Supersonic Flights: ಬರಲಿವೆ ಶಬ್ಧಕ್ಕಿಂತ ವೇಗವಾಗಿ ಹೋಗೋ ವಿಮಾನಗಳು; ಪ್ರಯಾಣ ಸಮಯ ಅರ್ಧಕ್ಕರ್ಧ ಕಡಿತ !

ಈ ಸೂಪರ್​ಸಾನಿಕ್ ವಿಮಾನದ ಟಿಕೆಟ್​ ದರ 5000 ಡಾಲರ್(3,65,735.25 ರೂ.)​​​ ಎಂದು ಬೂಮ್ ಹೇಳಿದೆ. ಆದರೆ ಈ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಅಮೆರಿಕ ಏರ್​​ಲೈನ್ಸ್​ ಯುನೈಟೆಡ್​​ ತಿಳಿಸಿದೆ.

ವಿಮಾನ

ವಿಮಾನ

  • Share this:
    ಅಮೆರಿಕ ಏರ್​ಲೈನ್ಸ್​ ಯುನೈಟೆಡ್(US Airlines United) ಶಬ್ದಕ್ಕಿಂತ ವೇಗವಾಗಿ ಹೋಗುವ​  15 ಹೊಸ ಸೂಪರ್​ಸಾನಿಕ್​ ವಿಮಾನಗಳನ್ನು ಖರೀದಿಸಲಿದ್ದು,  2029ರ ವೇಳೆಗೆ  ಪ್ರಯಾಣಿಕರಿಗೆ ಲಭ್ಯವಾಗಲಿವೆ ಎಂದು ಘೋಷಿಸಿದೆ. ಈ ಸೂಪರ್​ಸಾನಿಕ್(Supersonic Flights) ಹೊಸ ವಿಮಾನಗಳನ್ನು ಡೆನ್ವರ್​ ಮೂಲದ ಬೂಮ್ ಎಂಬ ಕಂಪನಿ ಉತ್ಪಾದಿಸಲಿದೆ. ಸೂಪರ್​ಸಾನಿಕ್​ ವಿಮಾನಗಳು ಶಬ್ಧಕ್ಕಿಂತ ವೇಗವಾಗಿ ಹಾರಾಟ ಮಾಡುತ್ತವೆ. 60,000 ಅಡಿ(18,300 ಮೀ) ಎತ್ತರದಲ್ಲಿ, ಅಂದರೆ 660 mph(1060km/h) ವೇಗದಲ್ಲಿ ಹಾರುತ್ತವೆ. ಒಂದು ಸಾಮಾನ್ಯ ಪ್ರಯಾಣಿಕರ ಜೆಟ್ ಸುಮಾರು 560mph (900km / h) ವೇಗದಲ್ಲಿ ಪ್ರಯಾಣಿಸಬಹುದು. ಆದರೆ ಓವರ್​ಚರ್​ 1,122mph (1,805km / h) ವೇಗವನ್ನು ತಲುಪುವ ನಿರೀಕ್ಷೆಯಿದೆ. ಇದನ್ನು ಮ್ಯಾಕ್ 1.7 ಎಂತಲೂ ಕರೆಯುತ್ತಾರೆ.

    ಏರ್​ ಫ್ರಾನ್ಸ್​​ ಮತ್ತು ಬ್ರಿಟಿಷ್​​ ಏರ್​ವೇಸ್​​​ ನಿವೃತ್ತಿಯ ಬಳಿಕ 2003ರಲ್ಲಿ ಸೂಪರ್​ಸಾನಿಕ್​ ಪ್ರಯಾಣಿಕರ ವಿಮಾನಗಳು ತಮ್ಮ ಹಾರಾಟವನ್ನು ನಿಲ್ಲಿಸಿದವು.

    ಸೂಪರ್​ಸಾನಿಕ್​ ವಿಮಾನಗಳು ದುಪ್ಪಟ್ಟು ವೇಗದಲ್ಲಿ ಹಾರುವುದರಿಂದ ಪ್ರಯಾಣದ ಸಮಯವನ್ನು ಉಳಿಸಬಹುದು. ಲಂಡನ್​​ನಿಂದ ನ್ಯೂಯಾರ್ಕ್​ ತಲುಪಲು ಸುಮಾರು 7 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸೂಪರ್​ಸಾನಿಕ್ ಜೆಟ್​ನಲ್ಲಿ ಕೇವಲ ಮೂರುವರೆ ಗಂಟೆಯಲ್ಲಿ ನ್ಯೂಯಾರ್ಕ್​ಗೆ ಹೋಗಬಹುದು. ಲಾಸ್​ ಏಂಜಲೇಸ್​ನಿಂದ ಸಿಡ್ನಿಗೆ 25 ಗಂಟೆಗಳ ಸಮಯ ಬೇಕು. ಆದರೆ ಈ ಸೂಪರ್​ಸಾನಿಕ್​ ಜೆಟ್​ನಲ್ಲಿ 6.45 ನಿಮಿಷಗಳ ಅವಧಿಯಲ್ಲಿ ತಲುಪಬಹುದಾಗಿದೆ.

    ಇದನ್ನೂ ಓದಿ:Viral Video: ಅಗಲಿದ ಮಾವುತನಿಗೆ ಗಜರಾಜನ ಅಂತಿಮ ವಿದಾಯ; ಕೇರಳದಲ್ಲೊಂದು ಮನಕಲಕುವ ದೃಶ್ಯ !

    ಈ ಸೂಪರ್​ಸಾನಿಕ್ ವಿಮಾನದ ಟಿಕೆಟ್​ ದರ 5000 ಡಾಲರ್(3,65,735.25 ರೂ.)​​​ ಎಂದು ಬೂಮ್ ಹೇಳಿದೆ. ಆದರೆ ಈ ಬಗ್ಗೆ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಅಮೆರಿಕ ಏರ್​​ಲೈನ್ಸ್​ ಯುನೈಟೆಡ್​​ ತಿಳಿಸಿದೆ.

    ಸೂಪರ್​ಸಾನಿಕ್​ ವಿಮಾನಗಳ ಹಾರಾಟದಿಂದ ಎರಡು ಸಮಸ್ಯೆಗಳು ಎದುರಾಗುತ್ತವೆ. ಸೂಪರ್​ ಸಾನಿಕ್​ ಜೆಟ್​ನ್ನು ಖರೀದಿಸಲು ಮುಂದಾಗಿರುವ ಯುಎಸ್​ ಏರ್​​ಲೈನ್ಸ್​ ಯುನೈಟೆಡ್​​ ಮುಂದೆ ಎರಡು ಸವಾಲುಗಳಿವೆ. ಶಬ್ಧ ಮತ್ತು ಮಾಲಿನ್ಯ. ಸೂಪರ್​ಸಾನಿಕ್ ವಿಮಾನಗಳು ಶಬ್ಧಕ್ಕಿಂತ ವೇಗವಾಗಿ ಚಲಿಸುವುದರಿಂದ ಇವುಗಳ ಹಾರಾಟದ ಸಂದರ್ಭದಲ್ಲಿ ಹೆಚ್ಚಿನ ಶಬ್ದ ಬರುತ್ತದೆ. ಸ್ಪೋಟ ಅಥವಾ ಸಿಡಿಲಿನ ಶಬ್ದದ ರೀತಿ ಭೂಮಿಗೆ ಕೇಳಬಹುದು.

    ಇದನ್ನೂ ಓದಿ:Rohini Sindhoori vs Shilpa Nag: 12 ಕೋಟಿ ಲೆಕ್ಕಕ್ಕೆ ದಾಖಲೆ ಸಮೇತ ಉತ್ತರ ಕೊಟ್ಟ ಶಿಲ್ಪಾನಾಗ್ ..!

    ಸಮುದ್ರ ಮಟ್ಟವನ್ನು ದಾಟುವ ತನಕ ಈ ಸೂಪರ್​ಸಾನಿಕ್ ವಿಮಾನಗಳು ನಿಧಾನವಾಗಿ ಹಾರಾಟ ನಡೆಸುತ್ತವೆ. ಈ ವಿಮಾನಗಳಿಗೆ ಯಥೇಚ್ಛ ಪೆಟ್ರೋಲ್​ನ ಅಗತ್ಯವಿದೆ. ಹೆಚ್ಚಿನ ಶಕ್ತಿ ಬೇಕು ಅಂದರೆ, ಹೆಚ್ಚಿನ ಫ್ಯುಯೆಲ್ ಬೇಕು. ಜೆಟ್​ಗಳು ಅತೀ ವೇಗವಾಗಿ ಚಲಿಸಬೇಕೆಂದರೆ ಹೆಚ್ಚು ಫ್ಯುಯೆಲ್ ಹಾಕಲೇಬೇಕಾಗಿದೆ.

    ಮುಂಬರುವ ವರ್ಷಗಳಲ್ಲಿ ಈ ಸೂಪರ್​ಸಾನಿಕ್​ ಜೆಟ್​ ವಿಮಾನಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ. ಬೂಮ್​ ಕಂಪನಿ ಉತ್ಪಾದಿಸಲಿರುವ ಓವರ್​ಚರ್ ಜೆಟ್​ಗಳು 2029ರ ಅವಧಿಗೆ ಪ್ರಯಾಣಕರಿಗೆ ಲಭ್ಯವಾಗಲಿವೆ. 2026ರಲ್ಲಿ ಹಾರಾಟ ನಡೆಸಲಿದ್ದರೂ, 2029ಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Latha CG
    First published: