Kamala Pujari: ಐಸಿಯುನಲ್ಲಿದ್ದವರ ಜೊತೆ ಹೀಗಾ ವರ್ತಿಸೋದು? ಪದ್ಮಶ್ರೀ ಪುರಸ್ಕೃತೆಗೆ ಇದೆಂಥಾ ಅಪಮಾನ?

ಸಾಮಾಜಿಕ ಕಾರ್ಯಕರ್ತೆಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯನ್ನು ನರ್ತಿಸುವಂತೆ ಹೇಳಿ ಅದನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಒಡಿಸ್ಸಾದ ಕಥಕ್‌ನ ಆಸ್ಪತ್ರೆಯಲ್ಲಿ (Hospital) ದಾಖಲಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿಯನ್ನು (Kamala Pujari) ನೃತ್ಯಮಾಡುವಂತೆ ಸಾಮಾಜಿಕ ಕಾರ್ಯಕರ್ತೆ ಬೆಹರಾ ಒತ್ತಾಯಿಸಿದ್ದು, ಸಾಮಾಜಿಕ ಕಾರ್ಯಕರ್ತೆ ಹಾಗೂ ವೈದ್ಯರ ವರ್ತನೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಐಸಿಯು ವಾರ್ಡ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ

ಐಸಿಯು ವಾರ್ಡ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಮಲಾ ಪೂಜಾರಿ

  • Share this:

ಆಸ್ಪತ್ರೆಯಲ್ಲಿರುವ (Hospital) ರೋಗಿಗಳ ಸೋಮಾರಿತನವನ್ನು ಹೋಗಲಾಡಿಸಿ ಅವರಲ್ಲಿ ನವಚೈತನ್ಯವನ್ನು ಉಂಟುಮಾಡಲು ಆಸ್ಪತ್ರೆಯ ಸಿಬ್ಬಂದಿಗಳು (Hospital staff) ರೋಗಿಯನ್ನು ನಡೆಸುವುದು, ಅವರನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಸಾಮಾನ್ಯವಾದ ಸಂಗತಿಯಾಗಿದೆ. ಆದರೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯನ್ನು ನರ್ತಿಸುವಂತೆ ಹೇಳಿ ಅದನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದು ಮಾತ್ರವಲ್ಲದೆ ಶೇರ್ ಕೂಡ ಮಾಡಿದ್ದಾರೆ. ಒಡಿಸ್ಸಾದ ಕಥಕ್‌ನ ಆಸ್ಪತ್ರೆಯಲ್ಲಿ (Hospital) ದಾಖಲಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿಯನ್ನು (Kamala Pujari) ನೃತ್ಯಮಾಡುವಂತೆ ಸಾಮಾಜಿಕ ಕಾರ್ಯಕರ್ತೆ ಬೆಹರಾ ಒತ್ತಾಯಿಸಿದ್ದು, 71 ವರ್ಷದ ಕಮಲಾ ಪೂಜಾರಿ ಕಿಡ್ನಿ ಕಾಯಿಲೆಯ ಚಿಕಿತ್ಸೆಗೆಂದು (Treatment) ಆಸ್ಪತ್ರೆಗೆ ದಾಖಲಾಗಿದ್ದರು.


ನರ್ತಿಸುವಂತೆ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತೆ
ಕಾಯಿಲೆಯಿಂದ ಬಳಲುತ್ತಿದ್ದ ಕಮಲಾರನ್ನು ಒತ್ತಾಯ ಪೂರ್ವಕವಾಗಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ನೃತ್ಯ ಮಾಡಿಸಿದ್ದಕ್ಕಾಗಿ ಇದೀಗ ಸಮುದಾಯ ಸದಸ್ಯರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ


ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋ
ಕಮಲಾ ಪೂಜಾರಿ ನೃತ್ಯಮಾಡುತ್ತಿರುವುದನ್ನು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಲಾಗಿದ್ದು ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಮೊದಲು ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹರಾ ಕೂಡ ಕಮಲಾ ಪೂಜಾರಿಯವರೊಂದಿಗೆ ನೃತ್ಯಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.


ಒತ್ತಾಯದಿಂದ ನೃತ್ಯ ಮಾಡಿಸಲಾಗಿದೆ
ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಕಮಲಾ ಪೂಜಾರಿ ತಾವು ಎಂದಿಗೂ ನೃತ್ಯಮಾಡಲು ಬಯಸಲಿಲ್ಲ ಆದರೆ ನರ್ತಿಸುವಂತೆ ನನ್ನನ್ನು ಒತ್ತಾಯಿಸಲಾಯಿತು. ನಾನು ಪದೇ ಪದೇ ನಿರಾಕರಿಸಿದರೂ ಮಮತಾ ಕೇಳಲಿಲ್ಲ. ನಾನು ಅನಾರೋಗ್ಯದಿಂದ ದಾಖಲಾಗಿದ್ದೆ ಹಾಗೂ ಬಳಲಿದ್ದೆ ಎಂದು ಕಮಲಾ ಪೂಜಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.


ಇದನ್ನೂ ಓದಿ:  Anand Mahindra: ಗ್ರಾಮೀಣ ರಸ್ತೆಗಳಲ್ಲಿ 'ಟ್ರನೆಲ್' ನಿರ್ಮಿಸಿ! ನಿತಿನ್ ಗಡ್ಕರಿಗೆ ಆನಂದ್ ಮಹೀಂದ್ರಾ ಸಲಹೆ

ಕ್ರಮ ಕೈಗೊಳ್ಳದೇ ಇದ್ದರೆ ಬೀದಿಗಿಳಿದು ಪ್ರತಿಭಟನೆ
ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಬುಡಕಟ್ಟು ಸಮುದಾಯದ ಮುಖಂಡ ಹರೀಶ್ ಮುದುಳಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸಾವಯವ ಕೃಷಿಯನ್ನು ಉತ್ತೇಜಿಸಲು ಮತ್ತು 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ ಶ್ರೀಮತಿ ಪೂಜಾರಿ ಅವರು 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.




ವಿಶೇಷ ಕ್ಯಾಬಿನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮಲಾ
ಕಿಡ್ನಿ ಕಾಯಿಲೆಯ ಸಮಸ್ಯೆಯಿಂದ ಆಕೆಯನ್ನು ಕಥಕ್‌ನ SCB ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಶೀಘ್ರ ಗುಣಮುಖರಾಗಲೆಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಹಾರೈಸಿದ್ದಾರೆ. ಆಕೆಯನ್ನು ವಿಶೇಷ ಕ್ಯಾಬಿನ್‌ಗೆ ದಾಖಲಿಸಲಾಗಿದೆ ಅವರು ಐಸಿಯುನಲ್ಲಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.


ವಿಶೇಷ ಕ್ಯಾಬಿನ್‌ಗೆ ಭೇಟಿ ನೀಡುತ್ತಿದ್ದ ಮಹಿಳೆ
ಇನ್ನು ಕಮಲಾ ಪೂಜಾರಿ ಅವರೊಂದಿಗೆ ನೃತ್ಯ ಮಾಡಿದ್ದರು ಎಂದು ಹೇಳಲಾದ ಮಹಿಳೆ ವಿಶೇಷ ಕ್ಯಾಬಿನ್‌ಗೆ ಭೇಟಿ ನೀಡುತ್ತಿದ್ದರು ಎಂದು ಆಸ್ಪತ್ರೆಯ ನಿರ್ವಾಹಕರು ತಿಳಿಸಿದ್ದಾರೆ. ಇನ್ನು ಪೂಜಾರಿಯವರನ್ನು ನೋಡಿಕೊಳ್ಳುತ್ತಿರುವ ರಾಜೀಬ್ ಹಿಯಾಲ್ ಹೇಳುವಂತೆ ಪದ್ಮಶ್ರೀ ಪುರಸ್ಕೃತೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿಗಳಲ್ಲಿ ಕಾಣಿಸಿಕೊಂಡಿರುವ ಬೆಹೆರಾ ಬಗ್ಗೆ ಕಮಲಾ ಪೂಜಾರಿಗೆ ಗೊತ್ತಿಲ್ಲ ಎಂದಿದ್ದಾರೆ.


ಇದನ್ನೂ ಓದಿ:  Love marriage: 55 ವರ್ಷದ ವ್ಯಕ್ತಿಯನ್ನು ವಿವಾಹವಾದ 18 ವರ್ಷದ ಯುವತಿ! ಇದಕ್ಕೆಲ್ಲಾ ಕಾರಣ ಬಾಲಿವುಡ್​ ಈ ಖ್ಯಾತ ನಟನ ಹಾಡು!

ನೃತ್ಯ ಮಾಡಿಸಿದ್ದರ ಹಿಂದೆ ಕೆಟ್ಟ ಉದ್ದೇಶವಿರಲಿಲ್ಲ
ಇನ್ನು ಈ ಕುರಿತು ಮಾತನಾಡಿರುವ ಮಮತಾ ಬೆಹೆರಾ ಆಕೆಯನ್ನು ನರ್ತಿಸುವಂತೆ ಒತ್ತಾಯಿಸಿದ್ದು ನಿಜವಾಗಿದ್ದು ಇದರ ಹಿಂದೆ ಯಾವುದೇ ಕೆಟ್ಟ ಉದ್ದೇಶವನ್ನು ಹೊಂದಿರಲಿಲ್ಲ ಎಂದಿದ್ದಾರೆ. ಕಮಲಾ ಅವರ ಸೋಮಾರಿತನವನ್ನು ದೂರಮಾಡುವುದಕ್ಕಾಗಿ ಮಾತ್ರ ನರ್ತಿಸುವಂತೆ ವಿನಂತಿಸಿದ್ದೇನೆ ಎಂದು ಹೇಳಿದ್ದಾರೆ. ಒಡಿಸಾದ ಬುಡಕಟ್ಟು ಜನಸಂಖ್ಯೆಯ 4% ವನ್ನು ಒಳಗೊಂಡಿರುವ ಪರಾಜ ಸಮುದಾಯವು ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಬರುತ್ತದೆ.

Published by:Ashwini Prabhu
First published: