ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದ ಪೊಲೀಸ್ ಕಾನ್ಸ್​ಟೆಬಲ್!

ತನಗೆ ಇನ್ನೂ ಮದುವೆ ಆಗದಿರುವುದಕ್ಕೆ ತನ್ನ ಉದ್ಯೋಗವೇ ಕಾರಣ ಎಂಬ ನಿರ್ಧಾರಕ್ಕೆ ಬಂದ ಸಿದ್ಧಾಂತಿ ಕಾನ್​ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೈದರಾಬಾದ್​ನ ಚಾರ್ಮಿನಾರ್ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್ ಸಿದ್ಧಾಂತಿ ಮದುವೆಯಾಗುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

Sushma Chakre | news18-kannada
Updated:September 13, 2019, 5:13 PM IST
ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದ ಪೊಲೀಸ್ ಕಾನ್ಸ್​ಟೆಬಲ್!
ಪ್ರಾತಿನಿಧಿಕ ಚಿತ್ರ
  • Share this:
ಹೈದರಾಬಾದ್ (ಸೆ. 13): ಒಂದು ಕಾಲದಲ್ಲಿ ಮದುವೆಗೆ ಬಂದ ವಯಸ್ಸಿನ ಮಗಳಿದ್ದರೆ ಹೆತ್ತವರು ನೆಮ್ಮದಿಯಾಗಿ ನಿದ್ದೆ ಮಾಡಲಾಗದ ದಿನಗಳಿದ್ದವು. ಆದರೆ, ಈಗ ಹಾಗಿಲ್ಲ. ತಾನು ಮದುವೆಯಾಗಲು ಬಯಸುವ ಹುಡುಗನ ಬಗ್ಗೆ ಹುಡುಗಿಯರು ಮೊದಲೇ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ತನ್ನ ಕನಸಿನ ಹುಡುಗನ ಲಕ್ಷಣಗಳಿರುವ ಹುಡುಗ ಸಿಕ್ಕರೆ ಮಾತ್ರ ಮದುವೆಗೆ ಒಪ್ಪಿಗೆ. ಇದೇ ಕಾರಣದಿಂದ ನಮ್ಮ ರಾಜ್ಯದಲ್ಲಿ ಉದ್ಯೋಗಕ್ಕೆ ಸೇರದೆ ಮನೆಯ ತೋಟ ನೋಡಿಕೊಂಡೋ, ಯಾವುದಾದರೂ ಸಣ್ಣ ಅಂಗಡಿ ಇಟ್ಟುಕೊಂಡೋ, ಪೂಜೆ, ಅಡುಗೆ ಎಂದು ಸಣ್ಣಪುಟ್ಟ ಕೆಲಸ ಮಾಡಿರುಕೊಂಡಿರುವ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ.

ಆದರೆ, ಪಕ್ಕದ ತೆಲಂಗಾಣದಲ್ಲಿ ಹುಡುಗನಿಗೆ ಉದ್ಯೋಗವಿದ್ದರೂ ಆತನಿಗೆ ಇನ್ನೂ ಮದುವೆಯಾಗಿಲ್ಲ. ಪೊಲೀಸ್​ ಕಾಬ್​ಸ್ಟೆಬಲ್ ಆಗಿರುವ 29 ವರ್ಷದ ಸಿದ್ಧಾಂತಿ ಪ್ರತಾಪ್ ಮದುವೆಗೆ ಹೆಣ್ಣು ಸಿಗದೆ ಪರದಾಡುವಂತಾಗಿದೆ. ಮಗನಿಗೆ ಪೊಲೀಸ್​ ಕೆಲಸವೂ ಇದೆ, ಒಳ್ಳೆಯ ರೂಪವೂ ಇದೆ. ಆದರೂ ಮದುವೆ ವಯಸ್ಸು ಮೀರುತ್ತಿದ್ದರೂ ಹುಡುಗಿ ಸಿಗುತ್ತಿಲ್ಲವಲ್ಲ ಎಂದು ಆತನ ಪೋಷಕರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಜೋರಾಗಿ ನಕ್ಕು ದವಡೆಯನ್ನೇ ಕಳೆದುಕೊಂಡ ಯುವತಿ..!

ತನಗೆ ಇನ್ನೂ ಮದುವೆ ಆಗದಿರುವುದಕ್ಕೆ ತನ್ನ ಉದ್ಯೋಗವೇ ಕಾರಣ ಎಂಬ ನಿರ್ಧಾರಕ್ಕೆ ಬಂದ ಸಿದ್ಧಾಂತಿ ಕಾನ್​ಸ್ಟೆಬಲ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೈದರಾಬಾದ್​ನ ಚಾರ್ಮಿನಾರ್ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್ ಸಿದ್ಧಾಂತಿ ಮದುವೆಯಾಗುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲೂ ಇದೇ ಕಾರಣ ನೀಡಿದ್ದು, ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಹಾರಾಷ್ಟ್ರದ ಮಹಾತಾಯಿ; 20ನೇ ಬಾರಿ ಗರ್ಭಿಣಿಯಾದ 38 ವರ್ಷದ ಮಹಿಳೆ!

2014ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಸಿದ್ಧಾಂತಿ ಪ್ರಮೋಷನ್ ಪಡೆದು ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ಆದರೆ, 5 ವರ್ಷಗಳ ನಂತರ ತನ್ನ ಕೆಲಸವೇ ತನಗೆ ಮುಳುವಾಗುತ್ತಿದೆ ಎಂದರಿತ ಅವರು ರಾಜೀನಾಮೆ ನೀಡಿದ್ದಾರೆ. 'ಇಂಜಿನಿಯರಿಂಗ್ ಪದವಿ ಮುಗಿಸಿರುವ ನಾನು ಪೊಲೀಸ್ ಅಧಿಕಾರಿಯಾಬೇಕೆಂದು ಈ ಹುದ್ದೆಗೆ ಸೇರಿದ್ದೆ. ಉನ್ನತ ಅಧಕಾರಿಯಾಗಬೇಕೆಂಬ ಕನಸಿನೊಂದಿಗೆ ಕೆಲಸ ಮಾಡುತ್ತಿದ್ದೆ. ಆದರೆ, ಈಗ ನನ್ನ ತಪ್ಪಿನ ಅರಿವಾಗಿದೆ. ಹೊತ್ತಲ್ಲದ ಹೊತ್ತಿನಲ್ಲಿ ನಾನು ಕೆಲಸ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಹುಡುಗಿಯರು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ'.

resignation letter of hyderabad constable
ಪೊಲೀಸ್ ಪೇದೆ ಸಿದ್ಧಾಂತಿ ಪ್ರತಾಪ್ ರಾಜೀನಾಮೆ ಪತ್ರ
'ನನ್ನ ಹಿರಿಯ ಕಾನ್​​ಸ್ಟೆಬಲ್​ಗಳನ್ನು ನಾನು ನೋಡುತ್ತಿದ್ದೇನೆ. ಎಸ್​ಐ ಮತ್ತು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಪ್ರಮೋಷನ್ ನೀಡುತ್ತಿದ್ದೀರಿ. ಆದರೆ, ನಮ್ಮಂತಹ ಕೆಳದರ್ಜೆಯ ಪೇದೆಗಳು 30-40 ವರ್ಷ ಕೆಲಸ ಮಾಡಿದರೂ ಯಾವುದೇ ಪ್ರಮೋಷನ್ ಇಲ್ಲದೆ ಕೆಲಸ ಮಾಡುತ್ತಿರುತ್ತೇವೆ. ಹೀಗಾಗಿ, ನಾನು ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದೇನೆ' ಎಂದು ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ಸಿದ್ಧಾಂತಿ ಪ್ರತಾಪ್ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading