ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) 100ನೇ ಸಂಚಿಕೆ ಮನ್ ಕಿ ಬಾತ್ (Mann Ki Baat) ನಾಳೆ ಭಾನುವಾರ ಬಿಡುಗಡೆಯಾಗಲಿದೆ. ಈ ವಿಶೇಷ ಕಾರ್ಯಕ್ರಮ ಪ್ರಸಾರಕ್ಕಾಗಿ ಬಿಜೆಪಿ (BJP) ದೇಶಾದ್ಯಂತ ಸಿದ್ಧತೆ ನಡೆಸುತ್ತಿದೆ. ಕರ್ನಾಟಕ ಚುನಾವಣಾ (Karnataka Election) ಪ್ರಚಾರ ಕಾರ್ಯಕ್ರಮದಲ್ಲಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ( Home minister Amit Shah) ನಾಳೆ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈಗೆ (Mumbai) ತೆರಳಲಿದ್ದಾರೆ. ಮನ್ ಕಿ ಬಾತ್ ನ 100ನೇ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಲೇಸರ್ ಶೋ (Laser Show) ಮೂಲಕ ಮನ್ ಕಿ ಬಾತ್ ಕಾರ್ಯಕ್ರಮದ ಕೆಲವು ಸಂಚಿಕೆಗಳನ್ನು ಪ್ರದರ್ಶಿಸಲಾಗುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಮುಂಬೈಗೆ ಭೇಟಿ ನೀಡಲಿದ್ದಾರೆ. ಕಾಂದಿವಲಿಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಅಮಿತ್ ಶಾ ಅವರ ಕುಟುಂಬ ಪ್ರವಾಸ ಎಂದು ಹೇಳಲಾಗಿದೆ. ಈ ನಡುವೆ ಅಮಿತ್ ಶಾ ಬೆಳಗ್ಗೆ 'ಮನ್ ಕಿ ಬಾತ್' ನ 100ನೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಲೇಪಾರ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಉಪಸ್ಥಿತರಿರಲಿದ್ದಾರೆ. ಕಾಂದಿವಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾಗವಹಿಸಲಿದ್ದಾರೆ.
ಮನ್ ಕಿ ಬಾತ್ ಆಲಿಸಿರುವ 100 ಕೋಟಿಗೂ ಹೆಚ್ಚು ಜನ
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಎಂಬ ರೇಡಿಯೋ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಭಾನುವಾರ ಪ್ರಸಾರವಾಗುವ ಈ ಜನಪ್ರಿಯ ರೆಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದುವರೆಗೂ ಬರೋಬ್ಬರಿ 99 ಸಂಚಿಕೆಗಳನ್ನು ಪೂರೈಸಿರುವ ಮನ್ ಕಿ ಬಾತ್, ಇದೀಗ 100ನೇ ಸಂಚಿಕೆಗೆ ಕಾಲಿಟ್ಟಿದೆ ಪ್ರತಿಷ್ಠಿತ ಐಐಎಂ ರೋಹ್ಟಕ್ (IIM Rohtak) ಈ ಬಗ್ಗೆ ಸರ್ವೆ ನಡೆಸಿದ್ದು, ಇದುವರೆಗೂ ಮನ್ ಕಿ ಬಾತ್ ಕಾರ್ಯಕ್ರಮವನ್ನು ದೇಶದ 100 ಕೋಟಿಗೂ ಹೆಚ್ಚು ಮಂದಿ ಕೇಳಿದ್ದಾರಂತೆ!
ಶೇ. 96ರಷ್ಟು ಜನ ಒಮ್ಮೆಯಾದರೂ ಮನ್ ಕಿ ಬಾತ್ ಕೇಳಿದ್ದಾರೆ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಬಗ್ಗೆ ದೇಶದ ಸುಮಾರು ಶೇ. 96ರಷ್ಟು ಜನರಿಗೆ ತಿಳಿದಿದೆ. ಈ ಕಾರ್ಯಕ್ರಮ 100 ಕೋಟಿ ಜನರನ್ನು ತಲುಪಿದೆ, ಅವರು ಒಮ್ಮೆಯಾದರೂ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಈ ಅಂಕಿಅಂಶಗಳನ್ನು ಪ್ರಸಾರ ಭಾರತಿ ನಿಯೋಜಿಸಿದ ಮತ್ತು ರೋಹ್ಟಕ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಡೆಸಿದ ಸಮಗ್ರ ಅಧ್ಯಯನದಲ್ಲಿ ಬಹಿರಂಗಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ