ಲಕ್ನೋ: ಒಬ್ಬ ಮದ್ಯವ್ಯಸನಿಯಾಗಿರುವ (Alcohol) ಅಧಿಕಾರಿಗಿಂತ ಒಬ್ಬ ಆಟೋ ಚಾಲಕ (Auto Driver) ಅಥವಾ ಕೂಲಿಗಾರರು (Labour) ಹೆಣ್ಣು ಮಕ್ಕಳಿಗೆ (Womens) ಉತ್ತಮ ವರ (Groom) ಎಂದು ಕೇಂದ್ರ ವಸತಿ (Union Minister of State for Housing) ಮತ್ತು ನಗರ ವ್ಯವಹಾರಗಳ (Urban Affairs ) ರಾಜ್ಯ ಸಚಿವ ಕೌಶಲ್ ಕಿಶೋರ್ (Kaushal Kishore ) ಹೇಳಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳಿಗೆ ಕುಡಿತದ ದಾಸರಾಗಿರುವವರನ್ನು ಮದುವೆಯಾಗಬೇಡಿ ಎಂದು ಮನವಿ ಮಾಡಿದ್ದಾರೆ. ಕುಡಿತದ ಚಟಕ್ಕೆ ಬಲಿಯಾದ ತಮ್ಮದೇ ಪುತ್ರನ ಕರುಣಾಜನಕ ಕಥೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ನಾನೊಬ್ಬ ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನೂ ಜನಸಾಮಾನ್ಯರು ಏನು ಮಾಡುತ್ತಾರೆ.
ಮದ್ಯ ಸೇವಿಸುವವರ ಆಯಸ್ಸು ಕಡಿಮೆ
ಶನಿವಾರ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ಡಿ-ಅಡಿಕ್ಷನ್ ಕುರಿತು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಿಶೋರ್ ಅವರು, ಕುಡಿಯುವವರ ಆಯಸ್ಸು ತುಂಬಾ ಕಡಿಮೆ ಎಂದು ಹೇಳಿದ್ದಾರೆ.
“ನನ್ನ ಮಗ ಆಕಾಶ್ ಕಿಶೋರ್ ತನ್ನ ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವ ಅಭ್ಯಾಸವನ್ನು ಮಾಡಿಕೊಂಡನು. ನಂತರ ಅವನನ್ನು ಡಿ-ಅಡಿಕ್ಷನ್ ಸೆಂಟರ್ಗೆ ಸೇರಿಸಲಾಯಿತು. ಅವನು ಕೆಟ್ಟ ಚಟವನ್ನು ಬಿಟ್ಟಿದ್ದಾನೆ ಎಂದು ಆರು ತಿಂಗಳ ನಂತರ ಮದುವೆ ಮಾಡಲಾಯಿತು. ಆದರೆ ಮತ್ತೆ ಕುಡಿಯಲು ಆರಂಭಿಸಿದ.
ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ
ಮದುವೆ ನಂತರ ಹೆಚ್ಚು ಮದ್ಯ ಸೇವಿಸುತ್ತಿದ್ದ. ಹೀಗಾಗಿ ಮದ್ಯವೇ ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ ಅಕ್ಟೋಬರ್ 19 ರಂದು, ಆಕಾಶ್ ನಿಧನ ಹೊಂದಿದ. ಅವನು ಸಾಯುವ ವೇಳೆ ಅವನ ಮಗ ಇನ್ನೂ 2 ವರ್ಷದ ಚಿಕ್ಕ ವಯಸ್ಸಿನವನು. "ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ, ಇದರಿಂದ ನನ್ನ ಸೊಸೆ ವಿಧವೆಯಾದಳು, ಹಾಗಾಗಿ ನಿಮ್ಮ ಮಗಳು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು" ಎಂದು ಹೇಳಿದರು.
ಕುಡಿತದ ಚಟದಿಂದ ವರ್ಷಕ್ಕೆ 20 ಲಕ್ಷ ಮಂದಿ ಸಾವು
"ಸ್ವಾತಂತ್ರ್ಯ ಚಳವಳಿಯಲ್ಲಿ, 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು, ಆದರೆ ಮದ್ಯ ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಿದ್ದಾರೆ”. ಸುಮಾರು 80 ಪ್ರತಿಶತದಷ್ಟು ಜನ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ಇವರೆಲ್ಲ ತಂಬಾಕು, ಸಿಗರೇಟ್ ಮತ್ತು 'ಬೀಡಿ' ವ್ಯಸನರಾಗಿದ್ದರಿಂದ ಸಂಭವಿಸಿದೆ ಎಂದು ತಿಳಿಸಿದರು.
ಹೀಗಾಗಿ ಈ ಬಗ್ಗೆ ಜಿಲ್ಲೆಯನ್ನು ವ್ಯಸನಮುಕ್ತವನ್ನಾಗಿಸಲು ಎಲ್ಲಾ ಶಾಲೆಗಳಲ್ಲಿ ವ್ಯಸನಮುಕ್ತ ಅಭಿಯಾನವನ್ನು ಕೊಂಡೊಯ್ಯಬೇಕು ಮತ್ತು ಬೆಳಗ್ಗೆ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.
ಇತ್ತೀಚೆಗಷ್ಟೇ ಬಿಹಾರದಲ್ಲಿ ಅಕ್ರಮ ಮದ್ಯ ಸೇವಿಸಿ ಅನೇಕ ಮಂದಿ ಸಾವು
ಮತ್ತೊಂದಡೆ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿರುವುದರಿಂದ ಅಕ್ರಮ ಮದ್ಯ ಸೇವಿಸಿ ಅನೇಕ ಮಂದಿ ಸಾವನ್ನಪ್ಪಿದ್ದರು. ಈ ನಡುವೆ ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೆ ಕುಡಿತದ ಪರವಾಗಿ ಮಾತನಾಡುವವರು ನಿಮಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳುವ ಮೂಲಕ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Bihar: ನಿತೀಶ್ಗೆ ಶಾಕ್, ಸರ್ಕಾರ ರಚನೆಯಾದ 22 ದಿನದಲ್ಲೇ ಮೊದಲ ವಿಕೆಟ್ ಪತನ, ಸಚಿವ ಸಿಂಗ್ ರಾಜೀನಾಮೆ!
ಹೌದು, ಕಳ್ಳಬಟ್ಟಿ ಸೇವಿಸಿ ಸತ್ತವರಿಗೆ ಪರಿಹಾರ ನೀಡುವುದಿಲ್ಲ. ನಾವು ಕುಡಿಯಬೇಡಿ ಎಂದು ಮನವಿ ಮಾಡುತ್ತಿದ್ದೇವೆ. ಕುಡಿದರೆ ನೀವೇ ಸಾಯುತ್ತೀರಾ ಎಂದು ಹೇಳುತ್ತಿದ್ದೇವೆ. ಆದರೂ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ ಅಂತ ನಿತೀಶ್ ಕುಮಾರ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ