Unlock 5.0 Guidelines: ಅಕ್ಟೋಬರ್​ 1ರಿಂದ ಅನ್​ಲಾಕ್​ 5.0: ಯಾವೆಲ್ಲ ವಲಯಕ್ಕೆ ರಿಲೀಫ್​?

ಇನ್ನು, ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್​​ಗಳನ್ನು ತೆರೆಯಲು ಕೇಂದ್ರವು ಅವಕಾಶ ನೀಡುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಕೇಂದ್ರವು ಇನ್ನೂ ಸಹ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ.

news18-kannada
Updated:September 28, 2020, 2:34 PM IST
Unlock 5.0 Guidelines: ಅಕ್ಟೋಬರ್​ 1ರಿಂದ ಅನ್​ಲಾಕ್​ 5.0: ಯಾವೆಲ್ಲ ವಲಯಕ್ಕೆ ರಿಲೀಫ್​?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಸೆ.28): ನಾಲ್ಕನೇ ಹಂತದ ಕೋವಿಡ್​-19 ಲಾಕ್​ಡೌನ್​ ಸಡಿಲಿಕೆ ಅಂದರೆ ಅನ್​ಲಾಕ್​ 4.0 ಇದೇ ಸೆಪ್ಟೆಂಬರ್ 30ರಂದು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 1ರಿಂದ ಅನ್​ಲಾಕ್​ 5.0 ಜಾರಿಯಾಗಲಿದೆ. ಇನ್ನು ಕೇಂದ್ರ ಸರ್ಕಾರವು ಅನ್​ಲಾಕ್​ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದೆ ಅಷ್ಟೇ. ಮುಂದಿನ ಹಂತದ ಲಾಕ್​ಡೌನ್​ ಸಡಿಲಿಕೆಯಲ್ಲಿ ಕೇಂದ್ರವು ಯಾವೆಲ್ಲಾ ವಲಯಗಳಿಗೆ ಸಡಿಲಿಕೆ ನೀಡಬಹುದು ಎಂದು ಸಾರ್ವಜನಿಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅಂದರೆ ಕೊರೋನಾ ವೈರಸ್​ ಬಂದಾಗಿನಿಂದ ಮುಚ್ಚಿರುವ ಶಿಕ್ಷಣ ಸಂಸ್ಥೆಗಳು, ಸಿನಿಮಾ ಥಿಯೇಟರ್​​ಗಳು ಈ ಅನ್​ಲಾಕ್​ 5.0 ಮೂಲಕ ತೆರೆಯುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಇತ್ತೀಚೆಗೆ ಪಿಎಂ ನರೇಂದ್ರ ಮೋದಿಯವರು ತೀವ್ರ ಕೊರೋನಾ ಬಾಧಿತ 7 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪ್ರಧಾನಿ ಮೋದಿ, ಅತೀ ಸೂಕ್ಷ್ಮ ಕಂಟೈನ್ಮೆಂಟ್​ ​ ಜೋನ್ ಕಲ್ಪನೆಯನ್ನು ಕಾರ್ಯಗತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಯಾ ರಾಜ್ಯದ ಸಿಎಂಗಳಿಗೆ ಸೂಚನೆ ನೀಡಿದ್ದರು. ದೆಹಲಿಯನ್ನೂ ಒಳಗೊಂಡಂತೆ ಈ 7 ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಲಾಕ್​ಡೌನ್​ ಅಥವಾ ಕರ್ಫ್ಯೂ ವಿಧಿಸುವುದನ್ನು ತಡೆಯುವಂತೆ ಮೋದಿ ಸಲಹೆ ನೀಡಿದ್ದರು.

ಸಾರ್ವಜನಿಕರು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕೇಂದ್ರವು ಸಾಲು-ಸಾಲು ಸಡಿಲಿಕೆಗಳನ್ನು ಘೋಷಿಸಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಅನ್​ಲಾಕ್​ 4.0 ಮಾರ್ಗಸೂಚಿ ಹೊರಡಿಸುವಾಗ, ಕೇಂದ್ರದ ಅನುಮತಿ ಇಲ್ಲದೇ ರಾಜ್ಯ ಸರ್ಕಾರಗಳು ಸ್ವಇಚ್ಛೆಯಿಂದ ಲಾಕ್​ಡೌನ್​ ವಿಧಿಸಲು ಸಾಧ್ಯವಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿತ್ತು.

ಆರ್ಥಿಕ ಚಟುವಟಿಕೆಗಳು:

ರೆಸ್ಟೋರೆಂಟ್​​ಗಳು, ಮಾಲ್​ಗಳು, ಸಲೂನ್​ ಹಾಗೂ ಜಿಮ್​ಗಳನ್ನು ತೆರೆಯಲು ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ. ಅದೇ ರೀತಿ ಅಕ್ಟೋಬರ್​​ನಿಂದ ಇನ್ನೂ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಇನ್ನು, ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್​​ಗಳನ್ನು ತೆರೆಯಲು ಕೇಂದ್ರವು ಅವಕಾಶ ನೀಡುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಕೇಂದ್ರವು ಇನ್ನೂ ಸಹ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ.

ವಿಜಯಪುರದಲ್ಲಿ ಶಾಂತಿಯುತ ಬಂದ್; ಎಂದಿನಂತಿರುವ ಜನರ ಓಡಾಟ, ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್​

ಆಗಸ್ಟ್​​​​ನಲ್ಲಿ ಮಾಹಿತಿ ಮತ್ತು ಪ್ರಸರಣ ಸಚಿವಾಲಯದ ಕಾರ್ಯದರ್ಶಿ ಅಮಿತ್​ ಖರೆ, ಚಿತ್ರಮಂದಿರಗಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ವ್ಯವಸ್ಥೆ ಸೂತ್ರವನ್ನು ಗೃಹ ಸಚಿವಾಲಯಕ್ಕೆ ಸೂಚಿಸಿದ್ದರು. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮೊದಲ ಮತ್ತು ಮುಂದಿನ ಸಾಲುಗಳಲ್ಲಿ ಪರ್ಯಾಯ(ಆಲ್ಟರ್​​ನೇಟ್) ಸೀಟುಗಳನ್ನು ಖಾಲಿ ಇಡುವುದು ಎಂದು ಖರೆ ಹೇಳಿದ್ದರು.ಪಶ್ಚಿಮ ಬಂಗಾಳ ರಾಜ್ಯವು ಅಕ್ಟೋಬರ್​ 1ರಿಂದ ಸಿನಿಮಾ ಥಿಯೇಟರ್​​​ಗಳನ್ನು ತೆರೆಯುವುದಾಗಿ ಘೋಷಿಸಿದೆ. ಶೇ.50ರಷ್ಟು ಅಥವಾ ಅದಕ್ಕಿಂತೂ ಕಡಿಮೆ ಜನರಿಗೆ ಥಿಯೇಟರ್​​ನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.

ಪ್ರವಾಸೋದ್ಯಮ:

ಕೊರೋನಾ ಸಾಂಕ್ರಾಮಿಕ ರೋಗದಿಂದ ಅತೀ ಹೆಚ್ಚು ಒಡೆತ ತಿಂದ ಕ್ಷೇತ್ರ ಪ್ರವಾಸೋದ್ಯಮ. ಸದ್ಯ ಚೇತರಿಕೆಯ ಹಾದಿಯಲ್ಲಿದೆ. ಆರ್ಥಿಕ ಕುಸಿತ ಕಂಡ ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳಲು ಕೇಂದ್ರ ಅವಕಾಶ ನೀಡಬಹುದು. ಅಕ್ಟೋಬರ್​​​ನಿಂದ ಪ್ರವಾಸಿಗರಿಗೆ ಪ್ರವಾಸಿ ತಾಣಗಳು ತೆರೆಯಬಹುದು ಎಂಬ ನಿರೀಕ್ಷೆ ಇದೆ.

ಶಿಕ್ಷಣ ಕ್ಷೇತ್ರ:

ಇನ್ನು ಶಿಕ್ಷಣ ಕ್ಷೇತ್ರಕ್ಕೆ ಬಂದರೆ, ಸೆಪ್ಟೆಂಬರ್ 21ರಿಂದ ದೇಶಾದ್ಯಂತ 9-12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಶುರು ಮಾಡಲಾಗಿದೆ. ಮುಂದಿನ ತಿಂಗಳು ಸಹ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಪ್ರಾಥಮಿಕ ಶಾಲೆಗಳನ್ನು ಇನ್ನೂ ಕೆಲ ವಾರಗಳವರೆಗೆ ಮುಚ್ಚುವ ಸಾಧ್ಯತೆ ಇದೆ.

ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಈಗಾಗಲೇ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಹೊಸ ಶೈಕ್ಷಣಿಕ ವರ್ಷವು ಆನ್​ಲೈನ್​ ತರಗತಿಗಳ ಮೂಲಕ ಪ್ರಾರಂಭವಾಗಲಿದೆ.
Published by: Latha CG
First published: September 28, 2020, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading