ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಏಮ್ಸ್​ ಆಸ್ಪತ್ರೆಯಿಂದ ಬಿಡುಗಡೆ

2017ರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್​ ಸೆಂಗರ್​ ಉನ್ನಾವ್​ನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಆ ವೇಳೆ ಯುವತಿ ಇನ್ನೂ ಬಾಲಕಿಯಾಗಿದ್ದಳು.

HR Ramesh | news18-kannada
Updated:September 25, 2019, 8:44 PM IST
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಏಮ್ಸ್​ ಆಸ್ಪತ್ರೆಯಿಂದ ಬಿಡುಗಡೆ
ಅತ್ಯಾಚಾರ ಆರೋಪಿ ಕುಲದೀಪ್ ಸೆಂಗಾರ್
  • Share this:
ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ದೆಹಲಿ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಉನ್ನಾವ್​ ಅತ್ಯಾಚಾರ ಸಂತ್ರಸ್ತೆ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈ 28ರಂದು ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದ್ದ ರಸ್ತೆ ಅಪಘಾತದಿಂದ ಗಾಯಗೊಂಡಿದ್ದ ಮಹಿಳೆ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ಕುಟುಂಬದ ಸದಸ್ಯರು ಮತ್ತು ವಕೀಲರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಅತ್ಯಾಚಾರ ಸಂತ್ರಸ್ತೆ ತೆರಳುತ್ತಿದ್ದ ಕಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನೊಳಗಿದ್ದ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು. ಸಂತ್ರಸ್ತಾ ಯುವತಿ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು. ಸಂತ್ರಸ್ತ ಯುವತಿಯ ಕುಟುಂಬಕ್ಕೆ ಸಿಆರ್​ಪಿಎಫ್​ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿತ್ತು.

ದೆಹಲಿ ಕೋರ್ಟ್​ ಆದೇಶದ ನಿರ್ದೇಶನದಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಯುವತಿಯನ್ನು ಆಕೆಯ ಕುಟುಂಬ ಸದಸ್ಯರಾದ ತಾಯಿ ಮತ್ತು ಇಬ್ಬರು ಸಹೋದರಿಯರು, ಒಬ್ಬ ಸಹೋದರರ ಜೊತೆಗೆ ಏಮ್ಸ್​ ಆಸ್ಪತ್ರೆಯ ಹಾಸ್ಟೆಲ್​ನಲ್ಲಿ ಒಂದು ವಾರ ತಂಗಲಿದ್ದಾರೆ.

ಇದನ್ನು ಓದಿ: ಉನ್ನಾವ್ ರೇಪ್ ಕೇಸ್: ಶಾಸಕ ಕುಲದೀಪ್ ಸೆಂಗರ್ ಬಿಜೆಪಿಯಿಂದ ಉಚ್ಛಾಟನೆ

2017ರಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್​ ಸೆಂಗರ್​ ಉನ್ನಾವ್​ನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಆ ವೇಳೆ ಯುವತಿ ಇನ್ನೂ ಬಾಲಕಿಯಾಗಿದ್ದಳು. ಈ ಪ್ರಕರಣದಲ್ಲಿ ಶಾಸಕ ಸೆಂಗರ್ ಮತ್ತು ಸಹ ಆರೋಪಿ ಶಶಿ ಸಿಂಗ್​ ವಿರುದ್ಧ ನ್ಯಾಯಾಲಯ ದೂರು ದಾಖಲಿಸಿಕೊಂಡಿತ್ತು.

First published: September 25, 2019, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading