Smriti Irani: ಫೆಬ್ರವರಿ 9ರಂದು ಸ್ಮೃತಿ ಇರಾನಿ ಪುತ್ರಿ ಶಾನೆಲ್ ವಿವಾಹ: ವರ ಯಾರು ಗೊತ್ತೇ?

ಸ್ಮೃತಿ ಇರಾನಿ ಮಗಳಿಗೆ ಮದುವೆ

ಸ್ಮೃತಿ ಇರಾನಿ ಮಗಳಿಗೆ ಮದುವೆ

ಸ್ಮೃತಿ ಇರಾನಿ ಅವರ ಮಗಳು ಅನಿವಾಸಿ ಭಾರತೀಯ ಅರ್ಜುನ್ ಭಲ್ಲಾ ಅವರೊಂದಿಗೆ 2021 ರ ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಗೂ ಕೂಡ ಡೇಟ್ ಫಿಕ್ಸ್ ಆಗಿದ್ದು, ಇವರಿಬ್ಬರ ಮದುವೆ ಸಮಾರಂಭ ನಡೆಯುವ ಹೋಟೆಲ್ ಅನ್ನು ಮೂರು ದಿನಕ್ಕಾಗಿ ಮುಂಚಿತವಾಗಿ ಕಾಯ್ದಿರಿಸಲಾಗಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • New Delhi, India
  • Share this:

ನವದೆಹಲಿ: ಸಾಮಾನ್ಯವಾಗಿ ಸಿನೆಮಾ ಸೆಲೆಬ್ರಿಟಿಗಳ, ಕ್ರಿಕೆಟ್ ಸೆಲೆಬ್ರಿಟಿಗಳ, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಮತ್ತು ರಾಜಕಾರಣಿಗಳ ಮಕ್ಕಳ (Wedding Function) ಮದುವೆ ಸಮಾರಂಭಗಳು ವಿಜೃಂಭಣೆಯಿಂದ (Grand Marriage) ನಡೆಯುತ್ತದೆ. ಅಲ್ಲಿ ಸಂಭ್ರಮ, ಸಡಗರ ಮತ್ತು ಅದ್ದೂರಿತನ ಮೇಳೈಸಿರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.


ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಯಾಕೆಂದರೆ ಇಲ್ಲೊಬ್ಬ ದೇಶದ ಪ್ರಮುಖ ರಾಜಕಾರಣಿಯ ಮಗಳ ಮದುವೆ ನಿಶ್ಚಯವಾಗಿದೆ. ಈ ರಾಜಕಾರಣಿ ಟಿವಿ ಸೀರಿಯಲ್ ಜಗತ್ತಿನಿಂದ ಸಿನಿಮಾ ಲೋಕದವರೆಗೆ ದೇಶಾದ್ಯಂತ ಮನೆ ಮಾತಾದವರು. ಬಳಿಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಅಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಸಿನಿಮಾಗೂ ಸೈ, ರಾಜಕಾರಣಕ್ಕೂ ಸೈ ಅಂತಾ ಜನರಿಂದ ಅನ್ನಿಸಿಕೊಂಡಿರುವವರು. ಅಂದ್ಹಾಗೆ ಈ ರಾಜಕಾರಣಿ ಬೇರೆ ಯಾರೂ ಅಲ್ಲ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani daughter Wedding).


ಹಸೆಮಣೆ ಏರಲಿದ್ದಾರೆ ಸ್ಮೃತಿ ಇರಾನಿ ಮಗಳು


ಹೌದು.. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ ಇರಾನಿ ಅವರ ವಿವಾಹವು ಇದೇ ತಿಂಗಳು ಎಂದರೆ ಫೆಬ್ರುವರಿ 9, 2023 ರಂದು ನಡೆಯಲಿದೆ. ಶಾನೆಲ್ ಇರಾನಿ ಮತ್ತು ಅರ್ಜುನ್ ಭಲ್ಲಾ ಅವರ ವಿವಾಹವು ರಾಜಸ್ಥಾನದ ನಾಗೌರ್ ಜಿಲ್ಲೆಯ ಖಿಮ್ಸರ್ ಕೋಟೆಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಎಲ್​ಪಿಜಿ ಬೆಲೆ ಹೆಚ್ಚಳ: ಸ್ಮೃತಿ ಇರಾನಿ ಪ್ರತಿಭಟಿಸುತ್ತಿರುವ ಹಳೆಯ ಫೋಟೋ ಹಾಕಿ ರಾಹುಲ್ ವ್ಯಂಗ್ಯ


ಸ್ಮೃತಿ ಇರಾನಿ ಅವರ ಮಗಳು ಅನಿವಾಸಿ ಭಾರತೀಯ ಅರ್ಜುನ್ ಭಲ್ಲಾ ಅವರೊಂದಿಗೆ 2021 ರ ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದುವೆಗೂ ಕೂಡ ಡೇಟ್ ಫಿಕ್ಸ್ ಆಗಿದ್ದು, ಇವರಿಬ್ಬರ ಮದುವೆ ಸಮಾರಂಭ ನಡೆಯುವ ಹೋಟೆಲ್ ಅನ್ನು ಮೂರು ದಿನಕ್ಕಾಗಿ ಮುಂಚಿತವಾಗಿ ಕಾಯ್ದಿರಿಸಲಾಗಿದೆ. ಅಂದ ಹಾಗೆ ಶಾನೆಲ್ ಇರಾನಿ ಅವರು ಸ್ಮೃತಿ ಇರಾನಿ ಅವರ ಪತಿ ಜುಬಿನ್ ಇರಾನಿ ಅವರ ಮೊದಲ ಪತ್ನಿ ಮೋನಾ ಇರಾನಿ ಅವರ ಪುತ್ರಿ.


ಸ್ಮೃತಿ ಇರಾನಿ ಅವರ ಮಗಳು ವೃತ್ತಿಯಲ್ಲಿ ವಕೀಲೆ


ಇರಾನಿ ಅವರ ಮಗಳು ವೃತ್ತಿಯಲ್ಲಿ ವಕೀಲೆ ಆಗಿದ್ದು, ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಕೋರ್ಸ್ ಪೂರ್ಣಗೊಳಿಸಿದ್ದಾರೆ. ನಂತರ ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಕಾನೂನು ಕೇಂದ್ರದಿಂದ ಎಲ್ಎಲ್ಎಂ ಪದವಿಯನ್ನು ಪಡೆದಿದ್ದಾರೆ.


ಸ್ಮೃತಿ ಅವರ ಮಗಳ ಹೆಸರನ್ನು ಶಾರುಖ್ ಖಾನ್ ಇಟ್ಟಿದ್ದರಂತೆ


ಇತ್ತೀಚೆಗೆ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸ್ಮೃತಿ ಇರಾನಿ, ತಮ್ಮ ಹಿರಿಯ ಮಗಳ ಹೆಸರನ್ನು ಪಠಾಣ್ ನಟ ಶಾರುಖ್ ಖಾನ್ ನೀಡಿದ್ದಾರೆ ಎಂದು ಹೇಳಿದ್ದರು. ಪಠಾಣ್ ಚಲನಚಿತ್ರದ ವಿರುದ್ಧದ ಬಹಿಷ್ಕಾರದ ಕರೆ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಅವರು ಈ ಹೇಳಿಕೆಯನ್ನು ನೀಡಿದ್ದರು.


ಇದನ್ನೂ ಓದಿ: ಸಿಬಿಎಸ್​ಇ ಫಲಿತಾಂಶ ಪ್ರಕಟ: ಕೇಜ್ರಿವಾಲ್​ , ಸ್ಮೃತಿ ಇರಾನಿ ಮಕ್ಕಳ ಸಾಧನೆ; ಸಂಭ್ರಮದಲ್ಲಿ ದೆಹಲಿ ಸಿಎಂ, ಕೇಂದ್ರ ಸಚಿವೆ


ಪ್ರಸ್ತುತ, ಸ್ಮೃತಿ ಇರಾನಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದು, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿಯೂ ಅಮೇಥಿಯಲ್ಲಿ ಎರಡನೇ ಬಾರಿಗೆ ಗೆದ್ದು ತಮ್ಮ ಕ್ಷೇತ್ರವನ್ನು ಭದ್ರಪಡಿಸಿಕೊಂಡಿದ್ದಾರೆ.


ಮಕ್ಕಳ ಬಗ್ಗೆ ಇರಾನಿ ಹೆಮ್ಮೆ ಪಡುವಂತಹ ಪೋಸ್ಟ್


ಸ್ಮೃತಿ ಇರಾನಿ ಅವರು ಆಗಾಗ್ಗೆ ಒಂದಲ್ಲ ಒಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಹ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2023 ರ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕವನ್ನು ಘೋಷಿಸಿದಾಗ ಸ್ಮೃತಿ ಇರಾನಿ ಅವರ ಮಗಳು ಜೋ ಇರಾನಿ 2019 ರಲ್ಲಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಗೆ ಹಾಜರಾಗಿ 10ನೇ ತರಗತಿಯಲ್ಲಿ ಶೇಕಡಾ 82 ರಷ್ಟು ಅಂಕಗಳನ್ನು ಗಳಿಸಿರುವ ಪೋಸ್ಟ್‌ ಹಾಕಿದ್ದರು.


ಸ್ಮೃತಿ ಇರಾನಿ ಆಗ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮಗಳ ಫಲಿತಾಂಶವನ್ನು ಪೋಸ್ಟ್ ಮಾಡಿ, '10ನೇ ಬೋರ್ಡ್ ಫಲಿತಾಂಶಗಳು ಹೊರಬಂದಿವೆ. ಮಗಳು 82% ಅಂಕ ಗಳಿಸಿದ್ದಾಳೆ. ಸವಾಲುಗಳ ಹೊರತಾಗಿಯೂ ಅವಳು ಉತ್ತಮವಾಗಿ ಮಾಡಿದ್ದಾಳೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ' ಎಂದು ಬರೆದಿದ್ದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು