Acid Attack: ಮದುವೆ ಮನೆಗೆ ಒಳಗೇ ನಡೆಯಿತು ಆ್ಯಸಿಡ್ ದಾಳಿ! ವಧು-ವರ ಸೇರಿ 12 ಮಂದಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಥಮಿಕ ಮಾಹಿತಿಯ ಪ್ರಕಾರ, ಮದುವೆ ಸಮಾರಂಭ ವಧುವಿನ ಮನೆಯಲ್ಲಿ ನಡೆಯುತ್ತಿತ್ತು. ಈ ಹಂತದಲ್ಲಿ ಹಠಾತ್‌ ಆಗಿ ಕರೆಂಟ್‌ ಹೋಗಿದೆ. ಸಂಪೂರ್ಣ ಕತ್ತಲು ಆವರಿಸಿದ್ದ ಸಂದರ್ಭದ ಲಾಭ ಪಡೆದ ಅಪರಿಚಿತ ವ್ಯಕ್ತಿ, ಮಂಟಪದಲ್ಲಿ ಕುಳಿತಿದ್ದ ವಧು ಹಾಗೂ ವರರನತ್ತ ಗುರಿಯಾಗಿಸಿ ಆಸಿಡ್‌ ರೀತಿಯ ಲಿಕ್ವಿಡ್‌ ಎಸೆದಿದ್ದಾನೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Chhattisgarh, India
  • Share this:

ಛತ್ತಿಸ್​ಗಢ​: ಅಪರಿಚಿತ ವ್ಯಕ್ತಿಯೊಬ್ಬ ಮದುವೆ ಸಮಾರಂಭದ (Wedding Party) ವೇಳೆ ವಧು ವರರ ಮೇಲೆ ಆ್ಯಸಿಡ್‌ (Acid) ರೀತಿಯ ಲಿಕ್ವಿಡ್​ ದ್ರವವನ್ನು ಎರಚಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ವಧು-ವರ ಮಾತ್ರವಲ್ಲದೆ ಅವರ 10 ಮಂದಿ ಸಂಬಂಧಿಕರ ತಾಗಿ ಸುಟ್ಟು ಗಾಯಗಳಾದ ಘಟನೆ ಛತ್ತೀಸ್‌ಗಢದ (Chhattisgarh) ಬಸ್ತಾರ್‌ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಬಸ್ತಾರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮ ಈಗ ಶೋಕದಲ್ಲಿ ಮುಳುಗಿದೆ. ಕರೆಂಟ್ ಹೋಗಿದ್ದ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಅಪರಿಚಿತ ಯುವಕ ವಧು-ವರರ (Bride-Groom) ಮೇಲೆ ಆಸಿಡ್ ನಂತರ ಧ್ರವವನ್ನು (Acid Attack) ಎರಚಿದ್ದಾನೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಆಸಿಡ್‌ ರೀತಿಯ ದ್ರವ ಇದಾಗಿದ್ದು, ವಧು-ವರರ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. 10 ಮಂದಿ ಸಂಬಂಧಿಕರೂ ಇದರಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸುಧಾಪಾಲ್ ನಿವಾಸಿ 23 ವರ್ಷದ ದಮ್ರು ಬಾಘೇಲ್ ಮತ್ತು 19 ವರ್ಷದ ಸುನೀತಾ ಕಶ್ಯಪ್ ಎಂಬುವವರ ವಿವಾಹ ಗ್ರಾಮದಲ್ಲಿ ನಡೆಯುತ್ತಿತ್ತು. ಮನೆಯಲ್ಲಿ ಸಂತೋಷ ಮತ್ತು ಮೋಜಿನ ವಾತಾವರಣವಿತ್ತು. ಅಷ್ಟರಲ್ಲಿ ಏಕಾಏಕಿ ದುರ್ಘಟನೆ ನಡೆದಿದ್ದು, ಸಂಭ್ರಮದ ಕ್ಷಣ ಗೊಂದಲ, ಕಿರುಚಾಟಕ್ಕೆ ಕಾರಣವಾಗಿತ್ತು.


ಇದನ್ನೂ ಓದಿ: Marriage: ಗಂಡನನ್ನಷ್ಟೇ ಅಲ್ಲ ಅವನ ಸಹೋದರರನ್ನೂ ಮದ್ವೆಯಾಗ್ಬೇಕು ವಧು! ಇಲ್ಲಿ ಮಹಿಳೆಗೆ ದ್ರೌಪದಿಯಂತೆ ಬಹು ಪತಿಯರು!


ಕರೆಂಟ್ ಹೋದ ಸಂದರ್ಭದಲ್ಲಿ ದಾಳಿ


ಪ್ರಾಥಮಿಕ ಮಾಹಿತಿಯ ಪ್ರಕಾರ, ಮದುವೆ ಸಮಾರಂಭ ವಧುವಿನ ಮನೆಯಲ್ಲಿ ನಡೆಯುತ್ತಿತ್ತು. ಈ ಹಂತದಲ್ಲಿ ಹಠಾತ್‌ ಆಗಿ ಕರೆಂಟ್‌ ಹೋಗಿದೆ. ಸಂಪೂರ್ಣ ಕತ್ತಲು ಆವರಿಸಿದ್ದ ಸಂದರ್ಭದ ಲಾಭ ಪಡೆದ ಅಪರಿಚಿತ ವ್ಯಕ್ತಿ, ಮಂಟಪದಲ್ಲಿ ಕುಳಿತಿದ್ದ ವಧು ಹಾಗೂ ವರರನತ್ತ ಗುರಿಯಾಗಿಸಿ ಆಸಿಡ್‌ ರೀತಿಯ ಲಿಕ್ವಿಡ್‌ ಎಸೆದಿದ್ದಾನೆ. ಇದರಿಂದ ವಧು-ವರರಿಗಲ್ಲದೆ, ಅವರ ಅಕ್ಕಪಕ್ಕ ಕುಳಿತಿದ್ದವರಿಗೂ ಲಿಕ್ವಿಡ್ ತಗುಲಿ ಸಣ್ಣ-ಪುಟ್ಟ ಗಾಯಗಳಾಗಿವೆ.




ಆಸ್ಪತ್ರೆಗೆ ಸಾಗಿಸಿದ ಶಾಸಕ


ಈ ವೇಳೆ ಮದುವೆ ಸಮಾರಂಭದಲ್ಲಿ ಹಾಜರಿದ್ದ ನಾರಾಯಣಪುರದ ಕಾಂಗ್ರೆಸ್‌ ಶಾಸಕ ಚಂದನ್‌ ಕಶ್ಯಪ್‌, ಗಾಯಗೊಂಡ ಎಲ್ಲರನ್ನೂ ತಮ್ಮ ಹಾಗೂ ಬೆಂಗಾವಲು ಪಡೆಯ ಕಾರಿನಲ್ಲಿ ಭಾನ್‌ಪುರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಗೊಂಡ 12 ಜನರಲ್ಲಿ ವಧು, ವರ ಹಾಗೂ ಇತರೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಗದಲ್‌ಪುರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಆರೋಪಿ ಪತ್ತೆಗಾಗಿ ಪೊಲೀಸರಿಂದ ಹುಡುಕಾಟ


ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಭಾನಪುರಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಘನಶ್ಯಾಮ್ ಕಾಂಬ್ಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡವರನ್ನು ಮೊದಲು ಭಾನಪುರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಹಾರಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರರನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Weird Marriage: ಮದುವೆಗೆ ಮುನ್ನ ವರನಿಗೆ ಬೀಳುತ್ತೆ ಚಪ್ಪಲಿ ಏಟು! ತಲೆಕೆಳಗಾಗಿ ಕಟ್ಟಿ ಥಳಿಸುವ ವಿಚಿತ್ರ ಸಂಪ್ರದಾಯ

 ಹೋಮ್​ ಥಿಯೇಟರ್​ನಲ್ಲಿ ಬಾಂಬ್ ಫಿಕ್ಸ್ ಮಾಡಿ ವರನನ್ನು ಕೊಂದ ಪಾಪಿ


ಇದೇ ತಿಂಗಳ ಆರಂಭದಲ್ಲಿ ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ಘೋರ ಘಟನೆ ನಡೆದಿತ್ತು. ವಿವಾಹಿತ ವ್ಯಕ್ತಿಯೊಬ್ಬ ತನ್ನೊಂದಿಗೆ ಸಂಬಂಧದಲ್ಲಿದ್ದ ಯುವತಿ ಬೇರೆಯವನನ್ನು ಮದುವೆಯಾಗುತ್ತಿರುವುದನ್ನು ಸಹಿಸದ ತಾನೇ ಬಾಂಬ್ ತಯಾರಿಸಿ ಹೋಮ್​ ಥಿಯೇಟರ್​ನಲ್ಲಿ ಫಿಕ್ಸ್ ಮಾಡಿ ಉಡುಗೊರೆ ನೀಡಿದ್ದ.


ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಫಿಕ್ಸ್ ಮಾಡಲು ಯತ್ನಿಸಿದಾಗ ಸ್ಪೋಟಗೊಂಡು ನವ ವಿವಾಹಿತ ಹಾಗೂ ಆತನ ಸಹೋದರ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿದ್ದರು. ವಿವಾಹದ ವೇಳೆ ಆ ಹೋಮ್​ ಥಿಯೇಟರ್​ ಅನ್ನು ನೀಡಿದ್ದು ವಧುವಿನ ಮಾಜಿ ಪ್ರಿಯಕರ ಎಂಬುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

First published: