ಕಾನ್ಪುರ: ಪ್ರೀತಿಗೆ (Love) ಕಣ್ಣಿಲ್ಲ ಎನ್ನುತ್ತಾರೆ, ಆಸ್ತಿ, ಅಂತಸ್ತು, ಜಾತಿ-ಧರ್ಮ ಪ್ರೀತಿಯ ಮುಂದೆ ಏನೇನು ಅಲ್ಲ ಎನ್ನಲಾಗುತ್ತದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪ್ರೀತಿಯ ಮುಂದೆ ಸಂಬಂಧಗಳೂ ಕೂಡ ಬೆಲೆಯನ್ನು ಕಳೆದುಕೊಂಡಿದೆ. ಯುವಕನೊಬ್ಬ ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರಿಯತಮನ ತಂದೆಯೊಂದಿಗೆ ಪರಾರಿಯಾಗಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದ ಚಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 13 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ನಾಪತ್ತೆಯಾಗಿದ್ದ ಬಾಲಕಿಯನ್ನು ದೆಹಲಿಯಿಂದ (Dehli) ಪೊಲೀಸರ ಕೈಗೆ ಸಿಕ್ಕಿದ್ದಾರೆ. ವಿಚಾರಣೆ ವೇಳೆ ಪೊಲೀಸ್ (Police) ಅಧಿಕಾರಿಗಳನ್ನೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಏಕೆಂದರೆ ಆ ಹುಡುಗಿ ದೆಹಲಿಯಲ್ಲಿ ತನ್ನ ಪ್ರೇಮಿಯ ತಂದೆಯೊಂದಿಗೆ ಆತನ ಹೆಂಡತಿಯಾಗಿ ವಾಸಿಸುತ್ತಿದ್ದಳು ಎಂಬ ಅಚ್ಚರಿಯ ಸುದ್ದಿ ಕೇಳಿ ಅಧಿಕಾರಿಗಳು ಅಚ್ಚರಿಗೊಳಗಾಗಿದ್ದಾರೆ.
ಕೆಲಸ ಮಾಡುವ ಸ್ಥಳದಲ್ಲಿ ಪ್ರೇಮಾಂಕುರ
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಕಂಜುಸಿ ಗ್ರಾಮದ ನಿವಾಸಿ ಕಮಲೇಶ್ ಕುಮಾರ್ ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದರು. 2022ರಲ್ಲಿ, ಅವರು ತಮ್ಮ ಮಗನೊಂದಿಗೆ ಚಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ, ಅವನ ಮಗ ಆ ಪ್ರದೇಶದಲ್ಲಿ ವಾಸಿಸುವ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ಕ್ರಮೇಣ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ವಿಚಾರ ತಿಳಿದ ಕೂಡಲೇ ಕಮಲೇಶ್ ಕುಮಾರ್ ಮಗನನ್ನು ಗದರಿಸಿ ಮನೆಗೆ ಬೀಗ ಹಾಕಿ ಬಾಲಕಿಯನ್ನು ಭೇಟಿಯಾಗದಂತೆ ನಿರ್ಬಂಧ ಹೇರಿದ್ದ. ಆದರೂ ಯುವತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದನ್ನ ಅಮಿತ್ ಮುಂದುವರಿಸಿದ್ದ. ನಂತರ ಇಬ್ಬರ ಮದುವೆಗೆ ಕಮಲೇಶ್ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ.
ಪ್ರಿಯತಮನ ತಂದೆಯೊಂದಿಗೆ ಯುವತಿ ಎಸ್ಕೇಪ್
ಆದರೆ ಮಾರ್ಚ್ 2022 ರಲ್ಲಿ, ಆ ಯುವತಿ ಕಾಣೆಯಾಗಿದ್ದಳು. ಯುವತಿ ಮನೆಯವರು, ಸಂಬಂಧಿಕರು ಅಪರಿಚಿತರ ವಿರುದ್ಧ ಚಕೇರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಇತ್ತ ರಾತ್ರಿ ಗೆಳತಿಯೊಂದಿಗೆ ಮಾತನಾಡಿ ಮಲಗಿದ್ದ ಯುವಕನಿಗೆ ಬೆಳಗ್ಗೆ ಎದ್ದಾಗ ಡಬಲ್ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಒಂದು ಕಡೆ ತಾನು ಪ್ರೀತಿಸಿದ ಯುವತಿ ಕಾಣೆಯಾಗಿದ್ದರೆ, ಇತ್ತ ತನ್ನ ಅಪ್ಪ ಕೂಡ ಕಾಣೆಯಾಗಿದ್ದ. ಯುವತಿ ಕುಟುಂಬಸ್ಥರು ಹಾಗೂ ಅಮಿತ್ ಕುಟುಂಬಸ್ಥರು ಈ ಬಗ್ಗೆ ಪ್ರತ್ಯೇಕ ದೂರು ದಾಖಲಿಸಿದ್ದರು.
ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು ಕಳೆದ ಒಂದು ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು, ಕೊನೆಗೂ ಕಮಲೇಶ್ ಹಾಗೂ ಯುವತಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ದೆಹಲಿಯಲ್ಲಿ ಜೊತೆಯಾಗಿ ವಾಸವಿದ್ದರು. ಯುವತಿಯನ್ನು ರಕ್ಷಿಸಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನು ಕಮಲೇಶನ್‌ನ್ನು ವಶಕ್ಕೆ ಪಡೆದಿದ್ದಾರೆ.
ಕಮಲೇಶ್ ಜೊತೆಗೆ ಪ್ರೀತಿಸಿ ಓಡಿ ಹೋಗಿರುವುದಾಗಿ ತಿಳಿಸಿದ ಯುವತಿ
ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಆ ಯುವತಿ ತಾನೂ ಕಮಲೇಶ್ನನ್ನು ಪ್ರೀತಿಸಿ ಆತನ ಜೊತೆಗೆ ಹೋಗಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾಳೆ ಎಂದು ಎಸಿಪಿ ಅಮರನಾಥ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: Special Marriage Act: ಅಂತರ್ಜಾತಿ ವಿವಾಹ ಆಗುವವರಿಗೆ ಸಂಕಷ್ಟ ತಂದೊಡ್ಡಿದೆ ಈ ಹೊಸ ನಿಯಮ
ಅಮಿತ್ನನ್ನು ಮಾತನಾಡಿಸಲು ಆಗಾಗ್ಗೆ ಆತನ ಮನೆಗೆ ಬರುತ್ತಿದ್ದ ಯುವತಿ ಆತನ ತಂದೆ ಕಮಲೇಶ್ನನ್ನು ಮಾತನಾಡಿಸುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ಹಾಗಾಗಿ ಪ್ರತಿದಿನ ಮನೆಗೆ ಬರುತ್ತಿದ್ದ ಯುವತಿ ಅಮಿತ್ ನೋಡುವ ಹಾಗೆ ಬಂದು ಕಮಲೇಶ್ ಜೊತೆ ಸಲುಗೆ ಬೆಳೆಸಿಕೊಂಡಿದ್ದಾಳೆ. ಒಂದು ದಿನ ಇಬ್ಬರು ದೆಹಲಿಗೆ ಓಡಿ ಹೋಗಿ ಜೊತೆಯಾಗಿ ವಾಸ ಮಾಡಲು ಶುರು ಮಾಡಿದ್ದಾರೆ. ಇದೀಗ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಾಲಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಬಾಲಕಿಯ ಹೇಳಿಕೆ ಆಧರಿಸಿ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ