HOME » NEWS » National-international » UP ACTIVIST WHO FILED CASE AGAINST YOGI ADITYANATH ALLEGING OF INCITING RIOTS NOW GETS LIFE TERM IN RAPE CASE SNVS

ಯೋಗಿ ಆದಿತ್ಯನಾಥ್ ವಿರುದ್ಧ ಹೈಕೋರ್ಟ್​ನಲ್ಲಿ ದೂರು ನೀಡಿದ್ದ ಪತ್ರಕರ್ತ ಪರ್ವೆಜ್​ಗೆ ಗ್ಯಾಂಗ್ ರೇಪ್ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

ಪರ್ವೇಜ್ ಮತ್ತು ಮೆಹಮೂದ್ ಇಬ್ಬರೂ 2018, ಜೂನ್ 3ರಂದು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಈ ಮಹಿಳೆ ಆರೋಪ ಮಾಡಿದ್ದರು. ಇದೀಗ ಗೋರಖಪುರ್ ಸೆಷೆನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಇಬ್ಬರನ್ನೂ ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

news18-kannada
Updated:July 30, 2020, 1:02 PM IST
ಯೋಗಿ ಆದಿತ್ಯನಾಥ್ ವಿರುದ್ಧ ಹೈಕೋರ್ಟ್​ನಲ್ಲಿ ದೂರು ನೀಡಿದ್ದ ಪತ್ರಕರ್ತ ಪರ್ವೆಜ್​ಗೆ ಗ್ಯಾಂಗ್ ರೇಪ್ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ
ಯೋಗಿ ಆದಿತ್ಯನಾಥ್
  • Share this:
ಅಲಹಾಬಾದ್(ಜುಲೈ 30): ಗೋರಖ್​ಪುರ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಎಫ್​ಐಆರ್ ದಾಖಲಾಗಬೇಕೆಂದು ಅಲಾಹಾಬಾದ್ ಹೈಕೋರ್ಟ್​ನ ಮೊರೆ ಹೋಗಿದ್ದ ಪರ್ವೇಜ್ ಪರ್ವಾಜ್ ಅವರಿಗೆ ಬೇರೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸಿಕ್ಕಿದೆ. 2018ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೋರಖ್​ಪುರ್​ನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು 65 ವರ್ಷದ ಪರ್ವೇಜ್​ ಸೇರಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

2007ರಲ್ಲಿ ಗೋರಖ್​ಪುರ್​ನಲ್ಲಿ ಸಂಭವಿಸಿದ ಕೋಮು ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಪರ್ವೇಜ್ ಪರ್ವಾಜ್ ಅವರು ಹಲವರ ವಿರುದ್ಧ ದೂರು ದಾಖಲಿಸಿದ್ದರು. ಆಗಿನ ಗೋರಖಪುರ್ ಸಂಸದ ಯೋಗಿ ಆದಿತ್ಯನಾಥ್, ಬಿಜೆಪಿ ಎಂಎಲ್​ಸಿ ವೈ.ಡಿ. ಸಿಂಗ್, ಅಂದಿನ ಮೇಯರ್ ಅಂಜು ಚೌಧರಿ, ಶಿವಪ್ರತಾಪ್ ಶುಕ್ಲಾ ಅವರ ವಿರುದ್ಧ ಪರ್ವೇಜ್ ಪರ್ವಾಜ್ ಹೈಕೋರ್ಟ್​ನಲ್ಲಿ ದೂರು ದಾಖಲಿಸಿದ್ದು 2017ರಲ್ಲಿ. ಆಗ ಯೋಗಿ ಆವರು ಗೋರಖ್​ಪುರದ ಸಂಸದರಾಗಿದ್ದು. ಇನ್ನೂ ಮುಖ್ಯಮಂತ್ರಿ ಆಗಿರಲಿಲ್ಲ. ಆದರೆ, ಹೈಕೋರ್ಟ್ ನ್ಯಾಯಪೀಠವು ಪರ್ವೇಜ್ ಅವರ ಮನವಿಯನ್ನು ತಿರಸ್ಕರಿಸಿತು. ಯೋಗಿ ವಿರುದ್ಧ ವಿಚಾರಣೆ ನಡೆಯುವ ಅಗತ್ಯ ಇಲ್ಲ ಎಂದು ಆದೇಶಿಸಿತು. ಇದಾದ ಬಳಿಕ ಪರ್ವೇಜ್ ಅವರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು ಎಂದು ದ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಈ ಬೆಳವಣಿಗೆಯ ನಂತರ ಪರ್ವೇಜ್ ಪರ್ವಾಜ್ ಅವರು ತಮಗೆ ಹಲವು ಬೆದರಿಕೆಗಳು ಬರುತ್ತಿವೆ. ಸುಳ್ಳು ಪ್ರಕರಣಗಳು ದಾಖಲಾಗುತ್ತಿವೆ ಎಂದು ಖಾಸಗಿ ಜಾಲತಾಣವೊಂದರಲ್ಲಿ ಈ ಹಿಂದೆ ಹೇಳಿಕೊಂಡಿದ್ದುಂಟು. ಗಲಭೆ ಮತ್ತು ಅತ್ಯಾಚಾರದ ಎರಡು ಪ್ರಕರಣಗಳು ಅವರ ವಿರದ್ಧ ಇದ್ದು, ರೇಪ್ ಕೇಸ್​ನಲ್ಲಿ ಜೈಲಿಗೆ ಹೋಗಿದ್ದರು.

ಇದನ್ನೂ ಓದಿ: ಕೊನೆಗೂ ಬಗೆಹರಿದ ರಾಜಸ್ಥಾನ ಅಧಿವೇಶನ ಕಗ್ಗಂಟು; ಆ. 14ಕ್ಕೆ ದಿನ ನಿಗದಿ; ರಾಜ್ಯಪಾಲರ ಸಮ್ಮತಿ

“ಅತ್ಯಾಚಾರ ಪ್ರಕರಣದಲ್ಲಿ ಪರ್ವೇಜ್ ಎರಡನೇ ಆರೋಪಿಯಾಗಿದ್ದಾರೆ. ಮುಖ್ಯ ಆರೋಪಿಗೆ ಜಾಮೀನು ಸಿಕ್ಕರೂ ಪರ್ವೇಜ್​ಗೆ ಸಿಕ್ಕಿಲ್ಲ. ಆರೋಪ ಮಾಡಲಾದಂತೆ ಅತ್ಯಾಚಾರ ಘಟನೆಯೇ ನಡೆದಿಲ್ಲ ಎಂದು ಬಹುತೇಕ ಸಾಕ್ಷಿಗಳು ಹೇಳುತ್ತಿವೆ. ದೂರುದಾರರು ಎಫ್​ಐಆರ್​ನಲ್ಲಿ ಹೆಸರು ನೀಡಿದ ಮಾತ್ರಕ್ಕೆ ಪರ್ವೇಜ್ ಅವರನ್ನ ಬಂಧಿಸಲಾಗಿದೆ” ಎಂದು 2018ರಲ್ಲೇ ಪರ್ವೇಜ್ ಪರ ವಕೀಲರು ಹೇಳಿದ್ದರು.

Youtube Video


40 ವರ್ಷದ ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ದಾಖಲಿಸಿದ ಪ್ರಕರಣ ಇದಾಗಿದೆ. ಪರ್ವೇಜ್ ಮತ್ತು ಮೆಹಮೂದ್ ಇಬ್ಬರೂ 2018, ಜೂನ್ 3ರಂದು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಈ ಮಹಿಳೆ ಆರೋಪ ಮಾಡಿದ್ದರು. ಇದೀಗ ಗೋರಖಪುರ್ ಸೆಷೆನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಪರ್ವೇಜ್ ಮತ್ತು ಮೆಹಮೂದ್ ಅವರನ್ನ ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.ಪರ್ವೇಜ್ ಪರ ವಕೀಲರು ಈಗ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
Published by: Vijayasarthy SN
First published: July 30, 2020, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories