EMM Negative: ಭಾರತದಲ್ಲೂ ಪತ್ತೆಯಾಯ್ತು ವಿಶಿಷ್ಟ ರಕ್ತದ ಗುಂಪು! ವಿಶ್ವದಲ್ಲಿರೋದು ಈ ಗುಂಪಿನ ಕೇವಲ 10 ಜನ ಮಾತ್ರ

ನಮಗೆ ಮೊಬೈಲ್ ನಲ್ಲಿ ಬರುವಂತಹ ಸಂದೇಶಗಳು ಸಹ ಈ ನಾಲ್ಕು ರಕ್ತದ ಗುಂಪುಗಳ ಅವಶ್ಯಕತೆ ಇದೆ ಅಂತಾನೆ ಬರುತ್ತವೆ. ಈ ಒ ರಕ್ತದ ಗುಂಪಿನಲ್ಲಿ ಒ ಪಾಸಿಟಿವ್ ಮತ್ತು ಒ ನೆಗೆಟಿವ್ ಎಂಬ ಎರಡು ಮಾದರಿಯ ರಕ್ತಗಳಿರುತ್ತವೆ. ಇಷ್ಟನ್ನು ಹೊರತುಪಡಿಸಿದರೆ ಬೇರೆ ರಕ್ತದ ಗುಂಪುಗಳಿಲ್ಲ ಅಂತ ನಾವು ನೀವು ಅಂದುಕೊಂಡಿರುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಸಾಮಾನ್ಯವಾಗಿ ಈ ರಕ್ತದ ಗುಂಪುಗಳಲ್ಲಿ (Blood Group) ಎ, ಬಿ, ಒ ಅಥವಾ ಎಬಿ ಎಂಬ ರಕ್ತದ ಗುಂಪುಗಳನ್ನು ನೋಡಿರುತ್ತೇವೆ. ನಮಗೆ ಮೊಬೈಲ್​ನಲ್ಲಿ ಬರುವಂತಹ ಸಂದೇಶಗಳು ಸಹ ಈ ನಾಲ್ಕು ರಕ್ತದ ಗುಂಪುಗಳ ಅವಶ್ಯಕತೆ ಇದೆ ಅಂತಾನೆ ಬರುತ್ತವೆ. ಈ O ರಕ್ತದ ಗುಂಪಿನಲ್ಲಿ O ಪಾಸಿಟಿವ್ ಮತ್ತು O ನೆಗೆಟಿವ್ ಎಂಬ ಎರಡು ಮಾದರಿಯ ರಕ್ತಗಳಿರುತ್ತವೆ (Blood). ಇಷ್ಟನ್ನು ಹೊರತು ಪಡಿಸಿದರೆ ಬೇರೆ ರಕ್ತದ ಗುಂಪುಗಳಿಲ್ಲ ಅಂತ ನಾವು ನೀವು ಅಂದು ಕೊಂಡಿರುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಆದರೆ ಇಲ್ಲಿ ಇನ್ನೊಂದು ವಿಭಿನ್ನವಾದ ರಕ್ತದ ಗುಂಪೊಂದು ಸಹ (EMM Negative) ಇದೆಯಂತೆ ಅಂತ ಇಲ್ಲೊಂದು ಸುದ್ದಿ ಬಂದಿದೆ ನೋಡಿ.

ಭಾರತ ದೇಶದಲ್ಲಿ ಕಂಡು ಬಂದ ವಿಭಿನ್ನ ರಕ್ತದ ಗುಂಪು
ಹೌದು.. ಈ ವಿಭಿನ್ನವಾದ ರಕ್ತದ ಗುಂಪು ನಮ್ಮ ಭಾರತ ದೇಶದಲ್ಲಿಯೇ ಕಂಡು ಬಂದಿದೆ. ಅದು ಇದು ಇಡೀ ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿದೆ ಎಂದು ಹೇಳಲಾಗುತ್ತಿದೆ. ಗುಜರಾತ್ ನ 65 ವರ್ಷದ ವ್ಯಕ್ತಿಯೊಬ್ಬರು ಹೃದ್ರೋಗಿಯಾಗಿದ್ದು, ಅವರ ದೇಹದಲ್ಲಿ ಇರುವುದು ಇಎಂಎಂ ನೆಗೆಟಿವ್ ರಕ್ತದ ಗುಂಪು ಅಂತ ಗುರುತಿಸಲಾಗಿದೆ. ಇದು ನಿಜಕ್ಕೂ ವಿಶಿಷ್ಟ ರಕ್ತದ ಗುಂಪು ಆಗಿದ್ದು, ಇದನ್ನು ಇತರೆ ಸಾಮಾನ್ಯವಾದ ಎ, ಬಿ, ಒ ಅಥವಾ ಎಬಿ ಎಂದು ಅಸ್ತಿತ್ವದಲ್ಲಿರುವ ರಕ್ತದ ಗುಂಪುಗಳಾಗಿ ವರ್ಗೀಕರಿಸಲು ಸಾಧ್ಯವಿಲ್ಲ.

ಸಾಮಾನ್ಯವಾಗಿ, ಮಾನವ ದೇಹದಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿರುತ್ತವೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ಅವು ಮುಂದೆ ಎ, ಬಿ, ಒ, ಆರ್ ಎಚ್​ನಂತಹ 42 ರೀತಿಯ ವ್ಯವಸ್ಥೆಗಳನ್ನು ಒಳಗೊಂಡಿವೆ. 375 ರೀತಿಯ ಪ್ರತಿಜನಕಗಳಿವೆ. ಇದರಲ್ಲಿ ಇಎಂಎಂ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ.

ಜಗತ್ತಿನಲ್ಲಿ 10 ಜನರು ಮಾತ್ರ ಇದ್ಯಂತೆ ಈ ಬ್ಲಡ್ ಗ್ರೂಪ್ 
ಆದಾಗ್ಯೂ, ಜಗತ್ತಿನಲ್ಲಿ ಅಂತಹ 10 ಜನರು ಮಾತ್ರ ಇದ್ದಾರೆ ಅಂತೆ, ಅವರು ತಮ್ಮ ರಕ್ತದಲ್ಲಿ ಇಎಂಎಂ ಹೈ-ಫ್ರೀಕ್ವೆನ್ಸಿ ಆಂಟಿಜೆನ್ ಅನ್ನು ಹೊಂದಿಲ್ಲ, ಇದು ಅವರನ್ನು ಸಾಮಾನ್ಯ ಮನುಷ್ಯರಿಗಿಂತ ಭಿನ್ನವಾಗಿಸುತ್ತದೆ. ಅಂತಹ ಅಪರೂಪದ ರಕ್ತದ ಗುಂಪುಗಳನ್ನು ಹೊಂದಿರುವ ಜನರು ತಮ್ಮ ರಕ್ತವನ್ನು ಯಾರಿಗೂ ದಾನ ಮಾಡಲು ಸಾಧ್ಯವಿಲ್ಲ ಮತ್ತು ಅವರ ದೇಹದಲ್ಲಿರುವ ರಕ್ತದ ಗುಂಪಿನ ರಕ್ತವನ್ನು ಯಾರಿಂದಲೂ ಪಡೆಯಲು ಸಹ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಇಲ್ಲಿಯವರೆಗೆ, ಪ್ರಪಂಚದಲ್ಲಿ ಅಂತಹ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ಕೇವಲ 9 ಜನರಿದ್ದರು, ಆದರೆ ಈಗ, ಗುಜರಾತ್ ನ ರಾಜಕೋಟ್ ನಲ್ಲಿರುವ 65 ವರ್ಷದ ವ್ಯಕ್ತಿಯನ್ನು ಸದರಿ ರಕ್ತದ ಗುಂಪಿನೊಂದಿಗೆ ಗುರುತಿಸಲಾಗಿದೆ. ಸೂರತ್ ನ ಸಮರ್ಪಣ್ ರಕ್ತದಾನ ಕೇಂದ್ರದ ವೈದ್ಯ ಷಣ್ಮುಖ್ ಜೋಶಿ, ಹೃದಯಾಘಾತದಿಂದ ಅಹ್ಮದಾಬಾದ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ರೋಗಿಗೆ ಹೃದಯ ಶಸ್ತ್ರಚಿಕಿತ್ಸೆಗೆ ರಕ್ತದ ಅಗತ್ಯವಿತ್ತು ಎಂದು ಹೇಳಿದರು.

ಇಎಂಎಂ ನೆಗೆಟಿವ್  ಬ್ಲಡ್ ಗ್ರೂಪ್
ಆದಾಗ್ಯೂ, ಅಹಮದಾಬಾದ್ ನ ಪ್ರಯೋಗಾಲಯದಲ್ಲಿ ಅವರ ರಕ್ತದ ಗುಂಪು ಪತ್ತೆಯಾಗದಿದ್ದಾಗ, ರಕ್ತದ ಮಾದರಿಗಳನ್ನು ಸೂರತ್ ನ ರಕ್ತದಾನ ಕೇಂದ್ರಕ್ಕೆ ಕಳುಹಿಸಲಾಯಿತು. ಅಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ ನಂತರ ಗೊತ್ತಾಯ್ತು ಈ ರಕ್ತದ ಮಾದರಿಯು ಯಾವುದೇ ಗುಂಪಿನೊಂದಿಗೆ ಹೊಂದಿಕೆಯಾಗುವುದಿಲ್ಲ ಅಂತ. ನಂತರ ವೃದ್ಧ ಮತ್ತು ಅವನ ಸಂಬಂಧಿಕರ ರಕ್ತದ ಮಾದರಿಗಳನ್ನು ಹೆಚ್ಚಿನ ತನಿಖೆಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು.

ಇದನ್ನೂ ಓದಿ: Single Use Plastic Ban: ಬೆಂಗಳೂರಿಗರೇ ಅಲರ್ಟ್, ಪ್ಲಾಸ್ಟಿಕ್ ಕವರ್ ನಿಮ್ಮ ಕೈಯಲ್ಲಿದ್ದರೆ ಹಾಕ್ತಾರೆ ದಂಡ!

ತದ ನಂತರ, ಆ ವೃದ್ಧನ ರಕ್ತದ ಪ್ರಕಾರವು ಭಾರತದ ಮೊದಲ ಮತ್ತು ವಿಶ್ವದ ಅತ್ಯಂತ ವಿರಳ ರಕ್ತದ ಗುಂಪಿನ ಹತ್ತನೇ ಪ್ರಕರಣವಾಗಿದೆ ಎಂದು ಕಂಡು ಹಿಡಿಯಲಾಯಿತು. ರಕ್ತದಲ್ಲಿ ಇಎಂಎಂ ಕೊರತೆಯಿಂದಾಗಿ, ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ (ಐಎಸ್‌ಬಿಟಿ) ಇದಕ್ಕೆ ಇಎಂಎಂ ನೆಗೆಟಿವ್ ಎಂದು ಹೆಸರಿಸಿದೆ.
Published by:Ashwini Prabhu
First published: