ ಟೀಸರ್ ಮತ್ತು ತೊಂದರೆ ಕೊಡುವವರನ್ನು ಗುರುತಿಸುವುದು ಅವರ ಕಾರ್ಯವಾಗಿದೆ.

ಇದನ್ನೂ ಓದಿ: Morning Digest: ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ: ಹಫೀಜ್ ಸಯೀದ್ ಗೆ 31 ವರ್ಷ ಜೈಲು: ಬೆಳಗಿನ ಟಾಪ್ ನ್ಯೂಸ್

* ಅವರು ಸಮವಸ್ತ್ರದಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಬಟ್ಟೆಯಲ್ಲಿ ತಿರುಗುತ್ತಾರೆ.

* ತಂಡಗಳು ಕಾನ್‌ಸ್ಟೆಬಲ್‌ಗಳು, ಹೆಡ್ ಕಾನ್‌ಸ್ಟೆಬಲ್‌ಗಳು, ಎಎಸ್‌ಐ ಮತ್ತು ಎಸ್‌ಐಗಳನ್ನು ಒಳಗೊಂಡಿರುತ್ತವೆ.

* ಆಂಟಿ ರೋಮಿಯೋ ಸ್ಕ್ವಾಡ್‌ಗಳು ದುಷ್ಕರ್ಮಿಗಳನ್ನು ಎಚ್ಚರಿಕೆಯೊಂದಿಗೆ ಬಿಡಬಹುದು, ಪೋಷಕರಿಗೆ ತಿಳಿಸಬಹುದು ಮತ್ತು ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಬಹುದು.
Published by:Divya D
First published: