ಮುಂಬೈ: ನ್ಯೂಸ್18 ರೈಸಿಂಗ್ ಇಂಡಿಯಾ (Rising India) ಶೃಂಗಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ (Minister of External Affairs) ಸಚಿವ ಜೈಶಂಕರ್ (Jaishankar) ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಫಿಟ್ನೆಸ್ (Fitness) ಅವರ ಕೆಲಸ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಫಿಟ್ನೆಸ್ ಕಾಯ್ದುಕೊಳ್ಳಲು ದೆಹಲಿಯಲ್ಲಿ (Delhi) ತಂಗುವ ಸಂದರ್ಭದಲ್ಲಿ ಸ್ಕ್ವಾಷ್ (Squash) ಮತ್ತು ಬ್ಯಾಡ್ಮಿಂಟನ್ (Badminton) ಆಡುತ್ತೇನೆ ಎಂದು ಜೈಶಂಕರ್ ತಿಳಿಸಿದ್ದಾರೆ. ಇದು ಅವರ ಕೆಲಸದಲ್ಲಿ ಸ್ಪರ್ಧಾತ್ಮಕವಾಗಿ (Competitive) ಕಾರ್ಯನಿರ್ವಹಿಸಲು ನೆರವಾಗುತ್ತದೆ. ಒಂದು ದಶಕದಿಂದಲೂ ಯೋಗ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಫಿಟ್ನೆಸ್ ಕಾಯ್ದುಕೊಳ್ಳಲು ಸ್ಕ್ವಾಷ್ ಮತ್ತು ಬ್ಯಾಡ್ಮಿಂಟನ್ ಆಡುತ್ತೇನೆ
ನಾನು ಫಿಟ್ ಆಗಿರಲು ಸದಾ ಪ್ರಯತ್ನಿಸುತ್ತೇನೆ. ಏಕೆಂದರೆ ಹೆಚ್ಚು ಪ್ರಯಾಣ, ವಿವಿಧ ಟೈಂ ಝೋನ್ಗಳಲ್ಲಿ ಪ್ರವಾಸ ಮಾಡುವ ಕಾರಣ ಊಟ ಮಾಡುವುದಕ್ಕೂ ನಿಗದಿತ ವೇಳಾಪಟ್ಟಿಯನ್ನು ಫಾಲೋ ಮಾಡುತ್ತೇನೆ. ಫಿಟ್ನೆಸ್ ಕಾಯ್ದುಕೊಳ್ಳಲು ಸ್ಕ್ವಾಷ್ ಮತ್ತು ಬ್ಯಾಡ್ಮಿಂಟನ್ ಆಡುತ್ತೇನೆ. ಪ್ರಯಾಣದ ಸಮಯದಲ್ಲಿ ಯೋಗ ಮಾಡುವ ಅಭ್ಯಾಸ ರೂಡಿಸಿಕೊಂಡಿದ್ದೇನೆ. ಒಂದು ದಶಕದ ಹಿಂದೆ ಯೋಗ ಮಾಡುವ ಅಭ್ಯಾಸ ಆರಂಭಿಸಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Rising India: ಭಾರತದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು: ಸಚಿವ ಜೈಶಂಕರ್
ಫಿಟ್ ಇಲ್ಲ ಅಂದ್ರೆ ನೀವು ವಿಶ್ವಾಸದಿಂದ ಇಲ್ಲ ಎಂದರ್ಥ
ಬೇರೆ ಪ್ರದೇಶಗಳಲ್ಲಿ ಜಿಮ್ ಸೌಲಭ್ಯ ಲಭ್ಯವಾದರೆ ಅಲ್ಲಿಯೂ ವರ್ಕ್ಔಟ್ ಮಾಡುತ್ತೇನೆ. ಫಿಟ್ನೆಸ್ ಒಂದು ರೀತಿಯ ಸ್ಪರ್ಧಾತ್ಮಕತೆಗೆ ಪ್ರೇರಣೆ ನೀಡುತ್ತದೆ. ನಿಮ್ಮ ಬಗ್ಗೆ ನೀವು ವಿಶ್ವಾಸದಿಂದ ಇಲ್ಲ ಎಂದರೆ ನೀವು ಏನು ಮಾಡಲು ಸಾಧ್ಯವಿಲ್ಲ. ನೀವು ಅತ್ಯುತ್ತಮ ಪ್ರದರ್ಶನ ನೀಡಲು ಫಿಟ್ನೆಸ್ ಬಹುಮುಖ್ಯ ಎಂದು ಜೈಶಂಕರ್ ವಿವರಿಸಿದ್ದಾರೆ.
How do you see this new found 'social media' stardom? Union Minister S Jaishankar (@DrSJaishankar) answers at #News18RisingIndia
He also talks about his 'fitness regime' @Zakka_Jacob | #SocialMedia #SJaishankar #foreignMinister pic.twitter.com/IC3UsTzI7R
— News18 (@CNNnews18) March 29, 2023
ದೇಶದಲ್ಲಿ ನಾವು ಎರಡೂ ಫಿಟ್ನೆಸ್ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ಆದ್ದರಿಂದ ನಾನು ಫಿಟ್ ಇಂಡಿಯಾ ಹಾಗೂ ಖೇಲೋ ಇಂಡಿಯಾಗೆ ಬೆಂಬಲ ನೀಡುತ್ತೇನೆ. ಕಳೆದ ಒಂದು ದಶಕದಿಂದ ದೇಶದ ಯುವ ಸಮುದಾಯದಲ್ಲಿ ಫಿಟ್ನೆಸ್ ಬಗ್ಗೆ ಅರಿವು ಗಣನೀಯವಾಗಿ ಹೆಚ್ಚಾಗಿದೆ ಎಂದು ಜೈಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಫಿಟ್ ಆಗಿರುವ ಜನರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ನಾವು ನ್ಯೂ ಇಂಡಿಯಾ ಎಂಬ ಪದವನ್ನು ಸದ್ಯ ರಾಜಕೀಯದಲ್ಲಿ ಬಳಸುತ್ತಿದ್ದೇವೆ. ನನಗೆ ನ್ಯೂ ಇಂಡಿಯಾ ಎಂದರೆ ಫಿಟ್ ಇಂಡಿಯಾ, ಕಾಂಪಿಟೇಟಿವ್ ಇಂಡಿಯಾ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ನೆಚ್ಚಿನ ಮೂವರು ಕ್ರಿಕೆಟಿಗರು ಯಾರು ಎಂಬುವುದನ್ನು ಜೈಶಂಕರ್ ತಿಳಿಸಿದ್ದಾರೆ. ಅಲ್ಲದೆ, ಮೂವರು ಆಟಗಾರರನ್ನು ಆಕ್ರಮಣಕಾರಿ, ಶಾಂತ ಹಾಗೂ ಸಹಿಷ್ಣುತೆಯ ಸಂಕೇತಗಳಾಗಿ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಎದುರಾಳಿ ತಂಡದ ವಿರುದ್ಧ ಅಕ್ರಮಣಕಾರಿಯಾಗಿ ಬ್ಯಾಟ್ ಮಾಡುವ ಟೀಂ ಇಂಡಿಯಾ ಮಾಜಿ ಸ್ಟಾರ್ ವೀರೇಂದ್ರ ಸೆಹ್ವಾಗ್, ಒತ್ತಡ ಸಂದರ್ಭದಲ್ಲೂ ತಾಳ್ಮೆಯಿಂದ ಇರುವ ಎಂಎಸ್ ಧೋನಿ ಹಾಗೂ ಸಹಿಷ್ಣುತೆಯ ಆಟಗಾರನಾಗಿ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ನೆಚ್ಚಿನ ಆಟಗಾರ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ