Power Shock: ಕರ್ನಾಟಕ ಸೇರಿ 13 ರಾಜ್ಯಗಳಿಗೆ ಪವರ್ ಶಾಕ್! ಕತ್ತಲೆಯಲ್ಲೇ ಇರಬೇಕಾ ಕರುನಾಡು?

ಒಟ್ಟು 13 ರಾಜ್ಯಗಳು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕಿದೆ. ಇವುಗಳ ಬಿಲ್ ಬಾಕಿ ಮೊತ್ತ ಬರೋಬ್ಬರಿ 5085 ಕೋಟಿ ರೂಪಾಯಿಗಳಾಗಿವೆ. ಹೀಗಾಗಿ ಕರ್ನಾಟಕಕ್ಕೂ ಶಾಕ್ ಎದುರಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕರ್ನಾಟಕ (Karnataka) ರಾಜ್ಯ ಸೇರಿ ದೇಶದ 13 ರಾಜ್ಯಗಳಿಗೆ (13 States) ಪವರ್ ಶಾಕ್ (Power Shock) ಎದುರಾಗಿದೆ. ಇದುವರೆಗೂ ವಿದ್ಯುತ್ ಬಿಲ್ (Electricity Bill) ಬಾಕಿ ಪಾವತಿಸದ ಕಾರಣ 13 ರಾಜ್ಯಗಳಿಗೆ ಕೇಂದ್ರ ವಿದ್ಯುತ್ ಸಚಿವಾಲಯವು (Union Ministry of Electricity) ನಿರ್ಬಂಧ (Restrictions) ವಿಧಿಸಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಧ್ಯ ಪ್ರದೇಶ, ಮಿಜೋರಾಂ, ಜಾರ್ಖಂಡ್, ಬಿಹಾರ, ರಾಜಸ್ಥಾನ, ಆಂಧ್ರ, ಮಹಾರಾಷ್ಟ್ರ, ಛತ್ತೀಸ್‌ಗಢ್‌ ಸೇರಿದಂತೆ 13 ರಾಜ್ಯಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ 13 ರಾಜ್ಯಗಳು ವಿದ್ಯುತ್ ವಿನಿಮಯ ವೇದಿಕೆಗಳಲ್ಲಿ ಖರೀದಿ ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಿ ಕೇಂದ್ರ ವಿದ್ಯುತ್ ಸಚಿವಾಲಯ ಖಡಕ್ ಸೂಚನೆ ನೀಡಿದೆ. ಹೀಗಾಗಿ ಕರ್ನಾಟಕ ಕತ್ತಲೆಯಲ್ಲಿ ಕಳೆಯಬೇಕಾ ಎನ್ನುವ ಪ್ರಶ್ನೆ ಮೂಡಿದೆ.

 13 ರಾಜ್ಯಗಳಿಗೆ ಯಾವುದಕ್ಕೆ ನಿರ್ಬಂಧ?

ಕರ್ನಾಟಕ ಸೇರಿದಂತೆ 13 ರಾಜ್ಯಗಳು ವಿದ್ಯುತ್ ವಿನಿಮಯ ವೇದಿಕೆಗಳಲ್ಲಿ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ ಅಂತ ಮೇಲೆ ಕೇಂದ್ರ ವಿದ್ಯುತ್ ಸಚಿವಾಲಯ ಆದೇಶಿಸಿದೆ. ಹೊಸ ಲೇಟ್ ಪೇಮೆಂಟ್ ಸರ್‌ಚಾರ್ಜ್ (ಎಲ್‌ಪಿಎಸ್) ನಿಯಮಗಳ ಅಡಿಯಲ್ಲಿ ಈ ನಿಯಮ ನಾಳೆಯಿಂದ ಅಂದರೆ ಆಗಸ್ಟ್ 19 ರಿಂದ ಅನ್ವಯವಾಗುತ್ತದೆ.

 ಯಾವ ರಾಜ್ಯಗಳಿಂದ  ಎಷ್ಟು ಬಿಲ್ ಬಾಕಿ ಇದೆ?

ತೆಲಂಗಾಣ - 1,380.96 ಕೋಟಿ ರೂ, ತಮಿಳುನಾಡು - 926.16 ಕೋಟಿ ರೂ, ರಾಜಸ್ಥಾನ - 500.66 ಕೋಟಿ ರೂ, ಜಮ್ಮು ಮತ್ತು ಕಾಶ್ಮೀರ - 434.81 ಕೋಟಿ ರೂ, ಆಂಧ್ರಪ್ರದೇಶ - 412.69 ಕೋಟಿ ರೂ, ಮಹಾರಾಷ್ಟ್ರ - 381.66 ಕೋಟಿ ರೂ, ಕರ್ನಾಟಕ - 355.20 ಕೋಟಿ ರೂ, ಮಧ್ಯಪ್ರದೇಶ - 229.11 ಕೋಟಿ ರೂ, ಜಾರ್ಖಂಡ್ - 214.47 ಕೋಟಿ ರೂ, ಬಿಹಾರ - 173.50 ಕೋಟಿ ರೂ, ಛತ್ತೀಸ್‌ಗಢ - 27.49 ಕೋಟಿ ರೂ, ಮಣಿಪುರ - 29.94 ಕೋಟಿ ರೂ, ಮಿಜೋರಾಂ - 17.23 ಕೋಟಿ ರೂಪಾಯಿ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ಕಣಿವೆ ನಾಡಿನಲ್ಲಿ ಕೋಲಾಹಲ, ಹೊರಗಿನವರಿಗೂ Jammu Kashmir ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ!

ಒಟ್ಟು 5085 ಕೋಟಿ ವಿದ್ಯುತ್ ಬಿಲ್ ಬಾಕಿ!

ಒಟ್ಟು 13 ರಾಜ್ಯಗಳು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕಿದೆ. ಇವುಗಳ ಬಿಲ್ ಬಾಕಿ ಮೊತ್ತ ಬರೋಬ್ಬರಿ 5085 ಕೋಟಿ ರೂಪಾಯಿಗಳಾಗಿವೆ.

ರಾಜ್ಯಗಳಿಗೆ ಶಾಕ್ ಕೊಟ್ಟಿದ್ದು ಇದೇ ಮೊದಲೇನಲ್ಲ!

ಕೇಂದ್ರ ವಿದ್ಯುತ್ ಸಚಿವಾಲಯವು ವಿದ್ಯುತ್ ಬಾಕಿ ತೀರಿಸದ ರಾಜ್ಯಗಳಿಗೆ ಶಾಕ್ ಕೊಟ್ಟ ನಿದರ್ಶನಗಳು ಈಗಾಗಲೇ ಇವೆ. ಆದರೆ ಹೀಗೆ ಹತ್ತಕ್ಕೂ ಹೆಚ್ಚು ರಾಜ್ಯಗಳು ಒಟ್ಟಾಗಿ ನಿರ್ಬಂಧಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಈ ಹಿಂದೆಯೂ ಇಂತಹ ರಾಜ್ಯಗಳಿಗೆ ನಿರ್ಬಂಧ ಹೇರಿದ ನಿದರ್ಶನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಕೆಲವು ರಾಜ್ಯಗಳ ಮೇಲೆ ನಿರ್ಬಂಧಗಳನ್ನು ಹಾಕಿ, ವಿದ್ಯುತ್ ಬಿಲ್ ಪಾವತಿಸಿದ ತಕ್ಷಣ ಕೆಲವೇ ದಿನಗಳಲ್ಲಿ ತೆರವು ಗೊಳಿಸಲಾಗಿತ್ತು.

ಇದನ್ನೂ ಓದಿ: YouTube Channels: ದೇಶ ವಿರೋಧಿ ವಿಷಯಗಳನ್ನು ಹಂಚುತ್ತಿದ್ದ 8 ಯೂಟ್ಯೂಬ್​ ಚಾನೆಲ್​ಗಳನ್ನು ಬ್ಲಾಕ್​ ಮಾಡಿದ ಭಾರತ ಸರ್ಕಾರ!

ಕೆಲವು ರಾಜ್ಯಗಳಿಂದ ಮನವಿ

ಇನ್ನು ಕೇಂದ್ರ ವಿದ್ಯುತ್ ಸಚಿವಾಲಯದ ಶಾಕ್‌ಗೆ ಕೆಲ ರಾಜ್ಯಗಳು ಥಂಡಾ ಹೊಡೆದಿವೆ. ಹೀಗಾಗಿ ಕೆಲವು ರಾಜ್ಯಗಳು ನಿಗದಿತ ಸಮಯ ಪಡೆದು, ವಿದ್ಯುತ್ ಬಾಕಿ ತೀರಿಸುವ ಭರವಸೆ ನೀಡಿವೆ. ಹೀಗಾಗಿ ಮನವಿ ಮಾಡಿದ ನಂತರ ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿ ವಿದ್ಯುತ್ ವಿತರಣೆಯನ್ನು ಕೆಲವು ಗಂಟೆಗಳ ಕಾಲ ವಿಸ್ತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Published by:Annappa Achari
First published: