London ಮನೆಯಿಂದಲೂ Vijay Mallya ಕಿಕ್‌ ಔಟ್‌ ಮಾಡುವ ಸುಳಿವು ಕೊಟ್ಟ ಬ್ರಿಟನ್ ಕೋರ್ಟ್..!

ನ್ಯಾಯಾಧೀಶರು ತಮ್ಮ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗಲು ಅಥವಾ ಸಾಲ ವಸೂಲಾತಿ ಪ್ರಕ್ರಿಯೆಗೆ ತಾತ್ಕಾಲಿಕ ಮಧ್ಯಂತರ ತಡೆ ಪಡೆಯಲು ಅನುಮತಿಯನ್ನು ನಿರಾಕರಿಸಿದರು. ಇದರಿಂದ ಯುಎಸ್‍ಬಿ ಬ್ಯಾಂಕ್ ತನ್ನ ಪಾವತಿಯಾಗದ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ಜಾರಿಗೊಳಿಸಲು ದಾರಿ ಸುಗಮವಾದಂತಾಗಿದೆ.

ವಿಜಯ್ ಮಲ್ಯ

ವಿಜಯ್ ಮಲ್ಯ

  • Share this:
ದೇಶ ಬಿಟ್ಟು ಪರಾರಿಯಾಗಿ ಕಾನೂನು (Litigation) ಹೋರಾಟದಲ್ಲಿ ತೊಡಗಿಸಿಕೊಂಡಿರುವ (Businessman) ಉದ್ಯಮಿ ವಿಜಯ್ ಮಲ್ಯಗೆ (Vijay Mallya) ಮತ್ತೊಂದು ಹಿನ್ನೆಡೆಯಾಗಿದ್ದು, ಸ್ವಿಸ್ ಬ್ಯಾಂಕ್ (Swiss bank) ಯುಎಸ್‍ಬಿಯೊಂದಿಗೆ ದೀರ್ಘಕಾಲದಿಂದ ನಡೆಯುತ್ತಿರುವ ವ್ಯಾಜ್ಯದಲ್ಲಿ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಬೇಕು ಎಂಬ ಅವರ ಕೋರಿಕೆಯನ್ನು ಬ್ರಿಟನ್ ನ್ಯಾಯಾಲಯವೊಂದು(British court) ತಿರಸ್ಕರಿಸಿದೆ.

ವಿಜಯ್ ಮಲ್ಯ ಅವರು ತಮ್ಮ ಅರ್ಜಿಯಲ್ಲಿ ಯುಕೆ ರಾಜಧಾನಿ ಲಂಡನ್‌ನ ರೀಜೆಂಟ್ ಪಾರ್ಕ್‌ನಲ್ಲಿರುವ 18/19 ಕಾರ್ನ್ ವಾಲ್ ಟೆರೇಸ್ ಲಕ್ಷುರಿ ಅಪಾರ್ಟ್‌ಮೆಂಟ್ ಅಸಾಧಾರಣ ಮೌಲ್ಯ ಹೊಂದಿರುವ ಆಸ್ತಿಯಾಗಿದ್ದು, ಅದರ ಬೆಲೆ ಹತ್ತಾರು ಮಿಲಿಯನ್ ಪೌಂಡ್‌ನಷ್ಟಿದೆ ಎಂದು ವಾದಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯದ ಚಾನ್ಸರಿ ವಿಭಾಗದ ಉಪ ನ್ಯಾಯಾಧೀಶ ಮ್ಯಾಥ್ಯೂ ಮಾರ್ಶ್, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಯುಎಸ್‍ಬಿ ಬ್ಯಾಂಕ್‌ನ 20.4 ಮಿಲಿಯನ್ ಪೌಂಡ್ ಸಾಲವನ್ನು ಮರುಪಾವತಿ ಮಾಡಲು ಮತ್ತಷ್ಟು ಸಮಯಾವಕಾಶ ಒದಗಿಸಲು ಯಾವುದೇ ಆಧಾರಗಳಿಲ್ಲ” ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿದರು.

ಪ್ರತಿವಾದಿಗಳ ಪರಿಸ್ಥಿತಿಯು ಸಕಾರಣವಾಗಿದ್ದು, ಮತ್ತಷ್ಟು ಸಮಯಾವಕಾಶ ಒದಗಿಸುವುದರಿಂದ ಯಾವುದೇ ಭೌತಿಕ ವ್ಯತ್ಯಾಸವಾಗುವುದಿಲ್ಲ” ಎಂದು ಅಭಿಪ್ರಾಯ ಪಟ್ಟ ಉಪ ನ್ಯಾಯಾಧೀಶ ಮಾರ್ಶ್, “ನಾನು ಅರ್ಜಿದಾರರ ಕುರಿತು ನಡೆಸಿರುವ ಪರಿಶೀಲನೆಗಳಿಂದ ಹೇಳಲು ಬಯಸುವುದೇನೆಂದರೆ, ಅರ್ಜಿದಾರ ವಿಜಯ್ ಮಲ್ಯ ಅವರ ಮೇಲೆ ಪ್ರತಿವಾದಿಗಳು ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂಬುದಕ್ಕೆ ಅರ್ಜಿದಾರರ ಹೇಳಿಕೆಗಳಲ್ಲಿ ಯಾವುದೇ ಆಧಾರ ಕಂಡು ಬಂದಿಲ್ಲ. ಹೀಗಾಗಿ ನಾನು ದೂರುದಾರರ ಅರ್ಜಿಯನ್ನು ವಜಾಗೊಳಿಸುತ್ತಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ ಆಸ್ತಿ ಮಾರಾಟದಿಂದ 13,109 ಕೋಟಿ ರೂ. ವಸೂಲಿ ಆಗಿದೆ: ನಿರ್ಮಲಾ ಸೀತಾರಾಮನ್

ಸಾಲ ವಸೂಲಾತಿ ಪ್ರಕ್ರಿಯೆ
ಅಲ್ಲದೆ, ನ್ಯಾಯಾಧೀಶರು ತಮ್ಮ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗಲು ಅಥವಾ ಸಾಲ ವಸೂಲಾತಿ ಪ್ರಕ್ರಿಯೆಗೆ ತಾತ್ಕಾಲಿಕ ಮಧ್ಯಂತರ ತಡೆ ಪಡೆಯಲು ಅನುಮತಿಯನ್ನು ನಿರಾಕರಿಸಿದರು. ಇದರಿಂದ ಯುಎಸ್‍ಬಿ ಬ್ಯಾಂಕ್ ತನ್ನ ಪಾವತಿಯಾಗದ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ಜಾರಿಗೊಳಿಸಲು ದಾರಿ ಸುಗಮವಾದಂತಾಗಿದೆ. ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮಲ್ಯ ಪರ ವಕೀಲ, ಡೇನಿಯಲ್ ಮಾರ್ಗೊಲಿನ್ ಕ್ಯೂಸಿ, ತಮ್ಮ 65 ವರ್ಷದ ಉದ್ಯಮಿ ಅರ್ಜಿದಾರರು ಉಚ್ಚ ನ್ಯಾಯಾಲಯದ ಚಾನ್ಸರಿ ವಿಭಾಗಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಸೂಚನೆ ನೀಡಿದರು.

ರೋಸ್ ಕ್ಯಾಪಿಟಲ್ ವೆಂಚರ್ ಒತ್ತೆ ಸಾಲ
ಹಾಗೂ, ಈ ತೀರ್ಪಿನಿಂದ ಲಂಡನ್ ನಿವಾಸದಲ್ಲಿ ಸದ್ಯ ವಾಸಿಸುತ್ತಿರುವ ತಮ್ಮ ಅರ್ಜಿದಾರರ ವಯೋವೃದ್ಧ ತಾಯಿ ಸೇರಿದಂತೆ ಹಲವರಿಗೆ “ಗಂಭೀರ ಪರಿಣಾಮಗಳು” ಉಂಟಾಗಲಿವೆ ಎಂದು ಹೇಳಿದ್ದಾರೆ. ಇದೇ ವೇಳೆ, ಯುಎಸ್‍ಬಿ ಬ್ಯಾಂಕ್ ಯಾವುದೇ ತಡ ಮಾಡದೆ ಜಾರಿ ಆದೇಶದೊಂದಿಗೆ ಮುಂದುವರಿಯಲು ನಿರ್ಧರಿಸಿದೆ ಎಂದು ಅದರ ಪರ ವಕೀಲ ಫೆನ್ನರ್ ಮೋರನ್ ಕ್ಯೂಸಿ ತಿಳಿಸಿದ್ದಾರೆ. ಈ ಪ್ರಕರಣವು ಆಸ್ತಿ ಒತ್ತೆಗೆ ಸಂಬಂಧಿಸಿದ್ದಾಗಿದ್ದು, ಮಲ್ಯ ಒಡೆತನದ ರೋಸ್ ಕ್ಯಾಪಿಟಲ್ ವೆಂಚರ್ ಈ ಒತ್ತೆ ಸಾಲ ಪಡೆದಿತ್ತು. ಈ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಲಂಡನ್ ನಿವಾಸದ ಆಸ್ತಿ ಒಡೆತನ ವಿಜಯ್ ಮಲ್ಯ, ಅವರ ತಾಯಿ ಲಲಿತಾ ಹಾಗೂ ಪುತ್ರ ಸಿದ್ಧಾರ್ಥ ಮಲ್ಯ ಅವರಿಗೆ ಸೇರಿದ್ದೆಂದು ನಮೂದಿಸಲಾಗಿತ್ತು.

ಇದನ್ನೂ ಓದಿ: Explained: ವಿಜಯ್‌ ಮಲ್ಯ ದಿವಾಳಿ ಎಂದು ಘೋಷಿಸಿದ ಆದೇಶದ ಅರ್ಥವೇನು..? ಈ ಪ್ರಕರಣದ ಎಲ್ಲಾ ಡೀಟೆಲ್ಸ್‌ ಇಲ್ಲಿದೆ..

ಸಾಲ ಮರುಪಾವತಿ ವಿಫಲ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ದಾವೆಯಲ್ಲಿ ಮೇ 2019ರಲ್ಲಿ ನ್ಯಾಯಾಧೀಶ ಸೈಮನ್ ಬಾರ್ಕರ್, ಒಪ್ಪಿಗೆ ಆದೇಶವೊಂದನ್ನು ಜಾರಿಗೊಳಿಸಿ, ಮಲ್ಯ ಕುಟುಂಬವು ಏಪ್ರಿಲ್ 30, 2020ರೊಳಗೆ ಸಾಲವನ್ನು ಮರು ಪಾವತಿಸಬೇಕು. ಅಲ್ಲಿಯವರೆಗೂ ಅವರು ಆಸ್ತಿಯ ಸ್ವಾಧೀನವನ್ನು ಹೊಂದಿರಬಹುದು ಎಂದು ತೀರ್ಪಿತ್ತಿದ್ದರು.
ಈ ಗಡುವು ಮೀರಿದರೂ ಮಲ್ಯ ಕುಟುಂಬ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಯಿತು. ಅಲ್ಲದೆ, ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಜಾರಿಯಾದ ವಿಶೇಷ ಆದೇಶಗಳ ಕಾರಣಕ್ಕೆ ಏಪ್ರಿಲ್ 2021ರವರೆಗೆ ತನ್ನ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುವುದು ಯುಎಸ್‍ಬಿ ಬ್ಯಾಂಕ್ ಪಾಲಿಗೆ ಅಸಂಭವವಾಯಿತು.
Published by:vanithasanjevani vanithasanjevani
First published: