Video: ಕೈಯಲ್ಲಿ ಖಡ್ಗ ಹಿಡಿದು ಕುಣಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ; ಡ್ಯಾನ್ಸ್​ ವಿಡಿಯೋ ವೈರಲ್

Smriti Irani Dance Video: ಕಡುನೀಲಿ ಬಣ್ಣದ ಸೀರೆಯುಟ್ಟು ವೇದಿಕೆಯ ಮೇಲೆ ಎರಡೂ ಕೈಗಳಲ್ಲಿ ಖಡ್ಗಗಳನ್ನು ಹಿಡಿದು ಸ್ಮೃತಿ ಇರಾನಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೇಂದ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಸ್ಮೃತಿ ಇರಾನಿ ಮಕ್ಕಳ ಜೊತೆಗೆ ನೃತ್ಯ ಮಾಡಿದ್ದಾರೆ.

news18-kannada
Updated:November 16, 2019, 12:11 PM IST
Video: ಕೈಯಲ್ಲಿ ಖಡ್ಗ ಹಿಡಿದು ಕುಣಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ; ಡ್ಯಾನ್ಸ್​ ವಿಡಿಯೋ ವೈರಲ್
ಖಡ್ಗ ಹಿಡಿದು ನೃತ್ಯ ಮಾಡಿದ ಸಚಿವೆ ಸ್ಮೃತಿ ಇರಾನಿ
  • Share this:
ಗುಜರಾತ್​ (ನ. 16): ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೂ ಬರುವ ಮೊದಲು ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಿದವರು. ಮೆಗಾ ಧಾರಾವಾಹಿಯ ನಟಿಯಾಗಿ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ತಮ್ಮ ಖ್ಯಾತಿಯನ್ನೇ ಬಳಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದವರು. ಅವರು ನಟಿಯೆಂಬುದು ಬಹುತೇಕ ಜನರಿಗೆ ಗೊತ್ತಿರುವ ಸಂಗತಿ. ಆದರೆ, ಅವರು ಡ್ಯಾನ್ಸ್​ ಕೂಡ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ?

ಗುಜರಾತ್​ನ ಭಾವ್​​ನಗರದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಗುಜರಾತ್​ನ ಜಾನಪದ ನೃತ್ಯವಾದ 'ತಲ್ವಾರ್ ರಾಸ್​' ನೃತ್ಯಕ್ಕೆ ಸಚಿವೆ ಸ್ಮೃತಿ ಇರಾನಿ ಕೂಡ ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ತಮ್ಮ ಎರಡು ಕೈಯಲ್ಲಿ ಕತ್ತಿಗಳನ್ನು ಹಿಡಿದು ಅವರು ನೃತ್ಯ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.



ಕಡುನೀಲಿ ಬಣ್ಣದ ಸೀರೆಯುಟ್ಟು ವೇದಿಕೆಯ ಮೇಲೆ ಎರಡೂ ಕೈಗಳಲ್ಲಿ ಖಡ್ಗಗಳನ್ನು ಹಿಡಿದು ಸ್ಮೃತಿ ಇರಾನಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೇಂದ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಸ್ಮೃತಿ ಇರಾನಿ ಮಕ್ಕಳ ಜೊತೆಗೆ ನೃತ್ಯ ಮಾಡಿದ್ದಾರೆ. ಗುಜರಾತ್​ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಈ ತಲ್ವಾರ್ ರಾಸ್ ಎಂಬ ಜಾನಪದ ನೃತ್ಯವನ್ನು ಮಾಡಲಾಗುತ್ತದೆ.
First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ