ಬೆಳಕಿನ ಹಬ್ಬ ದೀಪಾವಳಿಗೆ ವಿಶೇಷ ಗೌರವ ಸೂಚಿಸಿದ ವಿಶ್ವಸಂಸ್ಥೆ..!

ಈ ಬೆಳಕಿನ ಹಬ್ಬವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ.

zahir | news18
Updated:November 7, 2018, 6:16 PM IST
ಬೆಳಕಿನ ಹಬ್ಬ ದೀಪಾವಳಿಗೆ ವಿಶೇಷ ಗೌರವ ಸೂಚಿಸಿದ ವಿಶ್ವಸಂಸ್ಥೆ..!
ಈ ಬೆಳಕಿನ ಹಬ್ಬವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ.
zahir | news18
Updated: November 7, 2018, 6:16 PM IST
-ನ್ಯೂಸ್ 18 ಕನ್ನಡ

ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿರುವ ದೀಪಾವಳಿ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿಶ್ವಸಂಸ್ಥೆ ಗೌರವ ಸೂಚಿಸಿದೆ. ಬೆಳಿಕಿನ ಹಬ್ಬದ ಸಲುವಾಗಿ ಇಂದು ವಿಶ್ವಸಂಸ್ಥೆಯು ಅಂಚೆ ಚೀಟಿಗಳಿರುವ ಹಾಳೆಯೊಂದನ್ನು ಬಿಡುಗಡೆ ಮಾಡಿದೆ.

ವಿಶ್ವದ ಅನೇಕ ಭಾಗದಲ್ಲಿ ಭಾರತೀಯರು ಭಾರೀ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸುತ್ತಾರೆ. ಈ ಬೆಳಕಿನ ಹಬ್ಬವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ. ಮ‌ೂರು ದಿವಸಗಳ ಕಾಲ ಆಚರಿಸಲಾಗುವ ಈ ಹಬ್ಬವು ಸುಖ ಸಮೃದ್ಧಿಯನ್ನು ನೀಡಲಿ ಎಂಬ ಆಶಯದೊಂದಿಗೆ ವಿಶ್ವ ಸಂಸ್ಥೆಯ ಅಂಚೆ ಚೀಟಿ ವಿಭಾಗವು ಈ ಬಾರಿ ವಿಶೇಷ ಸ್ಟಾಂಪ್​ಗಳನ್ನು ಬಿಡುಗಡೆಗೊಳಿಸಿದೆ.


ಇದನ್ನೂ ಓದಿ: ಕೇವಲ 1313 ರೂ.ಗೆ ವಿಮಾನ ಪ್ರಯಾಣ: ಗೊ ಏರ್​ ನೀಡಿದೆ ದೇಶ-ವಿದೇಶ ಸುತ್ತಲು ಭರ್ಜರಿ ಆಫರ್
Loading...

1.15 ಡಾಲರ್ ಬೆಲೆ ( 84 ರೂ) ಬೆಲೆಯ ಅಂಚೆ ಚೀಟಿಯ ಹಾಳೆಯಲ್ಲಿ 10 ಸ್ಟಾಂಪ್​ ಸ್ಟಿಕ್ಕರ್​ಗಳಿರಲಿದೆ. ಸಂಸ್ಥೆಯ ಟ್ವಿಟ್ಟರ್ ಖಾತೆಯ ಮೂಲಕ ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಿದೆ. ದೀಪಾಲಂಕೃತವಾದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಫೋಟೊವನ್ನು ಕೂಡ ಶೇರ್ ಮಾಡಿದ್ದಾರೆ.

First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...