• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Smriti Irani: ಅಪ್ಪ-ಅಮ್ಮ ಬೇರ್ಪಟ್ಟ ವಿಷಯ ಹೇಳಲು ನನಗೆ 40 ವರ್ಷ ಬೇಕಾಯ್ತು- ಕೇಂದ್ರ ಸಚಿವೆ ಸ್ಮೃತಿ ಇರಾನಿ

Smriti Irani: ಅಪ್ಪ-ಅಮ್ಮ ಬೇರ್ಪಟ್ಟ ವಿಷಯ ಹೇಳಲು ನನಗೆ 40 ವರ್ಷ ಬೇಕಾಯ್ತು- ಕೇಂದ್ರ ಸಚಿವೆ ಸ್ಮೃತಿ ಇರಾನಿ

ಸ್ಮೃತಿ ಇರಾನಿ (ಫೈಲ್​ ಫೋಟೋ)

ಸ್ಮೃತಿ ಇರಾನಿ (ಫೈಲ್​ ಫೋಟೋ)

ಹೋರಾಟಗಳಿಂದ ತುಂಬಿದ ಬಾಲ್ಯ, ಭಾವನಾತ್ಮಕ ಸನ್ನಿವೇಶಗಳು, ತಂದೆಯೊಂದಿಗಿನ ನಂಟು, ನಿಂತಲ್ಲೇ ಮನೆ ಖಾಲಿ ಮಾಡಬೇಕಾದ ಸಂದರ್ಭ ಇದೆಲ್ಲವನ್ನೂ ನೆನೆದು ಕಣ್ಣೀರಾಗಿದ್ದಾರೆ ಸ್ಮೃತಿ ಇರಾನಿ.

 • Trending Desk
 • 5-MIN READ
 • Last Updated :
 • New Delhi, India
 • Share this:

ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ (Smriti Irani) ಇತ್ತೀಚೆಗೆ ಸಂದರ್ಶನವೊಂದರಲ್ಲಿ (Interview) ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಗೊತ್ತಿರದ ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ನಟಿಯಾಗಿದ್ದ ಕಷ್ಟದ ದಿನಗಳು, ತಮ್ಮ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಹಾಗೂ ತಂದೆ-ತಾಯಿ ಪರಸ್ಪರ ಬೇರ್ಪಟ್ಟ ವಿಚಾರದ ಬಗ್ಗೆ ಸೇರಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.


'ಪ್ರೀತಿಸಿ ಹೊಂದಿಕೊಂಡು ಜೀವನ ನಡೆಸಿ ಇಬ್ಬರು ಮಕ್ಕಳನ್ನು ಪಡೆದ ನನ್ನ ತಂದೆ ತಾಯಿ ಒಂದು ದಿನ ಬೇರೆ ಬೇರೆಯಾದರು. ಈ ಭಾವನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನನಗೆ 40 ವರ್ಷಗಳೇ ಬೇಕಾಯಿತು' ಎನ್ನುವ ವಿಷಯವನ್ನು ನಟಿ ಮತ್ತು ರಾಜಕಾರಣಿ ಸ್ಮೃತಿ ಇರಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


ಹೋರಾಟಗಳಿಂದ ತುಂಬಿದ ಬಾಲ್ಯ, ಭಾವನಾತ್ಮಕ ಸನ್ನಿವೇಶಗಳು, ತಂದೆಯೊಂದಿಗಿನ ನಂಟು, ನಿಂತಲ್ಲೇ ಮನೆ ಖಾಲಿ ಮಾಡಬೇಕಾದ ಸಂದರ್ಭ ಇದೆಲ್ಲವನ್ನೂ ನೆನೆದು ಕಣ್ಣೀರಾಗಿದ್ದಾರೆ ಸ್ಮೃತಿ ಇರಾನಿ.


ಗುರ್​ಗಾವ್​ ಮನೆ ಆಹಾರದ ಮೋಹವನ್ನೇ ಕಸಿದುಕೊಂಡಿತು


ಸೃತಿ ಇರಾನಿ ಮೊದಲು ಗುರ್​ಗಾವ್​ನಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸವಿದ್ದರು. ಮನೆಯನ್ನು ಗುಡಿಸಿ, ಒರೆಸಿ ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಸ್ಮೃತಿಯವರದ್ದಾಗಿತ್ತು. ಕೆಲವು ವರ್ಷಗಳ ನಂತರ ಆ ಮನೆಗೆ ಸ್ಮೃತಿ ಪುನಃ ಭೇಟಿ ನೀಡಿ ಹಳೆಯದನ್ನೆಲ್ಲಾ ನೆನಪಿಸಿಕೊಂಡಿದ್ದಾರೆ. ಆ ಮನೆಯಲ್ಲಿ 7 ನೇ ವರ್ಷದ ಹುಟ್ಟು ಹಬ್ಬದ ದಿನ ತೆಗೆದ ಫೋಟೋ ಆ ನಿವಾಸದ ಗುರತಾಗಿ ಉಳಿದಿದೆ ಎನ್ನುತ್ತಾರೆ. ಒಮ್ಮೆ ಸ್ಮೃತಿ ಮತ್ತು ಅವರ ತಂಗಿ ಖಾಲಿ ದಾಲ್​ ತಿನ್ನುತ್ತಿದ್ದ ಸಂದರ್ಭದಲ್ಲಿ ಅವರ ತಾಯಿ ಬಂದರು. ಬೇಗ ನಿಮ್ಮ ಸಾಮಾನು ತೆಗೆದುಕೊಳ್ಳಿ, ಬೇಗ ಬೇಗನೇ ತಿಂದು ಮುಗಿಸಿ ನಾವು ದೆಹಲಿ ಬಿಡಬೇಕು ಎಂದು ರಿಕ್ಷಾ ಹತ್ತಿಸಿ ಕರೆದುಕೊಂಡು ಹೊರಟರು. ನಾನು ಅಂದಿನಿಂದ ಖಾಲಿ ದಾಲ್ ಎಂದಿಗೂ ತಿಂದಿಲ್ಲ ಎನ್ನುತ್ತಾರೆ.


ಇದನ್ನೂ ಓದಿ: Omicron Variant: ವೇಷ ಬದಲಿಸಿ ಮತ್ತೆ ಬರ್ತಿದೆ ಓಮಿಕ್ರಾನ್! ಇವರೆಲ್ಲ ಹುಷಾರಾಗಿರಬೇಕು, ಇಲ್ಲಾಂದ್ರೆ ಡೇಂಜರ್


ಸಂಸದೆಯಾಗಿ ಆ ಮನೆಯ ಮುಂದೆ ನಿಂತರು


ಆ ದಿನ ಮನೆಯ ಹೊರೆಗೆ ಬರಬೇಕಾದರೆ ನಾನು ಈ ಮನೆಯನ್ನು ಮತ್ತೆ ಖರೀದಿ ಮಾಡುತ್ತೇನೆ ಎಂದು ನಿರ್ಧರಿಸಿ ಬಂದಿದ್ದೆ. ಈಗ ಅದರಂತೆ ತೆಗೆದುಕೊಂಡಿದ್ದೇನೆ. ನಾವು ಇಷ್ಟಪಟ್ಟು ಈ ಮನೆಯಿಂದ ಹೊರಗಡೆ ಬಂದಿದ್ದಲ್ಲ, ‘ನಮ್ಮನ್ನು ಹೊರಗೆ ಹೋಗಲು ಹೇಳಲಾಯಿತು. ಆ ಮನೆಯನ್ನು ಕೊಂಡುಕೊಳ್ಳುತ್ತೇನೆ ಎಂದು ಹೇಳಿದೆ. ಆಗ ನನ್ನ ತಾಯಿ 'ಎಷ್ಟೇ ಹಣವಿದ್ದರೂ ನಿಮ್ಮ ದುಃಖವನ್ನು ಮರಳಿ ಖರಿದೀಸಲು ಸಾಧ್ಯವಿಲ್ಲ' ಎಂದಿದ್ದರು ಎಂಬ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ ಕೇಂದ್ರ ಸಚಿವೆ.


‘ನಮ್ಮ ತಾಯಿ ಎಂದಿಗೂ ಹೆಣ್ಣು ಮಕ್ಕಳಿಂದ ಏನನ್ನೂ ಬಯಸಲಿಲ್ಲ’


‘ನಮ್ಮ ತಾಯಿ ಎಂದಿಗೂ ಹೆಣ್ಣು ಮಕ್ಕಳಿಂದ ಏನನ್ನೂ ಬಯಸಲಿಲ್ಲ’ ಎನ್ನುತ್ತಾರೆ ಸ್ಮೃತಿ. ಅವರ ತಾಯಿ ಕಡೆಯ ತನಕ ಬಾಡಿಗೆ ಮನೆಯಲ್ಲೇ ವಾಸವಿದ್ದರು. 6 ವರ್ಷಗಳ ಹಿಂದೆ ಸ್ಮೃತಿಯವರು ಒಂದು ಮನೆ ಕೊಡಿಸಿದ್ದಾರಂತೆ ಅದಕ್ಕೆ ಅವರ ತಾಯಿ 1 ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ಸ್ಮೃತಿಯವರ ತಾಯಿ ‘ನಾನು ಸತ್ತರೆ ನನ್ನ ಸ್ವಂತ ಮನೆಯಲ್ಲೇ ಸಾಯಬೇಕು’ ಎನ್ನುವ ಇಚ್ಚೆಯನ್ನು ಸ್ಮೃತಿಯವರೊಟ್ಟಿಗೆ ಹಂಚಿಕೊಂಡಿದ್ದರಂತೆ. ‘ನಮ್ಮ ತಾಯಿಯವರ ಆಸೆಯಂತೆ ಅವರು ನೆಮ್ಮದಿಯಾಗಿ ಕಡೆಯ ದಿನಗಳನ್ನು ಕಳೆದರೆ ಅದುವೆ ನನಗೆ ತೃಪ್ತಿ’ ಎನ್ನುತ್ತಾರೆ ಸ್ಮೃತಿ.


ನಮ್ಮ ತಂದೆ ತಾಯಿ ಆರ್ಥಿಕ ಮತ್ತು ಸಾಮಾಜಿಕ ಕಷ್ಟಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದರು


ಸ್ಮೃತಿಯವರ ತಂದೆ ಪಂಜಾಬಿ ಖತ್ರಿ ಮತ್ತು ತಾಯಿ ಬೆಂಗಾಲಿ ಬ್ರಾಹ್ಮಣರಾಗಿದ್ದ ಕಾರಣ ಮನೆಯವರ ವಿರೋಧದ ನಡುವೆ ಮದುವೆ ನಡೆಯಿತು. ಮದುವೆಯಾದಾಗ 150 ರೂಪಾಯಿ ಮಾತ್ರವೇ ಇತ್ತು. ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಸ್ಮೃತಿಯವರ ಜನನವಾಯಿತು. ನಂತರ ಗುರ್​ಗಾವ್​ಗೆ ಸ್ಥಳಾಂತರವಾದ್ರು. ನಮ್ಮ ತಂದೆ ತಾಯಿ ಆರ್ಥಿಕ ಮತ್ತು ಸಾಮಾಜಿಕ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಈ ಗಟ್ಟಿತನ ಕೆಲವರಿಗೆ ಮಾತ್ರವೇ ಇರುತ್ತದೆ ಎಂದಿದ್ದಾರೆ ಸ್ಮೃತಿ.


ನಮ್ಮ ತಂದೆ ತಾಯಿ ಬೇರ್ಪಟ್ಟರು ಎಂದು ಹೇಳುವುದಕ್ಕೆ ನನಗೆ 40 ವರ್ಷ ಬೇಕಾಯಿತು


100 ರೂಪಾಯಿಗಳ ಭರವಸೆಯೊಂದಿಗೆ ಬದುಕು ಕಟ್ಟಿದ ಕುಟುಂಬ ನಮ್ಮದು. ನಮ್ಮ ತಂದೆ ಹೆಚ್ಚು ಓದಿದವರಲ್ಲ, ನಮ್ಮ ತಾಯಿ ಪದವೀಧರೆ. ಈ ಕಾರಣಗಳಿಂದ ಅವರ ನಡುವೆ ಅಭಿಪ್ರಾಯ ಬೇಧ ಉಂಟಾಗುತ್ತಿತ್ತು. ಒಂದು ಹಂತದಲ್ಲಿ ನಮ್ಮ ತಂದೆ ತಾಯಿ ಬೇರೆಯಾದರು. ಅದು ನಮ್ಮ ಬದುಕಿನ ಕಷ್ಟದ ದಿನಗಳಾಗಿದ್ದವು. ನಮ್ಮನ್ನು ನಿಕೃಷ್ಠವಾಗಿ ಕಾಣುತಿದ್ದ ದಿನಗಳವು. ನಮ್ಮ ಪೋಷಕರ ವಿಷಯವನ್ನು ಹೇಳಿಕೊಳ್ಳಲು ನನಗೆ 40 ವರ್ಷ ಬೇಕಾಯಿತು ಎನ್ನುತ್ತಾರೆ. ಜೊತೆಗೆ ಅಪ್ಪನ ಜೊತೆಗೆ ಆರ್ಮಿ ಕ್ಲಬ್​ ಹೊರಗೆ ಪುಸ್ತಕ ಮಾರುತ್ತಿದ್ದ ವಿಷಯವನ್ನು ನೆನಪಿಸಿಕೊಂಡಿದ್ದಾರೆ. ಅಮ್ಮ ಮನೆ ಮನೆಗಳಿಗೆ ಹೋಗಿ ಮಸಾಲೆ ಪದಾರ್ಥ ಮಾಡುತ್ತಿದ್ದನ್ನು ಮೆಲುಕು ಹಾಕುತ್ತಾರೆ.


ಇದನ್ನೂ ಓದಿ: Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

top videos


  ಎಷ್ಟೇ ಪ್ರಭಾವಶಾಲಿ, ಶಕ್ತಿಶಾಲಿ, ಸ್ಫೂರ್ತಿದಾಯಕವಾಗಿ ಬೆಳೆದರು ಅದರೊಳಗಿನ ಭಾವನಾತ್ಮಕ ಹೋರಾಟಗಳು ಹಸಿಯಾಗಿಯೇ ಉಳಿದುಬಿಡುತ್ತವೆ ಎನ್ನುವುದಕ್ಕೇ ಇದೊಂದು ಉದಾಹರಣೆ.

  First published: