Unnao Rape Case: ಗಂಭೀರ ಸ್ಥಿತಿಯಲ್ಲಿರುವ ಉನ್ನಾವ್​ ಸಂತ್ರಸ್ತೆಗೆ ಲಕ್ನೋದಲ್ಲಿಯೇ ಚಿಕಿತ್ಸೆ ಮುಂದುವರಿಸಲು ಸುಪ್ರೀಂ ಸೂಚನೆ

ಸಂತ್ರಸ್ತೆ ಸಂಬಂಧಿಯನ್ನು ತಿಹಾರ ಜೈಲಿಗೆ ವರ್ಗಾವಣೆ ಮಾಡುವ ಕುರಿತು ವಾದಿಸಿದ ಉತ್ತರ ಪ್ರದೇಶ ಸರ್ಕಾರ, ಅವರಿಲ್ಲಿ ಸುರಕ್ಷಿತವಾಗಿದ್ದು, ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದರು. ಆದರೆ, ಪ್ರಕರಣದ ಪ್ರಮುಖ ಸಾಕ್ಷಿ ಇವರನ್ನು ತಕ್ಷಣಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್​​ ಸೂಚಿಸಿತು

Seema.R
Updated:August 2, 2019, 1:05 PM IST
Unnao Rape Case: ಗಂಭೀರ ಸ್ಥಿತಿಯಲ್ಲಿರುವ ಉನ್ನಾವ್​ ಸಂತ್ರಸ್ತೆಗೆ ಲಕ್ನೋದಲ್ಲಿಯೇ ಚಿಕಿತ್ಸೆ ಮುಂದುವರಿಸಲು  ಸುಪ್ರೀಂ ಸೂಚನೆ
ಸರ್ವೋಚ್ಛ ನ್ಯಾಯಾಲಯ
Seema.R
Updated: August 2, 2019, 1:05 PM IST
ನವದೆಹಲಿ (ಆ.2): ಅಪಘಾತಕ್ಕೆ ಒಳಗಾಗಿರುವ ಉನ್ನಾವ್​ ಅತ್ಯಾಚಾರ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗೆ ಲಕ್ನೋದಿಂದ ದೆಹಲಿಯ ಏಮ್ಸ್​ ಆಸ್ಪತ್ರೆಗೆ ವರ್ಗಾಯಿಸುವುದು ಬೇಡ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

ಪ್ರಕರಣದ ಕುರಿತು ನಿನ್ನೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿದ ಪೀಠ ಅವರ ಆರೋಗ್ಯದ ಕುರಿತು ಮಾಹಿತಿ ಕೇಳಿತ್ತು. ಈ ಕುರಿತು ಸಂತ್ರಸ್ತೆ ತಾಯಿ ನ್ಯಾಯಾಲಯಕ್ಕೆ ವಿವರಣೆ ನೀಡಿದರು.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತೆ ಪ್ರಜ್ಞಾಹೀನರಾಗಿದ್ದು, ಅವರಿಗೆ ಸದ್ಯ ಲಕ್ನೋದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಯಲಿ. ದೆಹಲಿಯ ಏಮ್ಸ್​ಗೆ ವರ್ಗಾಯಿಸುವುದು ಬೇಡ. ಮುಂದೆ ಈ ಬಗ್ಗೆ ಚಿಂತಿಸೋಣ ಎಂದರು.

ಈ ಹಿನ್ನೆಲೆಯಲ್ಲಿ ಅವರಿಗೆ ಅಲ್ಲಿಯೇ ಚಿಕಿತ್ಸೆ ಮುಂದುವರೆಸುವಂತೆ ನ್ಯಾಯಾಲಯ ಸೂಚಿಸಿದ್ದು, ಒಂದು ವೇಳೆ  ಸಂತ್ರಸ್ತೆ ತಾಯಿ ಅವರನ್ನು ಯಾವುದೇ ಕ್ಷಣದಲ್ಲಿ ಏಮ್ಸ್​ಗೆ ದಾಖಲಿಸಬೇಕು ಎಂದರೆ ಅದಕ್ಕೂ ಅವಕಾಶವಿದೆ ಎಂದಿದ್ದಾರೆ.

ಇದೇ ವೇಳೆ ಸಂತ್ರಸ್ತೆಯ ಸಂಬಂಧಿಯನ್ನು ಉತ್ತರ ಪ್ರದೇಶದ ರಾಯ್​ಬರೇಲಿ ಜೈಲಿನಿಂದ ದೆಹಲಿಯ ತಿಹಾರ್​ ಜೈಲಿಗೆ ತಕ್ಷಣ ವರ್ಗಾಯಿಸುವಂತೆ ಆದೇಶಿಸಲಾಗಿದೆ.

ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲಾ 4 ಪ್ರಕರಣಗಳನ್ನು 45 ದಿನದೊಳಗೆ ಇತ್ಯರ್ಥ ಮಾಡಲು ಸಿಬಿಐಗೆ ಸುಪ್ರೀಂ ಸೂಚಿಸಿದ ಮರು ದಿನವೇ ಈ ಆದೇಶವನ್ನು ಸುಪ್ರೀಂ ಕೋರ್ಟ್​ ನೀಡಿದೆ.

ಇನ್ನು ಸಂತ್ರಸ್ತೆ ಸಂಬಂಧಿಯನ್ನು ತಿಹಾರ ಜೈಲಿಗೆ ವರ್ಗಾವಣೆ ಮಾಡುವ ಕುರಿತು ವಾದಿಸಿದ ಉತ್ತರ ಪ್ರದೇಶ ಸರ್ಕಾರ, ಅವರಿಲ್ಲಿ ಸುರಕ್ಷಿತವಾಗಿದ್ದು, ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದರು. ಆದರೆ, ಪ್ರಕರಣದ ಪ್ರಮುಖ ಸಾಕ್ಷಿ ಇವರನ್ನು ತಕ್ಷಣಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್​​ ಸೂಚಿಸಿತು.
Loading...

ಇದನ್ನು ಓದಿ: Unnao Rape Case: 45 ದಿನದೊಳಗೆ ವಿಚಾರಣೆ ಮುಗಿಸಲು ಗಡುವು; ಸಂತ್ರಸ್ತೆಗೆ 25 ಲಕ್ಷ ಪರಿಹಾರ, ಬಿಗಿಭದ್ರತೆಗೆ ಸುಪ್ರೀಂ ಆದೇಶ

ಗುರುವಾರ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ರೇಪ್ ಸಂತ್ರಸ್ತೆಗೆ 25 ಲಕ್ಷ ರೂ ಪರಿಹಾರ ನೀಡಬೇಕು.  ಆಕೆಗೆ ಹಾಗೂ ಅವರ ವಕೀಲರಿಗೆ ಸಿಆರ್​ಪಿಎಫ್​ನಿಂದ ಭದ್ರತೆ ಒದಗಿಸಬೇಕು ಎಂದೂ ಕೋರ್ಟ್ ಆದೇಶಿಸಿತ್ತು. ಹಾಗೆಯೇ ಅವರಿಬ್ಬರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವಂತೆ ಕೋರ್ಟ್ ಕೇಳಿದೆ

First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...