UP: ಯುಪಿಯಲ್ಲಿ ಬಿಎಸ್​ಪಿಗೆ ಭಾರೀ ಹೊಡೆತ; ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿರುವ ಪ್ರಭಾವಿ ನಾಯಕರು

ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಅಂಬಿಕಾ ಚೌಧರಿ ಅವರ ಮಗ ಆನಂದ್ ಕೂಡ SPಗೆ ಸೇರುತ್ತಾರೆ ಎನ್ನುವ ವದಂತಿ ಕೂಡ ಹರಿದಾಡುತ್ತಿದೆ. ಚೌಧರಿ ಅವರು 2017 ರಲ್ಲಿ Bahujan Samaj Party ಸೇರಿ ಎಸ್​ಪಿ ಭಾರೀ ಹೊಡೆತ ನೀಡಿದ್ದರು, ಆದರೆ ಈಗ ಮತ್ತೆ ಮಾತೃ ಪಕ್ಷಕ್ಕೆ ಮರಳಿ ಬರುತ್ತಿದ್ದಾರೆ.

ಯುಪಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​

ಯುಪಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​

 • Share this:
  2022 ರಲ್ಲಿ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಇಡೀ ರಾಜ್ಯದಲ್ಲಿ ಸಾಕಷ್ಟು ಸಂಚಲನ ಈಗಾಗಲೇ ಎಲ್ಲಾ ಪಕ್ಷಗಳಲ್ಲೂ ನಡೆಯುತ್ತಿದೆ. ಒಂದು ವರ್ಷಕ್ಕೂ ಮೊದಲೇ ರಂಗೇರಿರುವ ಅಖಾಡದಲ್ಲಿ ಎಲ್ಲಾ ಪಕ್ಷಗಳು, ಈ ಬಾರಿ ಯುಪಿಯಲ್ಲಿ ಅಧಿಕಾರ ಹಿಡಿಯಲೇ ಬೇಕು ಎನ್ನುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.

  ಗ್ಯಾಂಗ್​ಸ್ಟರ್​ ಹಾಗೂ ರಾಜಕಾರಣಿಯಾಗಿ ಬದಲಾದ ಮುಖ್ತಾರ್ ಅನ್ಸಾರಿ ಅವರ ಹಿರಿಯ ಸಹೋದರ ಸಿಬ್ಗತುಲ್ಲಾ ಮತ್ತು ಸೋದರಳಿಯ ಮಣ್ಣು ಅನ್ಸಾರಿ ಅವರು ಶನಿವಾರ ಲಖನೌದಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಬಲಿಯಾ ಜಿಲ್ಲೆಯ ಪ್ರಬಲ ನಾಯಕ ಮತ್ತು ಮಾಜಿ ಸಚಿವರಾದ ಮುಲಾಯಂ ಸಿಂಗ್ ನಿಷ್ಠಾವಂತ ಮತ್ತು ನಂಬಿಕಸ್ಥ ಅಂಬಿಕಾ ಚೌಧರಿ (Ambika Chaudhary ) ಕೂಡSamajwadi Partyಗೆ ಸೇರುವ ಮೂಲಕ 'ಘರ್ ವಾಪ್ಸಿ' ಮಾಡಲು ಸಿದ್ಧರಾಗಿದ್ದಾರೆ. ಮುಖ್ತಾರ್ ಪುತ್ರ ಅಬ್ಬಾಸ್ ಕೂಡ ಶೀಘ್ರವೇ ಎಸ್‌ಪಿಗೆ ಸೇರುವ ಊಹಾಪೋಹಗಳಿವೆ.

  ಮುಹಮ್ಮದಾಬಾದ್ ವಿಧಾನಸಭೆಯಿಂದ ಎರಡು ಬಾರಿ ಶಾಸಕರಾಗಿದ್ದ ಸಿಬ್ಗತುಲ್ಲಾ, ಬೆಳಿಗ್ಗೆ ತಮ್ಮ ಭಾರೀ ಬೆಂಬಲಿಗರೊಂದಿಗೆ ಗಾಜಿಪುರದಿಂದ ಲಕ್ನೋ ತಲುಪಿದ್ದಾರೆ.  ಅಖಿಲೇಶ್ ಸೂಚನೆಗಳ ಮೇರೆಗೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಅಂಬಿಕಾ ಚೌಧರಿ ಅವರ ಮಗ ಆನಂದ್ ಕೂಡ ಎಸ್‌ಪಿಗೆ ಸೇರುತ್ತಾರೆ ಎನ್ನುವ ವದಂತಿ ಕೂಡ ಹರಿದಾಡುತ್ತಿದೆ. ಚೌಧರಿ ಅವರು 2017 ರಲ್ಲಿ Bahujan Samaj Party ಸೇರಿ ಎಸ್​ಪಿ ಭಾರೀ ಹೊಡೆತ ನೀಡಿದ್ದರು, ಆದರೆ ಈಗ ಮತ್ತೆ ಮಾತೃ ಪಕ್ಷಕ್ಕೆ ಮರಳಿ ಬರುತ್ತಿದ್ದಾರೆ.

  ವಿಧಾನಸಭಾ ಚುನಾವಣೆ ನಡೆಯಲು ಆರು ತಿಂಗಳುಗಳಿಗಿಂತ ಕಡಿಮೆ ಸಮಯವಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಮತ್ತು ಜಾತಿ ಸಮೀಕರಣಗಳನ್ನು ಹೊಂದಿಸಲು ಭಾರೀ ಹರಸಾಹಸ ಪಡುತ್ತಿವೆ.

  ಪಕ್ಷದ ಸದಸ್ಯತ್ವವನ್ನು ಸಿಬ್ಗತುಲ್ಲಾ ಅವರಿಗೆ ನೀಡುವ ಮೂಲಕ, ಎಸ್​ಪಿ ಹೊಸ ರೀತಿಯ ರಾಜಕೀಯ ಸಮೀಕರಣವನ್ನು ಸೃಷ್ಟಿ ಮಾಡಲು ಹೊರಟಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಅಲ್ಲದೇ ಒಂದಷ್ಟು ಚುನಾವಣಾ ಸಮೀಕ್ಷೆಗಳ ಪ್ರಕಾರ ’ಲೋಕಲ್​ ಬಾಯ್​​’ (local boy) ಅಖಿಲೇಶ್​ ಅಧಿಕಾರ ಹಿಡಿಯುತ್ತಾರೆ ಎಂದು ಹೇಳಲಾಗಿದೆ.

  ವಾಸ್ತವವಾಗಿ, 2017 ರ ಅಸೆಂಬ್ಲಿ ಚುನಾವಣೆಯ ಮೊದಲು, ಅನ್ಸಾರಿ ಸಹೋದರರು ಎಸ್‌ಪಿಗೆ ಸೇರಿದ್ದರು, ಪ್ರತಿಯಾಗಿ ತಮ್ಮ ಪಕ್ಷವಾದ ಕ್ವಾಮಿ ಏಕತಾ ದಳದಿಂದ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದರು. ನಂತರ, ಒಂದಷ್ಟು ವಿಚಾರಗಳಲ್ಲಿ ಅಖಿಲೇಶ್ ಅವರ ಆಕ್ಷೇಪಣೆಗೆ ಮಣಿಯದ ಈ ಸಹೋದರರು ಎಸ್‌ಪಿಯಿಂದ ಬೇರ್ಪಟ್ಟು ಬಿಎಸ್‌ಪಿಗೆ ಸೇರಿದ್ದರು. ಈಗ ಮಾಯಾವತಿ ಅವರಿಗೆ ಶಾಕ್​ ನೀಡಿರುವ ಈ ಸಹೋದರರು ಮತ್ತೆ ಸೈಕಲ್​ ಏರಿದ್ದಾರೆ.

  ಗಾಜಿಪುರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ ಪ್ರಕಾರ, ಸಿಬ್ಗತುಲ್ಲಾ ಎಸ್‌ಪಿಗೆ ಸೇರ್ಪಡೆಯಾಗುವುದರೊಂದಿಗೆ, ಸಮಾಜವಾದಿ ಪಕ್ಷದಲ್ಲಿ ಒಂದಷ್ಟು ಅಸಮಾಧಾನಗಳು ಹೊರಬಹುದು ಎಂದು ಹೇಳಲಾಗುತ್ತದೆ.

  ಇದನ್ನೂ ಓದಿ: Madhya Pradesh: ಪತ್ನಿಯ ನಡತೆ ಶಂಕಿಸಿ ಆಕೆಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಕ್ರೂರಿ ಪತಿ!

  ಏಕೆಂದರೆ ಟಿಕೆಟ್​ ಹಂಚಿಕೆ ವೇಳೆ Mohammadabad ಕ್ಷೆತ್ರದಲ್ಲಿ ಸ್ಪರ್ಧಿಸುವುದಾಗಿ ಆಂಕಾಕ್ಷೆ ಹೊಂದಿದ್ದ ಪಕ್ಷದ ನಾಯಕರಿಗೆ ಕೊಂಚ ನಿರಾಸೆಯಾಗಬಹುದು ಹಾಗೂ ಅವರು ಬೇರೆ ಪಕ್ಷದ ಕಡೆಗೆ ಮುಖ ಮಾಡಬಹುದು, ಈ ಸಮಸ್ಯೆ ಉದ್ಬವಿಸುತ್ತದೆ ಎನ್ನುವುದು ಒಂದಷ್ಟು ಸ್ಥಳೀಯ ಮುಖಂಡರ ಮಾತು. ಸಿಬ್ಗತುಲ್ಲಾ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮೂವರು ಸಹೋದರರಲ್ಲಿ ಹಿರಿಯರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: